Saturday, April 20, 2024
spot_imgspot_img
spot_imgspot_img

ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ – ಕಣ್ಣು ತಪಾಸಣಾ ಶಿಬಿರ

- Advertisement -G L Acharya panikkar
- Advertisement -

ವಿಟ್ಲ: ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಮತ್ತು ರೋಟರಿ ಕ್ಲಬ್ ವಿಟ್ಲ ಇದರ ಜಂಟಿ ಆಶ್ರಯದಲ್ಲಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಉಚಿತ ಕಣ್ಣು ತಪಾಸಣಾ ಶಿಬಿರವು ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠಲ್ ಜೇಸೀಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಜೆ.ಸಿ. ಶ್ರೀಧರ ಶೆಟ್ಟಿಯವರು ವಹಿಸಿದ್ದರು.

ಶಿಬಿರದ ಉದ್ಘಾಟನೆಯನ್ನು ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋ.ಕೃಷ್ಣಭಟ್ ರವರು ನೆರವೇರಿಸಿ, ಕಣ್ಣು ಪ್ರತಿಯೋರ್ವನ ದೇಹದ ಅವಿಭಾಜ್ಯ ಅಂಗ , ಇದರ ನಿರಂತರ ತಪಾಸಣೆ ಬಹಳ ಅಗತ್ಯ ಎಂದು ನುಡಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಪ್ರಸಾದ್ ನೇತ್ರಾಲಯ, ಮಂಗಳೂರಿನ ಡಾ. ಮೈತ್ರಿಯವರು ಕಣ್ಣಿನ ದೃಷ್ಟಿಯು ಎಲ್ಲದಕ್ಕೂ ಪ್ರಾಮುಖ್ಯವಾಗಿದೆ, ಈ ದೆಸೆಯಲ್ಲಿ ಅದರ ರಕ್ಷಣೆಯ ಹೊಣೆ ನಮ್ಮದೇ ಆಗಿರುತ್ತದೆ ಎಂದು ಉಲ್ಲೇಖಿಸಿದರು. ಪ್ರಸಾದ ನೇತ್ರಾಲಯದ ಸಂಪರ್ಕ ಅಧಿಕಾರಿ ಸೈಯದ್ ಹಾಗೂ ಇತರ ತಪಾಸಣಾ ಅಧಿಕಾರಿಗಳು ಉಪಸ್ಥಿತರಿದ್ದರು. ಸಂಯೋಜಕರಾದ ರೋಟರಿ ಸಂಸ್ಥೆಯ ಸದಸ್ಯರು ಹಾಗೂ ಜೇಸೀ ಸಂಸ್ಥೆಯ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಸುಮಾರು 600 ವಿದ್ಯಾರ್ಥಿಗಳು ಶಿಬಿರದ ಫಲಶ್ರುತಿಯನ್ನು ಪಡೆದರು. ರೋಟರಿ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರಕಾಶ್ ನಾಯಕ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಶ್ರೀ ರಾಧಾಕೃಷ್ಣ ಎ., ಉಪಪ್ರಾಂಶುಪಾಲೆಯರಾದ ಜ್ಯೋತಿ ಶೆಣೈ ಹಾಗೂ ಹೇಮಲತಾ ರವರು ಉಪಸ್ಥಿತರಿದ್ದರು. ಜೇಸೀ ಸಂಸ್ಥೆಯ ಪ್ರಾಂಶುಪಾಲರಾದ ಜಯರಾಮ ರೈ ಯವರು ಸ್ವಾಗತಿಸಿ, ಆಡಳಿತ ಮಂಡಳಿಯ ಕಾರೈದರ್ಶಿಗಳಾದ ಜೆ.ಸಿ. ಮೋಹನ ಎ. ಅವರು ವಂದನಾರ್ಪಣೆ ಗೈದ
ಈ ಕಾರ್ಯಕ್ರಮದ ನಿರ್ವಹಣೆಯನ್ನು ಸಹಶಿಕ್ಷಕಿ ಶ್ರೀಮತಿ ಗೀತಾ ನೆರವೇರಿಸಿದರು.

- Advertisement -

Related news

error: Content is protected !!