Friday, May 3, 2024
spot_imgspot_img
spot_imgspot_img

ವಿಟ್ಲ: ಚರ್ಚ್ ವತಿಯಿಂದ ಬಡ ಕುಟುಂಬಗಳಿಗೆ ಒಟ್ಟು 2.5 ಲಕ್ಷ ಮೊತ್ತದ ಕಿಟ್ ವಿತರಣೆ!

- Advertisement -G L Acharya panikkar
- Advertisement -

ವಿಟ್ಲ: ಶೋಕಮಾತೆಯ ಇಗರ್ಜಿ, ಕಥೋಲಿಕ್ ಸಭಾ ಮೊಗರ್ನಾಡು ವಲಯ ಹಾಗೂ ಕಥೋಲಿಕ್ ಸಭಾ ವಿಟ್ಲ ಇದರ ವತಿಯಿಂದ ಮೊಗರ್ನಾಡು ವಲಯದ ಎಲ್ಲಾ ಇಗರ್ಜಿಗಳಿಗೆ ತಲಾ 26 ರಂತೆ ಒಟ್ಟು 2.5 ಲಕ್ಷ ಮೊತ್ತದ ಆಹಾರ ಸಾಮಾಗ್ರಿಗಳನ್ನು ನೀಡಲಾಯಿತು.

ವಿಟ್ಲ ಚರ್ಚ್ ನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಲ್ಲಾ ಇಗರ್ಜಿಗಳ ಬಡ ಕುಟುಂಬಗಳಿಗೆ ಈ ಸಾಮಾಗ್ರಿಗಳನ್ನು ನೀಡಲಾಗುವುದು ಎಂದು ವಿಟ್ಲ ಚರ್ಚ್ ನ ಧರ್ಮಗುರು ಫಾ| ಐವನ್ ಮೈಕಲ್ ರೋಡ್ರಿಗಸ್ ಹೇಳಿದರು.

ಈ ಸಂದರ್ಭದಲ್ಲಿ ದೇಲಂತಬೆಟ್ಟು ಚರ್ಚ್ ನ ಧರ್ಮಗುರು ಫಾ| ಸುನಿಲ್ ಪಿಂಟೊ, ಕಥೋಲಿಕ್ ಸಭಾ ಮೊಗರ್ನಾಡು ವಲಯದ ಅಧ್ಯಕ್ಷ ಲೂವಿಸ್ ಮಸ್ಕರೇನಸ್, ವಿಟ್ಲ ಘಟಕದ ಅಧ್ಯಕ್ಷ ಮೆಲ್ವಿನ್ ರೋಡ್ರಿಗಸ್, ವಿಟ್ಲ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮನೋಹರ್ ಲ್ಯಾನ್ಸಿ ಡಿಸೋಜಾ ಹಾಗೂ ವಲಯದ ಇತರ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!