Saturday, May 4, 2024
spot_imgspot_img
spot_imgspot_img

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಗೆ ಜಿಲ್ಲಾ ಗವರ್ನರ್ ಭೇಟಿ ಕಾರ್ಯಕ್ರಮ

- Advertisement -G L Acharya panikkar
- Advertisement -

ಲಯನ್ಸ್ ಕ್ಲಬ್ ವಿಟ್ಲ ಸಿಟಿ ಆಶ್ರಯದಲ್ಲಿ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿಸೋಜ PMJF ಇವರ ಅಧಿಕೃತ ಭೇಟಿ ಕಾರ್ಯಕ್ರಮ ವಿಟ್ಲ ಜೂನಿಯರ್ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.

ಲಯನ್ಸ್‌ ಕ್ಲಬ್ ವಿಟ್ಲ ಸಿಟಿಯ ಅಧ್ಯಕ್ಷ ಲ. ಜಯರಾಮ್‌ ಬಲ್ಲಾಳ್‌ ವಿಟ್ಲ ಅರಮನೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿಸೋಜ PMJF ರವರು ಮಾತನಾಡಿ ಶುಭಹಾರೈಸಿದರು.

ವೇದಿಕಯಲ್ಲಿ ಸಂಪುಟ ಕಾರ್ಯದರ್ಶಿ ಲ.ಓಸ್ವರ್ಡ್ ಡಿ ಸೋಜ, ವಲಯಾಧ್ಯಕ್ಷ ಲ. ಡೊನಾಲ್ಡ್‌, ಲ.ಯೂಜಿನ್‌, ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ಲ. ಸುದರ್ಶನ್ ಪಡಿಯಾರ್‌, ಕಾರ್ಯದರ್ಶಿ ಲ. ಶ್ವೇತಾ ರವಿಕುಮಾರ್‍, ಕೋಶಾಧಿಕಾರಿ ಲ. ಒ.ಎ ಕೃಷ್ಣ, ಲ. ಸತೀಶ್‌ ಕುಮಾರ್‌ ಆಳ್ವ ಇರಾಬಾಳಿಕೆ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಎಸ್‌ಟಿ ಕಾರ್ಡಿನೇಟರ್‍ ಲ. ಜಗದೀಶ್‌ ಎಡಪಡಿತ್ತಾಯ ದಂಪತಿ, ಜಿಲ್ಲಾ ಪ್ರಧಾನ ಅಧ್ಯಕ್ಷೆ -ವಿಷನ್ ಸ್ವರೂಪ ಎನ್ ಶೆಟ್ಟಿ ಮಂಗಳೂರು, ಲಯನ್ಸ್ ಕ್ಲಬ್ ಕಾವೂರು ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ತಾರನಾಥ ಕೊಪ್ಪ, ಲ.ಲ್ಯಾನ್ಸಿ ಕಾರ್ಲೋ ಬಲ್ಮಠ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಯ ಸದಸ್ಯರಾದ ಸಾಯಿ ಗೀತಾ ಪಡಿಯಾರ್, ರಾಘವ ಗೌಡ , ವಿಟ್ಲ, ಲಯನ್ಸ್ ಕ್ಲಬ್ ನ ಸದಸ್ಯೆ ವಿನ್ನಿ ಮಸ್ಕರೇನಸ್, ಮನೋಜ್ ಕುಮಾರ್, ಲಯನ್ಸ್‌ ಕ್ಲಬ್‌ ವಿಟ್ಲ ಸಿಟಿಯ ಸದಸ್ಯರು, ಪುತ್ತೂರು, ಬಂಟ್ವಾಳ, ಪುತ್ತೂರ್‍ದ ಮುತ್ತು ಹಲವು ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಧಾರ್ಮಿಕ ದತ್ತು ಪರಿಷತ್‌ ಸದಸ್ಯೆ ಶ್ರೀಮತಿ ಮಲ್ಲಿಕಾ ಪಕಳ ಮತ್ತು ನಾಟಿವೈದ್ಯ ಜಾನ್ಸಿನ್‌ ರಸ್ಕಿನಿಯಾ, ಮತ್ತು ಎಲ್ಲಾ ರೀತಿಯ ಸಹಕಾರವನ್ನಿತ್ತ ವಸಂತ ಶೆಟ್ಟಿ ಎರ್ಮಿನಿಲೆ, ರೋಹನ್‌ ಗೌಡ, ರವಿಕುಮಾರ್‌, ಮಾಜಿ ಗವರ್ನರ್ ಲ. ಗೀತಾಪ್ರಕಾಶ್ ರವರನ್ನು ಗೌರವಿಸಲಾಯಿತು. ಹಾಗೂ ಸತತವಾಗಿ ಕಳೆದ ಕೆಲ ವರ್ಷಗಳಿಂದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುತ್ತಿರುವ ವಿಟ್ಲದ ವೀಣಾ ಶೆಟ್ಟಿ ಮತ್ತು ತಂಡದವರನ್ನು ಅಭಿನಂದಿಸಲಾಯಿತು.

ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ಲ. ಸುದರ್ಶನ್ ಪಡಿಯಾರ್‌ ಸ್ವಾಗತಿಸಿ, ಕಾರ್ಯದರ್ಶಿ ಲ. ಶ್ವೇತಾ ರವಿಕುಮಾರ್‍ ವಂದಿಸಿದರು. ಸಂದೇಶ್‌ ಶೆಟ್ಟಿ ಬಿಕ್ನಾಜೆ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್‌ ಕ್ಲಬ್‌ ವಿಟ್ಲ ಸಿಟಿಯ ಸದಸ್ಯರಾದ ಮೋಹನ್‌ ಕಟ್ಟೆ, ದಿನಕರ ಆಳ್ವ, ಸುರೇಶ್‌ ಬನಾರಿ, ಧರ್ನಪ್ಪ ಗೌಡ, ಚಂದ್ರಹಾಸ ಗೌಡ, ಸದಾನಂದ ಗೌಡ ಸೇರಾಜೆ, ಸೇರಿದಂತೆ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು.

- Advertisement -

Related news

error: Content is protected !!