- Advertisement -
- Advertisement -
ವಿಟ್ಲ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಸಿದ್ದಿವಿನಾಯಕ ಯುವಕ ಮಂಡಲ(ರಿ.) ‘ಧರ್ಮನಗರ ಇವರ ನೇತೃತ್ವದಲ್ಲಿ ಶ್ರೀ ಜಯದುರ್ಗಾಪರಮೇಶ್ವರಿ ಭಜನಾ ಮಂಡಳಿ ಧರ್ಮನಗರದ ಸಹಯೋಗದೊಂದಿಗೆ ‘ಕುಣಿತ ಭಜನಾ ಸ್ಪರ್ಧೆ-2026’ ಜನವರಿ 4ರ ಆದಿತ್ಯವಾರದಂದು ಸಂಜೆ 3 ಗಂಟೆಯಿಂದ ಸಮಾಜ ಮಂದಿರ ಧರ್ಮನಗರ ಕಂಬಳಬೆಟ್ಟು ಇಲ್ಲಿ ನಡೆಯಲಿದೆ.

ವಿಜೇತರು ಪ್ರಥಮ ಬಹುಮಾನ-10,000, ದ್ವಿತೀಯ ಬಹುಮಾನ-7,000, ತೃತೀಯ ಬಹುಮಾನ-5,000, ಚತುರ್ಥ ಬಹುಮಾನ- 3,000 ರೂ. ಗಳನ್ನು ಬಹುಮಾನವಾಗಿ ಪಡೆದುಕೊಳ್ಳಲಿದ್ದಾರೆ.
ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ…
- ಮೊದಲು ಹೆಸರು ನೋಂದಾಯಿಸಿದ ನಿರ್ದಿಷ್ಟ ತಂಡಗಳಿಗೆ ಅವಕಾಶ
- ಒಂದು ತಂಡಕ್ಕೆ ಶ್ಲೋಕ ಭಜನೆ ಮಂಗಳ ಗೀತೆ ಸೇರಿ 15 ನಿಮಿಷ ಕಾಲಾವಕಾಶ
- ಒಂದೇ ಸುತ್ತಿನಲ್ಲಿ ಸ್ಪರ್ಧೆಗಳಿರುತ್ತವೆ
- ಒಂದು ತಂಡದಲ್ಲಿ ಗರಿಷ್ಠ 12 ಜನ ಸದಸ್ಯರಿಗೆ ಅವಕಾಶ
- ಕುಣಿಯುವ ಸದಸ್ಯರೇ ಭಜನೆಯನ್ನು ಹೇಳಬೇಕು
- ಹಿಮ್ಮೇಳದಲ್ಲಿ ಅಗತ್ಯವಿದ್ದರೆ ಸಂಗೀತವಾದ್ಯಗಳನ್ನು ಬಳಸಬಹುದು ಆದರೆ ಅಂಕಗಳಿರುವುದಿಲ್ಲ
- ಭಾಗವಹಿಸುವ ತಂಡಕ್ಕೆ ಸಮವಸ್ತ್ರ ಕಡ್ಡಾಯ
- ಒಬ್ಬ ಸದಸ್ಯನಿಗೆ ಒಂದು ಭಜನೆಯನ್ನು ಹಾಡಲು ಮಾತ್ರ ಅವಕಾಶ
- ರಾಗ, ತಾಳ, ಟಮ್ಮಿ ಬಾರಿಸುವಿಕೆ, ಕುಣಿತದ ಸಂಯೊಂಜನೆ, ಗುಂಪು ಸ್ವರ, ತಂಡದ ಆಗಮನ, ಭಜನೆ ಪ್ರಾರಂಭ, ಮುಕ್ತಾಯ, ಹಾಡಿನ ಆಯ್ಕೆ ಈ ಅಂಶಗಳನ್ನು ಪರಿಗಣಿಸಿ ಅಂಕ ನೀಡಲಾಗುವುದು
- ನೊಂದಣಿ ಶುಲ್ಕ ರೂ 200 ನೀಡಿ ತಮ್ಮ ತಂಡದ ಹೆಸರನ್ನು ನೊಂದಾಯಿಸಬೇಕು… ಕಾರ್ಯಕ್ರಮದ ದಿನ ಸಮಯಕ್ಕೆ ಮುಂಚಿತವಾಗಿ ( 3.30 pm )ತಂಡದ 12 ಜನರೂ ಆಗಮಿಸಿದಲ್ಲಿ ನೊಂದಣಿ ಶುಲ್ಕ ವಾಪಸು ನೀಡಲಾಗುವುದು..
- ಭಾಗವಹಿಸಿದ ಎಲ್ಲಾ ಸ್ಪರ್ಧಾ ತಂಡಗಳಿಗೆ ಸರ್ಟಿಫಿಕೇಟ್ ನೀಡಲಾಗುವುದು
- ರಾತ್ರಿ 8 ರಿಂದ ಊಟದ ವ್ಯವಸ್ಥೆ ಇರುತ್ತದೆ
- ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಹೆಚ್ಚಿನ ವಿವರಗಳಗಾಗಿ 9740848160 ಅಥವಾ 9663692414 ಈ ನಂಬರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
- Advertisement -








