Friday, April 26, 2024
spot_imgspot_img
spot_imgspot_img

ವಿಟ್ಲದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ಡಿವೈಎಫ್ ಐ ಪ್ರತಿಭಟನೆ

- Advertisement -G L Acharya panikkar
- Advertisement -

ವಿಟ್ಲ : ವಿಟ್ಲ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ಸರಕಾರಿ ಆಸ್ಪತ್ರೆ ಗಳನ್ನು ಬಲಪಡಿಸಿ ಖಾಸಗಿ ಆಸ್ಪತ್ರೆ ಗಳನ್ನು‌ ನಿಯಂತ್ರಿಸಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ, ಖಾಸಗಿ ಆಸ್ಪತ್ರೆ ಗಳ ಲೂಟಿಕೋರ ನೀತಿಯನ್ನು ಖಂಡಿಸಿ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ಗಾಗಿ ಇಂದು ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ವತಿಯಿಂದ ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ದ ಮುಂದೆ ಪ್ರತಿಭಟನೆ ನಡೆಯಿತು ಪ್ರತಿಭಟನೆಯನ್ನುದ್ದೇಶಿಸಿ ಡಿ.ವೈ.ಎಫ್.ಐ ಮಾಜಿ ರಾಜ್ಯಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಸರಕಾರಗಳು ಖಾಸಗಿ‌ ಆಸ್ಪತ್ರೆ ಗಳ ಏಜೆಂಟರಾಗಿ ಕೆಲಸ ಮಾಡುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಉತ್ತಮವಾದ ಆರೋಗ್ಯ ಸೇವೆ ನೀಡಬೇಕಾದದ್ದು ಸರಕಾರಗಳ ಕರ್ತವ್ಯ ವಾಗಿದ್ದು ಆದರೆ ಇಂದು ನಮ್ಮನ್ನಾಳುವ ಸರಕಾರಗಳು ಸರಕಾರಿ ‌ಆಸ್ಪತ್ರೆಗಳನ್ನು‌ ಬಲಪಡಿಸುವ ಬದಲು‌ ಖಾಸಗಿ ಆಸ್ಪತ್ರೆ ಗಳ ಪರವಾಗಿ ಕೆಲಸಮಾಡುತ್ತಿದೆ ಎಂದು ಆರೋಪಿಸಿದರು.

ಲಾಕ್ ಡೌನ್ ಹೆಸರಿನಲ್ಲಿ‌ ಸರಕಾರ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದು ಎಲ್ಲಾ ಸಾರ್ವಜನಿಕ ಕ್ಷೇತ್ರವನ್ನು ಖಾಸಗಿಯವರಿಗೆ ಮಾರಟ ಮಾಡಲಾಗುತ್ತಿದ್ದು ಜನರ ಗಮನವನ್ನು ಬೇರೆಡೆ ಸೆಳೆಯಲು ಲಾಕ್ ಡೌನ್ ಹೇರುವ ಮೂಲಕ ಜನರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದರು.ಪ್ರತಿಭಟನೆಯನ್ನುದ್ದೇಶಿಸಿ ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಡಿ.ವೈ.ಎಫ್ ಜನರ ಬದುಕಿನ ಪ್ರಶ್ನೆಯನ್ನು ಮುಂದಿಟ್ಟು ನಿರಂತರ ಹೋರಾಟ ನಡೆಸುತ್ತಿದ್ದು ಸರಕಾರಿ ಆಸ್ಪತ್ರೆ ಗಳನ್ನು ಬಲಪಡಿಸಲು ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದು ಖಾಸಗಿ ಆಸ್ಪತ್ರೆ ಗಳ ನಿಯಂತ್ರಣಕ್ಕೆ ಸರಕಾರ ಕಠಿಣ ಕಾನೂನು‌ ಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಕಾರ್ಮಿಕ ‌ಮುಖಂಡರಾದ ರಾಮಣ್ಣ ವಿಟ್ಲ ಮಾತನಾಡಿ ವಿಟ್ಲದಲ್ಲಿ ಡಿ.ವೈ.ಎಫ್.ಐ ನ ಹೋರಾಟದ ಫಲವಾಗಿ ಇಂದು ಸಮುದಾಯ ಆರೋಗ್ಯ ಕೇಂದ್ರ ಹೊಸ ಕಟ್ಟಡದೊಂದಿಗೆ ರಚನೆಗೊಂಡಿದೆ ಆದರೆ ಇಲ್ಲಿ‌ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಕೂಡಲೇ ವಿಟ್ಲ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕೆಂದು ಒತ್ತಾಯಿಸಿ ದರು.

ಪ್ರತಿಭಟನೆಯನ್ನುದ್ದೇಶಿಸಿ ನ್ಯಾಯವಾದಿ ತುಳಸೀದಾಸ್ ವಿಟ್ಲ ,ಮಹಮ್ಮದ್ ಇಕ್ಬಾಲ್ ಹಳೆಮನೆ, ಮಾತನಾಡಿದರು, ಡಿ.ವೈ.ಎಫ್.ಐ ವಿಟ್ಲ ವಲಯಾದ್ಯಕ್ಷ ನುಜುಮ್ ಅಳಿಕೆ ಸ್ವಾಗತಿಸಿದರು ,ಪ್ರಜಾ ಪರಿವರ್ತನಾ ವೇದಿಕೆ ಇದರ ಮುಖಂಡರಾದ ಕೃಷ್ಣಪ್ಪ ಪುದ್ದೊಟ್ಟು, ಬಿ.ಟಿ.ಕುಮಾರ್ ,ನ್ಯಾಯವಾದಿ ಮಹಮ್ಮದ್ ಗಝಾಲಿ, ಡಿ.ವೈ.ಎಫ್.ಐ ವಿಟ್ಲ ವಲಯ ಕಾರ್ಯದರ್ಶಿ ಜಮೀಲ್, ಮುಖಂಡರಾದ ಶಹೀದ್ ಶೈನ್, ಆರೀಪ್ ಬಿ.ಕೆ , ಇಬ್ರಾಹಿಂ ಭಾಷೀಮ್, ಸಲೀಂ ಮಲಿಕ್, ಸಪ್ವಾನ್,ಆಲಿ ಮದಕ, ಸಾದಿಕ್,‌ಸಮೀರ್ ಪಾತರತೋಟ ಜಬ್ಬಾರ್ ಆನೆಕಲ್,ಮುಂತಾದವರು ಪ್ರತಿಭಟನೆ ಯ ನೇತ್ರತ್ವ ವಹಿಸಿದ್ದರು.ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿಯನ್ನು ವಿಟ್ಲ ಅರೋಗ್ಯ ಅಧಿಕಾರಿಗಳ ಮುಖಾಂತರ ಸಲ್ಲಿಸಲಾಯಿತು.

- Advertisement -

Related news

error: Content is protected !!