Saturday, April 27, 2024
spot_imgspot_img
spot_imgspot_img

ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್‌ನಲ್ಲಿ ಫೋಷಕರ ಸಭೆ, ಸಾಧಕರಿಗೆ ಸನ್ಮಾನ

- Advertisement -G L Acharya panikkar
- Advertisement -

ವಿಟ್ಲ: ಈ ಶಾಲೆಯ ಹುಟ್ಟು ಸಂಪಾದನೆಯ ಉದ್ದೇಶವಲ್ಲ. ನನ್ನ ಹುಟ್ಟೂರಿನಲ್ಲಿರುವ ಗ್ರಾಮೀಣ ಭಾಗದ ಮಕ್ಕಳಿಗೊಂದು ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಈ ಭಾಗದ ಜನರ ಸೇವೆ ಮಾಡಬೇಕೆನ್ನುವುದು ನನ್ನ ಮಹದಾಸೆಯಾಗಿದೆ. ದೇವರ ಅನುಗ್ರಹದಿಂದ ನಮ್ಮಿಂದಾದ ಸೇವೆಯನ್ನು ಮಾಡುತ್ತಿದ್ದೇನೆ ಎಂದು ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ಅಧ್ಯಕ್ಷರು, ಹಾಸನದ ಜನಪ್ರೀಯ ಆಸ್ಪತ್ರೆಯ ವೈದ್ಯ ಡಾ.ಅಬ್ದುಲ್ ಬಶೀರ್ ವಿ.ಕೆ.ರವರು ಹೇಳಿದರು.

ಅವರು ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಜು.25ರಂದು ನಡೆದ ಫೋಷಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶವಾಗಿದೆ. ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ನುರಿತ ಶಿಕ್ಷಕರನ್ನು ಆಯ್ಕೆ ಮಾಡಿ ಮಕ್ಕಳಿಗೆ ವಿದ್ಯಾಬ್ಯಾಸವನ್ನು ನೀಡುತ್ತಿದ್ದೇವೆ. ಇದೀಗಾಗಲೇ ಕೊರೋನ ಹಿನ್ನೆಲೆಯಲ್ಲಿ ಆನ್ ಲೈನ್ ಫ್ಲ್ಯಾಟ್ ಫಾರಂ ನಲ್ಲಿ ಕ್ಲಾಸ್ ಗಳನ್ನು ನಡೆಯುತ್ತಿವೆ. ಶಾಲಾ ತರಗತಿಯಲ್ಲಿ ನಡೆಸುವ ಕ್ಲಾಸಿನಂತೆಯೇ ಆನ್ ಲೈನ್ ಕ್ಲಾಸ್ ಗಳನ್ನು ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಜನಪ್ರೀಯ ಶಿಕ್ಷಣ ಸಂಸ್ಥೆಯನ್ನು ಜನಪ್ರೀಯ ಕ್ಯಾಂಪಸ್ ಆಗಿ ಮಾರ್ಪಾಡು ಮಾಡುವ ಯೋಜನೆ ಇದೆ. ನಮ್ಮ ಯೋಜನೆ ಯೋಚನೆಗಳನ್ನು ಸಕಾರ ಮಾಡಲು ಪೋಷಕರ ಸಹಕಾರ ಅಗತ್ಯವಿದೆ ಎಂದರು.

ವಿಟ್ಲ ಜೆ.ಸಿ.ಐ ಮಾಜಿ ಅಧ್ಯಕ್ಷರಾದ ರಶೀದ್ ವಿಟ್ಲರವರು ಮಾತನಾಡಿ ಜನಪ್ರಿಯ ಸೆಂಟ್ರಲ್ ಸ್ಕೂಲ್ ಆರಂಭವಾಗಿರುವುದು ಈ ಭಾಗದ ಜನರಿಗೆ ಹೆಮ್ಮೆಯ ವಿಚಾರವಾಗಿದೆ. ಜನಪ್ರಿಯ ಸೆಂಟ್ರಲ್ ಸ್ಕೂಲ್ ಡಾ. ಅಬ್ದುಲ್ ಬಶೀರ್ ವಿ.ಕೆ. ರವರ ಕನಸಿನ ಕೂಸಾಗಿದೆ. ತನಗೆ ಅನ್ನ ನೀಡಿದ ಹಾಸನದ ಜನತೆಗೆ ಅಲ್ಲೊಂದು ಸುಸಜ್ಜಿತವಾದ ಆಸ್ಪತ್ರೆಯನ್ನು ತೆರೆದು ಮಿತದರದಲ್ಲಿ ಚಿಕಿತ್ಸೆ ನೀಡುತ್ತಿರುವ ಡಾ. ಅಬ್ದುಲ್ ಬಶೀರ್ ವಿ.ಕೆ. ರವರ ಅಲ್ಲಿನ ಜನರ ಜನಮಾಸದಲ್ಲಿ ಅಚ್ಚಳಿಯದ ವ್ಯಕ್ತಿಯಾಗಿದ್ದಾರೆ. ಈ ಹಳ್ಳಿಯಲ್ಲಿ ಇಂತಹ ಸುಸಜ್ಜಿತ ಶಿಕ್ಷಣ ಸಂಸ್ಥೆಯನ್ನು ತೆರೆದು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಒಂದು ಸ್ಪಷ್ಟ ನಿದರ್ಶನವಾಗಿದೆ. ಪುತ್ತೂರು ವಿಟ್ಲ ಭಾಗದಲ್ಲಿ ಸಕಲ ಸೌಲಭ್ಯವನ್ನು ಹೊಂದಿರುವ ಇಷ್ಟೊಂದು ಕಡಿಮೆ ಫೀಸ್ ಪಡೆಯುವ ಸಿಬಿಎಸ್ ಇ ಶಿಕ್ಷಣ ಸಂಸ್ಥೆ ಬೇರೊಂದಿಲ್ಲ. ಒಂದು ಶಿಕ್ಷಣ ಸಂಸ್ಥೆ ಮನ್ನಡೆಯಬೇಕಾದರೆ ಆಡಳಿತ ಮಂಡಳಿಯ ಪ್ರಯತ್ನ ಮಾತ್ರ ಸಾಕಾಗುವುದಿಲ್ಲ. ಆಡಳಿತ ಮಂಡಳಿಯ ಜೊತೆಗೆ ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಕಾರ ಅತೀ ಅಗತ್ಯ ಎಂದರು.

ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿರವರು ಮಾತನಾಡಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲಿಸುವ ಶಿಕ್ಷಕರ ಜೊತೆಗೆ ಮಕ್ಕಳ ಪೋಷಕರು ಸಹಕಾರ ನೀಡುವುದು ಅತೀ ಅಗತ್ಯ. ತಮ್ಮ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಯೋಚಿಸಬೇಕು. ಜನಪ್ರಿಯ ಸೆಂಟ್ರಲ್ ಸ್ಕೂಲ್ ಈ ಭಾಗದ ಮಕ್ಕಳಿಗೆ ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿದೆ ಮಕ್ಕಳ ಪೋಷಕರು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮಂಗಳೂರು ಮಂಗಳ ಆಸ್ಪತ್ರೆಯ ಯುರೋಲೊಜಿಸ್ಟ್ ಡಾ.ಮೊಯಿದ್ದೀನ್ ನಫ್ಸೀರ್ ಮಾತನಾಡಿ ಯಾವುದೇ ಕ್ಷೇತ್ರವೂ ಮೇಲಲ್ಲ ಕೀಳಲ್ಲ, ನಾವು ಮಾಡುವ ಕೆಲಸವನ್ನು ಶ್ರದ್ದೆಯಿಂದ ಮಾಡಿದಾಗ ಯಶಸ್ಸು ತನ್ನಿಂತಾನೆ ಬರುತ್ತದೆ. ಮೊದಲಿಗೆ ಮಕ್ಕಳೊಳಗಿನ ಪ್ರತಿಭೆಗಳನ್ನು ನಾವು ಗುರುತಿಸಿ ಅವರಿಗೆ ನಾವು ಸಹಕಾರ ನೀಡಬೇಕು. ಆಗ ಮಾತ್ರ ನಮ್ಮ ಮಕ್ಕಳ ಒಳಗಿನ ಪ್ರತಿಭೆಗೆ ನಿಜವಾದ ಅರ್ಥ ಬರುತ್ತದೆ ಹಾಗೂ ಅವರು ಉನ್ನತ ಮಟ್ಟಕ್ಕೇರಲು ಸಾಧ್ಯ ಎಂದರು.

ಶಿಕ್ಷಣ ತಜ್ಞ ಡಾ.ರವಿಕುಮಾರ್ ಎಲ್.ಪಿ ರವರು ಮಾತನಾಡಿ ಈ ಶಾಲೆಯ ಬಗ್ಗೆ ಜನರಿಗಿರುವ ನಂಬಿಕೆಗೆ ಈ ವರ್ಷದ ಅಡ್ಮಿಶನ್ ಸಾಕ್ಷಿಯಾಗಿದೆ. ಪೋಷಕರಿಟ್ಟಿರುವ ನಂಬಿಕೆ ನಮ್ಮ ಜವಾಬ್ದಾರಿಯನ್ನು ಇನ್ಮಷ್ಟು ಹೆಚ್ಚಿಸಿದೆ. ಪೋಷಕರು ಬಿಲ್ಲುಗಳಿದ್ದಂತೆ ಅದರಿಂದ ಹೊರಬರುವ ಬಾಣಗಳು ಮಕ್ಕಳಾಗಿರ್ತಾರೆ. ಪ್ರತಿ ಮಗುವಿನಲ್ಲಿ ತನ್ನದೇ ಆದ ಟ್ಯಾಲೆಂಟ್ ಇರುತ್ತದೆ. ನಾವು ಅದನ್ನು ಗುರುತಿಸುವ ಕೆಲಸ ಮಾಡಬೇಕು. ಮಕ್ಕಳನ್ನು ಸಮಾಜದಲ್ಲಿ ಶ್ರೇಷ್ಟ ವ್ಯಕ್ತಿಯನ್ನಾಗಿ ಮಾಡಲು ಶಿಕ್ಷಕರ, ಪೋಷಕರ ಪಾತ್ರ ಅಗತ್ಯ ಎಂದರು.

ಜನಪ್ರಿಯ ಎಜ್ಯಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಫಾತಿಮಾ ನಸ್ರಿನಾ ಬಶೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಟ್ಲ ಜೆ.ಸಿ.ಐ ಮಾಜಿ ಅಧ್ಯಕ್ಷರಾದ ರಶೀದ್ ವಿಟ್ಲರವರನ್ನು ಸಂಸ್ಥೆಯ ಪರವಾಗಿ ಹಾಗೂ ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ಅಧ್ಯಕ್ಷರು,, ಹಾಸನದ ಜನಪ್ರೀಯ ಆಸ್ಪತ್ರೆಯ ವೈದ್ಯ ಡಾ.ಅಬ್ದುಲ್ ಬಶೀರ್ ವಿ.ಕೆ.ರವರನ್ನು ಕಂಬಳ ಬೆಟ್ಟು ಜಮಾತ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು. ನಿರ್ದೇಶಕ ಡಾ. ಕಿರಾಶ್ ರವರು ಅತಿಥಿಗಳನ್ನು ಸ್ವಾತಿಸಿ ಶಾಲೆಯ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲರಾದ ಶೈಲಜಾ ಶೆಟ್ಟಿರವರು ಮಾತನಾಡಿ ಶಾಲಾ ಶಿಕ್ಷಕ ವೃಂದದ ಬಗ್ಗೆ ಮಾಹಿತಿ ನೀಡಿ, ವಂದಿಸಿದರು. ಶಿಕ್ಷಕಿ ರಮ್ಯ ಕಾರ್ಯಕ್ರಮ ನಿರೂಪಿಸಿದರು ಲೀಡ್ ಸ್ಕೂಲ್ ನ ಸಿಬಂದಿ ಜೋಯಲ್ ರವರು ಲೀಡ್ ಸ್ಕೂಲ್ ಬಗ್ಗೆ ಮಾಹಿತಿ ನೀಡಿದರು.

ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಕೇಂದ್ರೀಯ ಪಠ್ಯ ಕ್ರಮದ ಸ್ಕೂಲ್ ಇದಾಗಿದ್ದು, ಮಕ್ಕಳ ಕಲಿಕೆಗೆ ಪೂರಕ ಸೌಲಭ್ಯ ಮತ್ತು ವಾತಾವರಣ ಕಲ್ಪಿಸಲಾಗಿದೆ. ಸುಮಾರು 5 ಎಕರೆ ವಿಸ್ತೀರ್ಣದಲ್ಲಿ • ಕ್ಯಾಂಪಸ್ ವ್ಯಾಪಿಸಿದೆ. ಶಾಲಾ ಕಟ್ಟಡ ಎರಡು ಮಹಡಿ ಒಳಗೊಂಡಿದೆ, ಎಲ್‌ಕೆಜಿ ಮತ್ತು ಯುಕೆಜಿಗೆ ಪ್ರತ್ಯೇಕ ಪ್ಲೇ ರೂಮ್, ಅತ್ಯಾಧುನಿಕ ಫರ್ನಿಚರ್ ಮತ್ತು ಗಾಳಿ ಬೆಳಕು ಇರುವ ತರಗತಿ ಕೊಠಡಿಗಳು, ಪ್ರತೀ ತರಗತಿ ಕೊಠಡಿಯಲ್ಲಿ ಮಕ್ಕಳ ಪ್ರಾಯೋಗಿಕ ಕಲಿಕೆಗೆ ಸ್ಟಾರ್ಟ್ ಟಿವಿಗಳು, ಒಳಾಂಗಣ ಕ್ರೀಡಾಂಗಣ, ಸಭಾಂಗಣ, ಈಜುಕೊಳ, ಬಸ್ ಸೌಲಭ್ಯ ಇತ್ಯಾದಿ ಕಲಿಕಾ ಪೂರಕ ಸೌಲಭ್ಯಗಳನ್ನು ಸ್ಕೂಲ್ ಒಳಗೊಂಡಿದೆ. ಅನುಭವಿ ಹಾಗೂ ವೃತ್ತಿಪರ ಶಿಕ್ಷಕರ ತಂಡವನ್ನು ಜನಪ್ರಿಯ ಸಂಸ್ಥೆಯು ಹೊಂದಿದೆ. ವಿಟ್ಲ ಸಾಲೆತ್ತೂರು, ಕಲ್ಲಡ್ಕ, ಮಾಣಿ, ಪುತ್ತೂರು, ಅಡ್ಯನಡ್ಕ ಆಸುಪಾಸಿನಲ್ಲಿ ಶಾಲೆಯ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9663323599, 9663346599ನ್ನು ಸಂಪರ್ಕಿಸಬಹುದು.

- Advertisement -

Related news

error: Content is protected !!