Sunday, July 6, 2025
spot_imgspot_img
spot_imgspot_img

ವಿಟ್ಲ: (ಜ.9-19) ಕನ್ಯಾನ ಉದಯಾಸ್ತಮಾನ ಉರೂಸ್ ಮತ್ತು ಧಾರ್ಮಿಕ ಮತ ಪ್ರವಚನ

- Advertisement -
- Advertisement -

ವಿಟ್ಲ:ಕನ್ಯಾನ ಖಾಝಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಘಣ ಅಧ್ಯಕ್ಷತೆಯಲ್ಲಿ ಉದಯಾಸ್ತಮಾನ ಉರೂಸ್ ಮತ್ತು ಮತ ಪ್ರವಚನವು ಜನವರಿ 9 ರಿಂದ 19ರ ವರೆಗೆ ನಡೆಯಲಿದೆ.

ಜ.19 ರಂದು ಹಗಲು ಮೌಲೀದ್ ಮಜ್ಲೀಸ್ ಮತ್ತು ಬ್ರಹತ್ ಅನ್ನದಾನ ಸೈಯದ್ ಕೆಎಸ್ ಆಟ್ಟಕೋಯ ತಂಙಳ್ ಕುಂಬೊಲ್ ಮತ್ತು ಕನ್ಯಾನ ಮುದರ್ರಿಸ್ ಶೈಖುನಾ ಇಬ್ರಾಹಿಂ ಫೈಝಿ ಅವರ ನೇತೃತ್ವದಲ್ಲಿ ನಡೆಯಲಿದೆ.

ಈ ಸಮಾರಂಭದಲ್ಲಿ ಕೇರಳ ಕರ್ನಾಟಕದ ಸುಪ್ರಸಿದ್ಧ ವಾಗ್ಮಿಗಳು ಉಮರಾ ನಾಯಕರು ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ. ಪ್ರತಿದಿನ ರಾತ್ರಿ ಖ್ಯಾತ ವಾಗ್ಮಿಗಳಿಂದ ಮತಪ್ರವಚನ ನಡೆಯಲಿದೆ ಎಂದು ಕನ್ಯಾನ ರಹ್ಮಾನಿಯ ಜುಮಾ ಮಸೀದಿ ಅಧ್ಯಕ್ಷರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!