


ವಿಟ್ಲ: ಎರುಂಬು ಶ್ರೀ ಶಂಕರನಾರಾಯಣ ದೇವಸ್ಥಾನದ ಮಂಡಲ ಪೂಜಾ ಉತ್ಸವದ ಸಭಾ ಕಾರ್ಯಕ್ರಮ ಮತ್ತು ಮಡಿಯಾಲ ನಾರಾಯಣ ಭಟ್ ರಂಗ ಮಂಟಪದ ಲೋಕಾರ್ಪಣೆಯು ಜ.3ರಂದು ನಡೆಯಿತು.
ಅಧ್ಯಕ್ಷತೆಯನ್ನು ಬಂಗಾರು ಅರಸರು ವಿಟ್ಲ ಅರಮನೆ ವಹಿಸಿದ್ದರು. ಆಶೀರ್ವಚನ ಮತ್ತು ಉದ್ಘಾಟನೆ ನೆರವೇರಿಸಿದ ಎಡನೀರು ಮಠ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿ ಮಾತನಾಡಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ಲೋಕಾರ್ಪಣೆಯಾಗಿರುವುದು ಹೆಮ್ಮೆ. ದೇವಳದಲ್ಲಿ ಮಾಡಿದ ಸರ್ವ ಅರ್ಪಣೆ ಭಕ್ತರ ಅರ್ಪಣೆಯಾಗಿದೆ. ಇದರಿಂದ ಊರು ವಿಜೃಂಬಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಸಂಸ್ಕಾರ, ಸಂಪ್ರದಾಯಗಳ ವ್ಯವಸ್ಥೆ ಮಾತಿಗಲ್ಲ, ಅದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮ ಸಮರ್ಪಣಾ ಭಾವ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.
ಕೆಯ್ಯೂರು ನಾರಾಯಣ ಭಟ್, ಮುಖ್ಯ ಭಾಷಣಗಾರರಾಗಿ ಸಮಾಜದ ಅಯೋಮಯಗಳಿಗೆ ಪರಿಹಾರ ಕೊಟ್ಟ ಗುರು ಪರಂಪರೆ, ಸೀಮೆಯ ರಾಜ ಪರಂಪರೆ ಹಾಗೂ ಸಾಕ್ಷಿಯಾದ ಭಕ್ತರ ಸಹಕಾರದ ವೇದಿಕೆ ಪವಿತ್ರ. ಹಾಗೆಯೇ ದೇವಾಲಯ, ಶ್ರದ್ದಾಕೇಂದ್ರಗಳಲ್ಲಿ ನಿಯಮಗಳ ಪಾಲನೆ ಮಾಡುವ ಪ್ರಯತ್ನ ಅಗತ್ಯ. ಸಮಾಜದ ಸಾಮರಸ್ಯಕ್ಕೆ ಕೊರತೆ ತರುವ ಕೃತ್ಯ ಸಲ್ಲದು. ಜ್ಞಾನ ಆನಂದವನ್ನು ತರುತ್ತದೆ ಅದರ ಸಂಪಾದನೆಗೆ ನಾವು ತೊಡಗಿಸಿಕೊಳ್ಳಬೇಕು ಎಂದರು. ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ಭಟ್, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಸಣ್ಣಗುತ್ತು ಪದ್ಮನಾಭ ಪೂಜಾರಿ, ದಂಬೆಕಾನ ಪ್ರಭಾಕರ ಶೆಟ್ಟಿ, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ಸತ್ಯ ಸಾಯಿ ವಿದ್ಯಾ ಸಂಸ್ಥೆ ಅಳಿಕೆಯ ಮ್ಯಾನೇಜಿಂಗ್ ಟ್ರಸ್ಟಿ ಕೆ. ಎಸ್.ಕೃಷ್ಣ ಭಟ್, ಕೃಷಿಕರು ಮತ್ತು ಸಾಮಾಜಿಕ ಕಾರ್ಯಕರ್ತರು ಮುಳಿಯ ನಾರಾಯಣ ಭಟ್, ಅರ್ಚಕರಾದ ನರಸಿಂಹ ಕಾರಂತ, ನಿವೃತ್ತ ಅಧ್ಯಾಪಕರು, ದಾಖಲೆ ನಿರ್ವಾಹಕರು ಮುಳಿಯ ನರಸಿಂಹ ಭಟ್, ಎ. ಪಿ. ಗೋಪಾಲ ಎರುಂಬು ದೇವಳದ ನಿರ್ವಹಣಾ ಸೇವಕ, ಉದ್ಯಮಿ ಹಾಗೂ ದಾನಿಗಳಾದ ಮಿತ್ತಳಿಕೆ ಸೂರ್ಯನಾಥ ಆಳ್ವ, ಮೆಣಸಿನಗಂಡಿ ಚಂದ್ರಹಾಸ ಕುಲಾಲ್, ಮುಳಿಯ ಗುತ್ತು ಸಂಕಪ್ಪ ಶೇಖ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಿವೃತ್ತ ಅಧ್ಯಾಪಕರಾದ ಲಿಂಗಪ್ಪ ಗೌಡ, ಕಾನ ಈಶ್ವರ ಭಟ್, ಎ.ಪಿ. ಜಯರಾಮ, ಸೀತಾರಾಮ ಶೆಟ್ಟಿ ಕುಡಾಲುಗುತ್ತು, ಡಾ. ಮಹಾಲಿಂಗ ಭಟ್, ಶಿಕ್ಷಕ ಪ್ರವೀಣ್ ಶೆಟ್ಟಿ, ಅಕ್ಷಯ ಕೊಲ್ಯ ಸನ್ಮಾನ ಪತ್ರ ವಾಚಿಸಿದರು.

ಈ ಸಂದರ್ಭದಲ್ಲಿ ಕುಮಾರಿ ದಿವ್ಯನಿಧಿ ರೈ ಎರುಂಬು ಇವರ ಸಿರಿಕಂಠದ ‘ಮಂಡಲದುಚ್ಚಯ’ ಎಂಬ ಧ್ವನಿಸುರುಳಿ ಬಿಡುಗಡೆ ಗೊಳಿಸಲಾಯಿತು. ವೇದಿಕೆಯ ಕಾಮಗಾರಿಯಲ್ಲಿ ತೊಡಗಿಕೊಂಡ ರಾಮಚಂದ್ರ ಮಣಿಯಣಿ, ರಮೇಶ್ ನಾಯಕ್, ಗಿರೀಶ್ ಎರುಂಬು, ಸುರೇಶ್ ಪೆರುವಾಯಿ ಯವರನ್ನು ಗೌರವಿಸಲಾಯಿತು.
ಮಧುಶ್ರೀ ಎರುಂಬು ಪ್ರಾರ್ಥಿಸಿದರು. ಡಾ.ಮಹಾಲಿಂಗ ಭಟ್ ಬಿಲ್ಲoಪದವು ಸ್ವಾಗತಿಸಿ ಪ್ರಸ್ಥಾವಿಕ ಮಾತನಾಡಿದರು. ವಂದನಾರ್ಪಣೆಯನ್ನು ನಿವೃತ್ತ ಶಿಕ್ಷಕರಾದ ಲಿಂಗಪ್ಪ ಗೌಡರವರು ನೆರವೇರಿಸಿಕೊಟ್ಟರು. ರಾಜೇಂದ್ರ ರೈ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.