- Advertisement -
- Advertisement -


ವಿಟ್ಲ: ಕಂಬಳಬೆಟ್ಟು ದ .ಕ .ಜಿ .ಪಂ .ಉನ್ನತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು .

ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ ಪುನೀತ್ ಮಾಡತ್ತಾರ್ ಅವರು ಶಾಲಾ ಮಕ್ಕಳಲ್ಲಿ ಕ್ರೀಡೆಯ ಜೊತೆಗೆ ಶಿಕ್ಷಣದ ಮಹತ್ವವನ್ನು ತಿಳಿಸಿದರು. ಸಭೆಯಲ್ಲಿ ಪಂಚಾಯತ್ ನಿಕಟಪೂರ್ವ ಅದ್ಯಕ್ಷ ಜಯಪ್ರಕಾಶ್ ನಾಯಕ್ , ಸದಸ್ಯರಾದ ಮಹಾಭಲೇಶ್ವರ್ ಭಟ್, ಲೋಕೇಶ್ ನಾಟೆಕಲ್ಲು, ಸಿಧ್ದೀಕ್ , ಶ್ರೀಮತಿ ಸಾಬಿರ , ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಸುಜಯ , ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ರೆಹಿಮಾನ್ , ಶಾಲಾ ಮುಖ್ಯೊಪಾಧ್ಯಾಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
- Advertisement -








