Thursday, March 28, 2024
spot_imgspot_img
spot_imgspot_img

ವಿಟ್ಲ: ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ತಿನ ಸಭೆ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆ ಇದರ ಸಭೆಯು ಪರಿಷತ್ತಿನ ಅಧ್ಯಕ್ಷರಾದ ಕೃಷ್ಣಯ್ಯ ಕೆ. ಅರಮನೆ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 05.01.21 ಮಂಗಳವಾರ ಸಂಜೆ ನಡೆಯಿತು.

ಪರಿಷತ್ತಿನ ಪ್ರಮುಖರಾದ ಜಯರಾಮ ಬಲ್ಲಾಳ್ ಅರಮನೆ ವಿಟ್ಲ, ಪ್ರಸಾದ್ ಅರಮನೆ ವಿಟ್ಲ, ಶೀನಪ್ಪ ನಾಯ್ಕ್ ಮಂಗಿಲಪದವು, ದಿನೇಶ್ ಮಾಮೇಶ್ವರ, ದಿನೇಶ್ ಶೆಟ್ಟಿ ಪಟ್ಲ, ರಾಜೇಶ್ ಆರ್.ಕೆ ವಿಟ್ಲ, ಜಯರಾಮ್ ನಾಯ್ಕ್ ಕುಂಟ್ರಕಲ, ಜನಾರ್ಧನ ಪಧ್ಮಶಾಲಿ, ಕಾರ್ತಿಕ್ ಕೆ., ಭಾಸ್ಕರ ಕಾಮಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ವಲಯದ ಮೇಲ್ವಿಚಾರಕರದ ರಮೇಶ್ ಹಾಗೂ ಭಜನಾ ಮಂಡಳಿಗಳ ಪ್ರಮುಖರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಕೆಳಗಿನ ತೀರ್ಮಾನಗಳನ್ನು ಕೈಗೊಳ್ಳಲಾಯಿತು: ಪರಿಷತ್ತಿನ ತೃತೀಯ ವಾರ್ಷಿಕೋತ್ಸವದ ನಿಮಿತ್ತ ವಿಟ್ಲ ಜಾತ್ರೆಯ ಧ್ವಜಾರೋಹಣದಂದು (ಜನವರಿ 14 ಗುರುವಾರದಂದು) ವರ್ಷಂಪ್ರತಿಯಂತೆ ಬೆಳಿಗ್ಗೆಯಿಂದ ಸಂಜೆವರೆಗೆ ಅರ್ಧ ಏಕಾಹ ಭಜನೆ, ಸಂಜೆ ವಿಟ್ಲ ಬಸದಿಯಿಂದ ಭಜನಾ ಉಲ್ಪೆ ಮೆರವಣಿಗೆ ನಡೆಸುವುದು.

ಜಾತ್ರೆಯ ಪ್ರತೀ ದಿನ ಸಂಜೆ ಗಂಟೆ 5 ರಿಂದ 6.30ರವರೆಗೆ ಒಂದೊಂದು ತಂಡದಿಂದ ಭಜನಾ ಸೇವೆ ನಡೆಸುವುದು. ಅರ್ಧ ಏಕಾಹ ಭಜನೆಯನ್ನು ದೇವಸ್ಥಾನದ ಹೊರಾಂಗಣದಲ್ಲಿ ಹಾಗೂ ಜಾತ್ರಾ ದಿನದ ಭಜನೆಯನ್ನು ದೇವಸ್ಥಾನದ ಒಳಾಂಗಣದಲ್ಲಿ ನಡೆಸುವುದು. ಭಜನಾ ಉಲ್ಪೆಮೆರವಣಿಗೆ ಶಿಸ್ತು ಬದ್ಧವಾಗಿ ನಡೆಸುವ ಉದ್ದೇಶಕ್ಕಾಗಿ ಸ್ವಯಂಸೇವಕರನ್ನು ನೇಮಿಸುವುದು, ಸ್ವಯಂ ಸೇವಕರಿಗೆ ಬ್ಯಾಡ್ಜ್ ನೀಡುವುದು.

ವಿಟ್ಲ ಸೀಮೆಯ ಭಜನಾ ತಂಡಗಳಿಗೆ ಆಮಂತ್ರಣ ಅಂಚೆ ಮುಖೇನ ಕಳುಹಿಸುವುದು. ದೇವಸ್ಥಾನದಲ್ಲಿ ಮುಂದಕ್ಕೆ ವರ್ಷದ ಪ್ರತೀ ಸೋಮವಾರ ಸಂಜೆ ಗಂಟೆ 5ರಿಂದ 7ರವರೆಗೆ ಒಂದೊಂದು ತಂಡದಿಂದ ಭಜನಾ ಸೇವೆ ನಡೆಯುವಂತೆ ನೋಡಿಕೊಳ್ಳುವುದು.

ಸೂಚನೆ: ಭಜನಾ ಉಲ್ಪೆಮೆರವಣಿಗೆಯಲ್ಲಿ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಲು ಭಜನಾ ತಂಡದ ಪ್ರಮುಖರು ಮುಂದೆ ಬರುವಂತೆ ವಿನಂತಿಸಿದ್ದಾರೆ. ಸ್ವಯಂಸೇವಕರಾಗಿ ಬರುವವರು ಪರಿಷತ್ತಿನ ಜೊತೆ ಕೋಶಾಧಿಕಾರಿ ಭಾಸ್ಕರ ಕಾಮಟ: 7349491924 ಇವರನ್ನು ಸಂಪರ್ಕಿಸಬೇಕಾಗಿ ತಿಳಿಸಿದ್ದಾರೆ.

ಅರ್ಧ ಏಕಾಹ ಹಾಗೂ ಜಾತ್ರೆಯ ಪ್ರತೀ ದಿನದ ಭಜನಾ ಸೇವೆ ನಡೆಸಲು ಸುಮಾರು 16 ತಂಡಗಳ ಅವಶ್ಯಕತೆ ಇದ್ದು, ಭಜನಾ ಸೇವೆ ನಡೆಸಲು ಬಯಸುವ ತಂಡಗಳು ಪರಿಷತ್ತಿನ ಜೊತೆಕಾರ್ಯದರ್ಶಿ ಜಯರಾಮ್ ನಾಯ್ಕ್ ಕುಂಟ್ರಕಲ: 8971414068 ಇವರನ್ನು ಸಂಪರ್ಕಿಸಬೇಕಾಗಿ ತಿಳಿಸಿದ್ದಾರೆ.

ಭಜನಾ ಮಂಡಳಿಗೆ ಆಮಂತ್ರಣ ಕಳುಹಿಸುವ ಜವಾಬ್ದಾರಿಯನ್ನು ಪರಿಷತ್ತಿನ ಸಂಚಾಲಕರಾದ ದಿನೇಶ್ ಮಾಮೇಶ್ವರ ಇವರಿಗೆ ವಹಿಸಲಾಗಿದೆ. ದಿನಾಂಕ 13.01.21 ಬುಧವಾರ ತಯಾರಿ ಕೆಲಸ ಇರುವುದರಿಂದ ಸಂಜೆ 5 ಗಂಟೆಗೆ ಎಲ್ಲಾ ಮಂಡಳಿಗಳ ಒಬ್ಬರಾದರೂ ದೇವಸ್ಥಾನಕ್ಕೆ ಬರಬೇಕಾಗಿ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ ಇದರ ಪ್ರಮುಖರು ತಿಳಿಸಿದ್ದಾರೆ.

- Advertisement -

Related news

error: Content is protected !!