Tuesday, January 26, 2021

ಜೆ.ಸಿ.ಐ ವಿಟ್ಲ ಘಟಕದಿಂದ ‘ರಾಷ್ಟ್ರೀಯ ಯುವ ದಿನಾಚರಣೆ’

ವಿಟ್ಲ: ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ‘ರಾಷ್ಟ್ರೀಯ ಯುವ ದಿನಾಚರಣೆ’ ಕಾರ್ಯಕ್ರಮ ದಿನಾಂಕ 12.01.21 ಜೆ.ಸಿ.ಐ ವಿಟ್ಲ ಘಟಕದ ನೇತ್ರತ್ವದಲ್ಲಿ ಚಂದಳಿಕೆಯ ‘ಯುವ ಕೇಸರಿ ಅಭೀರಿ-ಅತಿಕಾರಬೈಲು (ರಿ)’ ಇಲ್ಲಿ ನೆರವೇರಿತು.

ಜೆ.ಸಿ.ದೀಕ್ಷಿತರ ‘ಜೆ.ಸಿ. ವಾಣಿ’ಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಸರ್ವರನ್ನೂ ಸ್ವಾಗತಿಸಿದ ಜೆ.ಸಿ ಐ ವಿಟ್ಲದ 2021 ರ ನೂತನ ಅಧ್ಯಕ್ಷರಾದ ಜೆ.ಸಿ.ಚಂದ್ರಹಾಸ ಶೆಟ್ಟಿ ತಮ್ಮ ಘಟಕದ ಪ್ರಥಮ ಕಾರ್ಯಕ್ರಮವಾಗಿ ವಿವೇಕಾನಂದರ ಜನ್ಮದಿನಾಚರಣೆ ನಡೆಸಲು ಅತೀವ ಹರ್ಷ ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಅತಿಥಿಗಳಾದ ಯುವ ಕೇಸರಿ ಯುವಕ ಸಂಘದ ಅಧ್ಯಕ್ಷರಾದ ಗಂಗಾಧರ ಪೂಜಾರಿ ಪರನೀರು ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾದ ಜೆ.ಸಿ.ಅಣ್ಣಪ್ಪ ಸಾಸ್ತನರು ಯುವಕರ ಸಂಘಟನೆ ಜೆ.ಸಿ.ಐ ಗೂ ಸ್ವಾಮಿ ವಿವೇಕಾನಂದರ ತತ್ವಗಳಿಗೂ ತುಲನಾತ್ಮಕ ಸಂಬಂಧವನ್ನು ತಿಳಿಸಿದರು.ಇಂದಿನ ಯುವ ಜನತೆಗೆ ಸ್ವಾಮಿ ವಿವೇಕಾನಂದರು ಆದರ್ಶ ಪ್ರಾಯರಾಗಬೇಕೆಂದು ಕರೆಕೊಟ್ಟರು.

ಜೆ.ಸಿ.ಐ ವಿಟ್ಲ ದ ನಿಕಟ ಪೂರ್ವಾಧ್ಯಕ್ಷರಾದ ಜೆ.ಸಿ.ದಿನೇಶ್ ಶೆಟ್ಟಿ ಯುವದಿನದ ಶುಭಾಶಯ ಕೋರಿದರು.ಯುವಕ ಮಂಡಲದ ಕಾರ್ಯದರ್ಶಿ ಯೋಗೀಶ ಕೆಪಳಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೆಸಿಐ ವಿಟ್ಲದ ಪೂರ್ವಾಧ್ಯಕ್ಷರು,ಪದಾಧಿಕಾರಿಗಳು,ಸದಸ್ಯರು,ಯುವಕೇಸರಿಯ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಜೆ.ಸಿ ವಿಟ್ಲ ಘಟಕದ ಕಾರ್ಯದರ್ಶಿ ಜೆ.ಸಿ ಪರಮೇಶ್ವರ ಹೆಗಡೆ ವಂದನಾರ್ಪಣೆ ಸಲ್ಲಿಸಿದರು.

- Advertisement -

MOST POPULAR

HOT NEWS

Related news

error: Content is protected !!