Saturday, May 4, 2024
spot_imgspot_img
spot_imgspot_img

ವಿಟ್ಲ: ದ.ಕ ಶಾಮಿಯಾನ ಮಾಲಕರ ಸಂಘ(ರಿ) ವಿಟ್ಲ ಘಟಕದ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ದ.ಕ ಶಾಮಿಯಾನ ಮಾಲಕರ ಸಂಘ(ರಿ) ವಿಟ್ಲ ಘಟಕದ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಇಂದು(ಆ.23) ಭಾರತ್‌ ಸಭಾಭವನ ಕಲ್ಲಕಟ್ಟ ವಿಟ್ಲದಲ್ಲಿ ನಡೆಯಿತು. ಬೆಳಿಗ್ಗೆ ನಡೆದ ಕ್ರೀಡೋತ್ಸವದ ಉದ್ಘಾಟನೆಯನ್ನು ಧ್ವಜಾರೋಹಣದ ಮೂಲಕ ಗೌರವಾಧ್ಯಕ್ಷ ಸಂಜೀವ ಪೂಜಾರಿ ವಿಟ್ಲ ನೆರವೇರಿಸಿದರು.

ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ವಿಟ್ಲ ಅರಮನೆಯ ಬಂಗಾರು ಅರಸರು ದೀಪ ಬೆಳಗಿಸಿ ಉದ್ಘಾಟಿಸಿದರು. ದ.ಕ ಶಾಮಿಯಾನ ಮಾಲಕರ ಸಂಘ(ರಿ) ಜಿಲ್ಲಾಧ್ಯಕ್ಷರು ಬಾಬು.ಕೆ ವಿಟ್ಲ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದೇಲಂತಬೆಟ್ಟು ಸಂತ ಪಾವುಲ್‌ ಇಗರ್ಜಿಯ ಧರ್ಮಗುರುಗಳಾದ ಸುನೀಲ್‌ ಪ್ರವೀಣ್ ಪಿಂಟೋ, ವಿಟ್ಲ ನೋಟರಿ ವಕೀಲ ಅಬೂಬಕ್ಕರ್‌,ದ.ಕ ಶಾಮಿಯಾನ ಮಾಲಕರ ಸಂಘ(ರಿ), ವಿಟ್ಲ ಘಟಕದ ಅಧ್ಯಕ್ಷರು ಚಂದ್ರಹಾಸ ಸುವರ್ಣ, ಲಯನ್ಸ್‌ ಜಿಲ್ಲೆ 317ಡಿ, ಪೂರ್ವ ಜಿಲ್ಲಾ ಗವರ್ನರ್‌ ಡಾ| ಗೀತಪ್ರಕಾಶ್‌, ದ.ಕ ಶಾಮಿಯಾನ ಮಾಲಕರ ಸಂಘ(ರಿ) ಕಾರ್ಯದರ್ಶಿ ನಿಶಿತ್‌ ಸುವರ್ಣ, ದ.ಕ ಶಾಮಿಯಾನ ಮಾಲಕರ ಸಂಘ(ರಿ) ಕೋಶಾಧಿಕಾರಿ ಬಾಲಕೃಷ್ಣ ಕದ್ರಿ ಭಾಗವಹಿಸಿದರು. M.S.Vಟೆಂಟ್‌ ವರ್ಕ್ಸ್ ಮಂಗಳೂರು ಲತೀಫ್‌, ಕರಾವಳಿ ಟೆಂಟ್‌ ವರ್ಕ್ಸ್ ಮಂಗಳೂರು, ರಶೀದ್‌, ಪೂನಿಯ ಟೆಂಟ್‌ ವರ್ಕ್ಸ್ ರಾಜೇಶ್‌ ಕುಮಾರ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಇಸ್ಮಾಯಿಲ್‌ ಬನಾರಿ ಮಾಡಿ, ಸ್ವಾಗತ ಭಾಷಣವನ್ನು ಪದ್ಮನಾಭ ಶೆಟ್ಟಿ ಕುಡ್ತಮುಗೇರು ನೆರವೇರಿಸಿದರು. ಕಾರ್ಯಕ್ರಮದ ಕೊನೆಗೆ ಇಕ್ಬಾಲ್‌ ಹಳೆಮನೆ ಧನ್ಯವಾದವಿತ್ತರು.

ಸಂಘದ ಸದಸ್ಯರಿಗೆ ಮತ್ತು ಕಾರ್ಮಿಕರಿಗೆ ಅಂಚೆ ಇಲಾಖೆಯ ವಿಮಾ ಸೌಲಭ್ಯ ಒದಗಿಸಿ ಕೊಡುವ ವ್ಯವಸ್ಥೆ ಇದೆ.
ವಿಮಾ ಸೌಲಭ್ಯಕ್ಕೆ ಬೇಕಾಗುವ ದಾಖಲೆಗಳು:
೧. ಆಧಾರ್‌ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆ
೨. ನಾಮಿನಿ ಹೆಸರು ಮತ್ತು ಆಧಾರ್‌ ಸಂಖ್ಯೆ

ನೂತನ ಪದಾಧಿಕಾರಿಗಳು

ಗೌರವಾಧ್ಯಕ್ಷರು: ಸಂಜೀವ ಪೂಜಾರಿ, ವಿಟ್ಲ,

ಅಧ್ಯಕ್ಷರು: ಚಂದ್ರಹಾಸ ಸುವರ್ಣ ವಿಟ್ಲ

ಉಪಾಧ್ಯಕ್ಷರು: ಪದ್ಮನಾಭ ಶೆಟ್ಟಿ ಕುಡ್ತಮುಗೇರು, ಇಸ್ಮಾಯಿಲ್ ಬನಾರಿ

ಕಾರ್ಯದರ್ಶಿ: ಪ್ರಶಾಂತ್ ಶೆಟ್ಟಿ, ಕುಂಡಡ್ಕ

ಜೊತೆ ಕಾರ್ಯದರ್ಶಿ: ರಂಜಿತ್ ಕೆಲಿಂಜ, ಆನಂದ ಅಡ್ಯನಡ್ಕ

ಕೋಶಾಧಿಕಾರಿ: ಇಬ್ರಾಹಿಂ ಖಲೀಲ್, ಪಟ್ಲ

ಸಂಘಟನಾ ಕಾರ್ಯದರ್ಶಿ: ಇಕ್ಬಾಲ್ ಹಳೆಮನೆ ವಿಟ್ಲ, ದಿನೇಶ್ ನಾಯ್ಕ ಪುಣಚ

ಕ್ರೀಡಾ ಕಾರ್ಯದರ್ಶಿ: ಶೇಖ್‌ ಸುಭಾನ್ ಮಂಗಳಪದವು, ಕೆ.ಆರ್ ಕುಮಾರ್ ಕನ್ಯಾನ

ಸಾಂಸ್ಕೃತಿಕ ಕಾರ್ಯದರ್ಶಿ: ರಾಜಶೇಖರ ಶೆಟ್ಟಿ ಕುಡ್ತಮುಗೇರು, ಲಿಂಗಪ್ಪ ಡಿ.ಟಿ., ಪುಣಚ

- Advertisement -

Related news

error: Content is protected !!