


ವಿಟ್ಲ: ಓಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ) ವಿಟ್ಲ ಶಾಖೆಯ ಸ್ವಂತ ಕಟ್ಟಡ ಉದ್ಘಾಟನೆ ಮತ್ತು ಸ್ಥಳಾಂತರ ಸಮಾರಂಭವು ನ.20 ಸೋಮವಾರದಂದು ಪೂರ್ವಾಹ್ನ 10.30 ಕ್ಕೆ ವಿಟ್ಲ ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿಯಲ್ಲಿನ 3ನೇ ಮಹಡಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು, ಒಡಿಯೂರು ಶ್ರೀವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ಸಂಸ್ಥಾಪಕ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಗೌರವ ಮಾರ್ಗದರ್ಶಕಿ ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯ ಉಪಸ್ಥಿತರಿರುವರು.

ಒಡಿಯೂರು ಶ್ರೀ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ಅಧ್ಯಕ್ಷ ಲ| ಎ. ಸುರೇಶ್ ರೈ PMJF ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಟ್ಲ ಅರಮನೆ ಅನುವಂಶಿಕ ಮೊಕ್ತೇಸರರು ಬಂಗಾರು ಅರಸರು, ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಪುತ್ತೂರು ವಿಧಾನ ಸಭಾ ಕ್ಷೇತ್ರ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪುತ್ತೂರು ವಿಧಾನ ಸಭಾ ಕ್ಷೇತ್ರ ಮಾಜಿ ಶಾಸಕ ಸಂಜೀವ ಮಠಂದೂರು, SCDCC ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಳ್ಳೊಟ್ಟು, ಜಿತೇಶ್ ಎಂ. ಶ್ರೀ ಚಂದ್ರನಾಥ ದೇವರ ಬಸದಿ ವಿಟ್ಲ, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಫೆಡರೇಶನ್ ಬೆಂಗಳೂರು ಇದರ ನಿರ್ದೇಶಕಿ ಭಾರತಿ ಜಿ.ಭಟ್, ವಿಟ್ಲ ಪುಷ್ಪಕ್ ಹೆಲ್ತ್ ಸೆಂಟರ್‌ನ ಡಾ| ವಿ.ಕೆ ಹೆಗ್ಡೆ, ವಿಟ್ಲ ಬೆನಕ ಕ್ಲಿನಿಕ್‌ನ ಡಾ|ಅರವಿಂದ್, ಜಯರಾಮ ರೈ ವಕೀಲರು, ಬಿ.ಸಿ.ರೋಡ್, ಅಲೆಕ್ಸಾಂಡರ್ ಲಸ್ರಾದೊ ಉದ್ಯಮಿಗಳು ವಿಟ್ಲ, ರಾಧಾಕೃಷ್ಣ ನಾಯಕ್ ಉದ್ಯಮಿಗಳು ವಿಟ್ಲ, ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಫೆಡರೇಶನ್ ಜಿಲ್ಲಾ ಸಂಯೋಜಕ ವಿಜಯ ಕುಮಾರ್ ಜಿ.ಎಸ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.