Friday, July 11, 2025
spot_imgspot_img
spot_imgspot_img

ವಿಟ್ಲ: ಹಿಂದೂ ಯುವಸೇನೆ ವಿಟ್ಲ 21ನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಲೆ ರಕ್ತದಾನ ಶಿಬಿರ

- Advertisement -
- Advertisement -

ವಿಟ್ಲ: ಹಿಂದೂ ಯುವ ಸೇನೆ ಇದರ ವತಿಯಿಂದ ವೆನ್‌ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ವಿಟ್ಲದ ವಿಠಲ ವಿದ್ಯಾ ಸಂಘದ ಸುವರ್ಣ ರಂಗ ಮಂದಿರದಲ್ಲಿ ಅ. 24ರಂದು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಭಾಸ್ಕರ ಚಂದ್ರ ಶೆಟ್ಟಿ ಗೌರವಾದ್ಯಕ್ಷರು ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಮಂಗಳೂರು ಅವರು ಉದ್ಘಾಟಿಸಿದರು.

ಅತಿಥಿಗಳಾಗಿ ಯಶೋಧರ ಚೌಟ ಅಧ್ಯಕ್ಷರು ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಮಂಗಳೂರು, ಅಭಿನವ್ ವೈಧ್ಯಾಧಿಕಾರಿ ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು, ಆಂಟನಿ ಮುಖ್ಯಾಧಿಕಾರಿ ರಕ್ತನಿಧಿ ವೆನ್‌ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು, ಅಶೋಕ್ ಮುಖ್ಯಾಧಿಕಾರಿ ರಕ್ತನಿಧಿ ವೆನ್‌ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು, ನಿಶಾಂತ್ ಜಪ್ಪಿನಮೊಗರು ರಕ್ತದಾನ ಶಿಬಿರದ ರೂವಾರಿ ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಮಂಗಳೂರು.

ಜಗನ್ನಾಥ್ ಕಾಸರಗೋಡು ವ್ಯವಸ್ಥಾಪಕರು ಮೈತ್ರಿ ಗುರುಕುಲಂ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು, ತುಳಸೀದಾಸ್ ಶೆಣೈ ಉದ್ಯಮಿ ವಿಟ್ಲ, ಹರೀಶ್ ವಿಟ್ಲ ಗೌರವಾಧ್ಯಕ್ಷರು ಹಿಂದೂ ಯುವಸೇನೆ ವಿಟ್ಲ, ಜಯಪ್ರಕಾಶ್ ವಿಟ್ಲ ಅಧ್ಯಕ್ಷರು ಹಿಂದೂ ಯುವ ಸೇನೆ ವಿಟ್ಲ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಉಮೇಶ್ ಕುಲಾಲ್ ಕಾಶಿಮಠ ನೆರವೇರಿಸಿದರು. ಸುರೇಶ್ ವಿಟ್ಲ ವಂದಿಸಿದರು.

- Advertisement -

Related news

error: Content is protected !!