Tuesday, June 9, 2026
spot_imgspot_img
spot_imgspot_img

ಮಂಗಳೂರಿಗೆ ಸರಕು ಹೊತ್ತು ಬರುತ್ತಿದ್ದ ಲಾರಿಗೆ ಬೆಂಕಿ; ಸಂಪೂರ್ಣ ಭಸ್ಮ

- Advertisement -
- Advertisement -

ಉತ್ತರ ಕನ್ನಡ : ಸರಕು ಹೊತ್ತು ಸಾಗುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 63ರ ವಜ್ರಳ್ಳಿ ಬಳಿ ನಡೆದಿದೆ.

ಹುಬ್ಬಳ್ಳಿಯಿಂದ ಅಂಕೋಲ ಮಾರ್ಗವಾಗಿ ಮಂಗಳೂರು ತೆರಳುತ್ತಿದ್ದ ಲಾರಿಗೆ ಏಕಾಏಕಿ ಬೆಂಕಿ ತಗುಲಿದೆ. ಕೂಡಲೇ ಲಾರಿಯಿಂದ ಜಿಗಿದು ಚಾಲಕ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಬೆಂಕಿಯ ತೀವ್ರತೆಗೆ ಲಾರಿ ಸ್ಥಳದಲ್ಲೇ ಸಂಪೂರ್ಣ ಭಸ್ಮಗೊಂಡಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಪೊಲೀಸ್ ಅಧಿಕಾರಿಗಳು ಧಾವಿಸಿ ಬಂದು ಬೆಂಕಿ ನಂದಿಸಿದ್ದಾರೆ. ಅಂಕೋಲಾ ಪೊಲೀಸ್ ಠಾಣಾ ವ್ಯಾ ಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!