Thursday, April 25, 2024
spot_imgspot_img
spot_imgspot_img

ವಿಟ್ಲ: SSLC ಫಲಿತಾಂಶದಲ್ಲಿ ಸತತ 18 ವರ್ಷಗಳಿಂದ ಶೇ100 ಫಲಿತಾಂಶ ದಾಖಲಿಸಿದ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ

- Advertisement -G L Acharya panikkar
- Advertisement -

ವಿಟ್ಲ: ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 110 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗುವುದರೊಂದಿಗೆ ಸತತವಾಗಿ 18 ವರ್ಷಗಳಿಂದ ಶೇ 100 ಫಲಿತಾಂಶ ದಾಖಲಿಸಿದಂತಾಗಿದೆ.

ಕುಮಾರಿ ಅಪೂರ್ವ ರಾವ್ ಎಂ.ಎಸ್(ವಿಟ್ಲ ಎಂ.ಪಿ ವೀಣಾ ರಾವ್ ದಂಪತಿಯ ಪುತ್ರಿ)ಮತ್ತು ಕುಮಾರಿ. ಬಿ. ಎಸ್. ಭಾರ್ಗವಿ (ಬಾಯಾರು ಶ್ರೀ ಶಿವಪ್ಪ ಜೋಗಿ ಹಾಗೂ ಕುಸುಮ ದಂಪತಿಗಳ ಪುತ್ರಿ)621 ಅಂಕಗಳೊಂದಿಗೆ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.

ಇದನ್ನೂ ಓದಿ: ವಿಟ್ಲ: SSLC ಫಲಿತಾಂಶ; ಸೈಂಟ್ ರೀಟಾ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಸ್ಥಾನ!

ಕುಮಾರಿ ಅನನ್ಯಲಕ್ಷ್ಮಿ, ಕುಮಾರಿ ಗೌತಮಿ ಪೈ, ಕುಮಾರಿ ಯಶ್ಮಿತಾ 619 ಅಂಕಗಳನ್ನು ಗಳಿಸಿ ಶಾಲೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.

ಒಟ್ಟು 600ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಕೀರ್ತಿ. ಕೆ (617), ಪ್ರಾರ್ಥನಾ ಶೆಟ್ಟಿ. ಕೆ (617), ಗಾಯತ್ರಿ. ಎಸ್ (613), ಪ್ರಿಯದರ್ಶಿನಿ. ಎಂ (613), ಶಮಂತ್. ಎಸ್ (609), ಶ್ರುತ. ವಿ (609), ರಕ್ಷಾ ಆರ್ (607), ಶರಧಿ (607), ಅವ್ವ. ಬಿ ಶಹನಾ (606),

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗರ ಪಂಚಮಿ ಆಚರಣೆಗೆ ಜಿಲ್ಲಾಡಳಿತದಿಂದ ವಿಶೇಷ ಆದೇಶ!

ನೇಹಾ ರೈ (605), ಉತ್ಸವಿ ಎಸ್ ರೈ (605)ಅಲೀಷ ರಿಯಾ ಮಸ್ಕರೇನಸ್(601) ಭೂಮಿಕಾ ಬಲಿಪ (601)ಡಿ. ವಿನೀತ್ ಶೆಟ್ಟಿ (600), ಹರಿಮುರಳಿ. ಕೆ. ಎಸ್ (600)ಇವರು ಶಾಲೆಯ ಫಲಿತಾಂಶಕ್ಕೆ ಗರಿಮೆ ತಂದಿರುತ್ತಾರೆ.

ಅಲ್ಲದೆ ಒಟ್ಟು ಹಾಜರಾತಿಯಲ್ಲಿ 41 ವಿದ್ಯಾರ್ಥಿಗಳು A+, 39 ವಿದ್ಯಾರ್ಥಿ ಗಳು A, 29ವಿದ್ಯಾರ್ಥಿಗಳು B ಮತ್ತು 1 ವಿದ್ಯಾರ್ಥಿ C ಗ್ರೇಡ್ ನೊಂದಿಗೆ ತೇರ್ಗಡೆಯಾದಂತಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೆ, ಮತ್ತು ಪೋಷಕರಿಗೆ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಮಂಡಳಿ, ಆಡಳಿತಾಧಿಕಾರಿಗಳು, ಪಾಂಶುಪಾಲರು,ಅಧ್ಯಾಪಕ ವೃಂದವು ಅಭಿನಂದನೆಯನ್ನು ಸಲ್ಲಿಸುತ್ತದೆ.

- Advertisement -

Related news

error: Content is protected !!