Wednesday, June 17, 2026
spot_imgspot_img
spot_imgspot_img

ಉಡುಪಿ: ಸರ್ಕಾರಿ ಜಾಗದಲ್ಲಿ ಪಿ.ಡಿ.ಓ ಮನೆ ನಿರ್ಮಾಣ: ತನಿಖಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ನಾಲ್ವರ ಮೇಲೆ ದೂರು ದಾಖಲು

- Advertisement -
- Advertisement -

ಉಡುಪಿ: ಅರಣ್ಯ ಇಲಾಖೆಗೆ ಸೇರಿರುವ ಜಾಗದಲ್ಲಿ ಮನೆಯನ್ನು ನಿರ್ಮಿಸುತ್ತಿದ್ದ ಕೃತ್ಯ ಸಾರ್ವಜನಿಕರ ಮೂಲಕ ಪಂಚಾಯತ್ ಪಿ.ಡಿ.ಓ ಗೆ ದೂರು ಬಂದ ಹಿನ್ನಲೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸೂಕ್ತ ದಾಖಲೆಗಳನ್ನು ನೀಡಲು ಎಚ್ಚರಿಕೆ ನೀಡಿದ ಮಾಜಿ ಪಿ.ಟಿ.ಓ ಹಾಗೂ ಹಾಲಿ ಜಿಲ್ಲಾ ಪಂಚಾಯತ್ ಅಧಿಕಾರಿಯನ್ನು ನಾಲ್ವರು ತರಾಟೆಗೆ ತೆಗೆದುಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದಲ್ಲಿ ನಡೆದಿದೆ.

ಪೆರ್ಡೂರು ಗ್ರಾಮ ಪಂಚಾಯತ್ ನ ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಮಾರಿ ಸುಮನ ಕೆ. ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಇವರು, ಮೇ.20 ರಿಂದ ಪೆರ್ಡೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದರು. ಈ ಸಮಯ ನವೀನ ಎಂಬರು ನೀಡಿದ ಸಾರ್ವಜನಿಕ ಹಿತಾಸಕ್ತಿ ದೂರು ಅರ್ಜಿಯಲ್ಲಿ ಸರ್ವೆ ನಂಬ್ರ73/03 ರಲ್ಲಿ 15 ಸೆನ್ಸ್ ಜಾಗದಲ್ಲಿ ಹೆಬ್ರಿ ಮತ್ತು ಮುದ್ರಾಡಿ ಗ್ರಾಮ ಪಂಚಾಯತ್ ನಲ್ಲಿ ಪಿ.ಡಿ.ಓ ಕರ್ತವ್ಯ ನಿರ್ವಹಿಸುತ್ತಿರುವ ಸದಾಶಿವ ಸೆರ್ವೆಗಾರ ಎಂಬವರು ವಾಸ್ತವ್ಯದ ಮನೆ ಕಟ್ಟಲು ಪಂಚಾಯತ್ ಕಟ್ಟಡ ಪರವಾಣಿಗೆ ನಂಬ್ರ 27/2020-21 ಪಡೆದುಕೊಂಡಿದ್ದರು.

ಈ ಜಾಗದಲ್ಲಿ ಮನೆ ನಿರ್ಮಾಣದ ಬದಲು ಸರ್ಕಾರಿ ಜಾಗದಲ್ಲಿ ಕಟ್ಟುತ್ತಿರುವ ಮನೆಯ ನಿರ್ಮಾಣವನ್ನು ನಿಲ್ಲಿಸುವಂತೆ ಸಾರ್ವಜನಿಕ ಹಿತಾಸಕ್ತಿ ದೂರಿಗೆ ಸಂಬಂಧಿಸಿದಂತೆ ಜು. 31 ರಂದು ಸ್ಥಳ ಪರೀಶೀಲನೆ ನಡೆಸಿ ಸಮಜಾಯಿಸಿಕೆ ನೀಡುವಂತೆ ಆ.2 ರಂದು ನೋಟಿಸ್ ನೀಡಿದ್ದರು. ಈ ದೂರು ಅರ್ಜಿಯ ಸ್ಥಳ ಪರೀಶಿಲನೆ ನಡೆಸಿರುವುದನ್ನು ದೇವು ಪೂಜಾರಿ, ತುಕಾರಾಮ್ ನಾಯಕ್, ಜಗದೀಶ ಶೆಟ್ಟಿ, ಸಚಿನ್ ಪೂಜಾರಿ ಇವರು ಅಸಮಧಾನಗೊಂಡು ಪೆರ್ಡೂರು ಪಂಚಾಯತ್ ನಲ್ಲಿ ಕುಮಾರಿ ಸುಮನಾ ಅವರು ಕರ್ತವ್ಯ ನಿರ್ವಹಿಸುವಾಗ ಅವರೊಂದಿಗೆ ಅನುಚಿತವಾಗಿ ವರ್ತಿಸಿ ಕಛೇರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಪರಿಶಿಷ್ಟ ಜಾತಿಗೆ ಸೇರಿದ ಮಹಿಳಾ ಸರಕಾರಿ ಅಧಿಕಾರಿ ಎಂಬುವುದನ್ನು ಮನಗಾನದೇ ಅನುಚಿತವಾಗಿ ವರ್ತಿಸಿದ್ದಾರೆ. ದೂರು ಅರ್ಜಿಗೆ ಸಂಬಂಧಿಸಿ ಸಿ ಯಾವುದೇ ವರದಿಯನ್ನು ಮೇಲಾಧಿಕಾರಿಯವರಿಗೆ ಸಲ್ಲಿಸದಂತೆ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೇ ದೇವು ಪೂಜಾರಿ ಅವರು ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡುವ ಉದ್ದೇಶದಿಂದ ಮೇಲಾಧಿಕಾರಿಯವರಿಗೆ ಸುಳ್ಳು ಮಾಹಿತಿ ನೀಡಿದ್ದಲ್ಲದೆ ಆ.30 ರಂದು ಕುಮಾರಿ ಸುಮನ ಕೆ ಅವರಿಗೆ ಅಗೌರವ ಆಗುವ ರೀತಿಯಲ್ಲಿ ಈ ದಿನವೇ ನಿಮ್ಮ ಪ್ರಭಾರವನ್ನು ಹಸ್ತಾಂತರಿಸಿ ನಾಳೆಯ ಸಭೆಗೆ ಬರುವುದು ಬೇಡ ಎಂಬುದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದ್ದಾರೆ ಎಂದು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ ಸದಾಶಿವ ಸೇರ್ವೆಗಾರ್ ಮೇಲೆ ಈ ಕೂಡಲೇ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು. ಅಲ್ಲದೆ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ಕೆಡವಬೇಕು, ಪಿಡಿಓ ಸದಾಶಿವ ಸೇರ್ವೆಗಾರ್‌ರನ್ನು ಕೂಡಲೇ ಸೇವೆಯಿಂದ ಅಮಾನತು ಗೋಳಿಸಬೇಕು ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

- Advertisement -

Related news

error: Content is protected !!