Thursday, April 25, 2024
spot_imgspot_img
spot_imgspot_img

ವಿಟ್ಲ: ಅದ್ಧೂರಿಯಿಂದ ನಡೆದ ಧ್ವನಿ ಬೆಳಕು ಸಂಯೋಜಕರ ಒಕ್ಕೂಟ (ರಿ) ಬಂಟ್ವಾಳ ತಾಲೂಕು ದ.ಕ ಇದರ ವಿಟ್ಲ ವಲಯ ವತಿಯಿಂದ ಮುಕ್ತ ಪ್ರೊ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

- Advertisement -G L Acharya panikkar
- Advertisement -

ವಿಟ್ಲ: ಧ್ವನಿ ಬೆಳಕು ಸಂಯೋಜಕರ ಒಕ್ಕೂಟ (ರಿ) ಬಂಟ್ವಾಳ ತಾಲೂಕು ದ.ಕ ಇದರ ವಿಟ್ಲ ವಲಯ ವತಿಯಿಂದ ದಸರಾ ಕ್ರೀಡೋತ್ಸವದ ಪ್ರಯುಕ್ತ ಕಾರ್ಮಿಕ ಕ್ಷೇಮ ನಿಧಿಯ ಸಹಾಯಾರ್ಥವಾಗಿ ಮುಕ್ತ ಪ್ರೊ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲದಲ್ಲಿ ಅದ್ಧೂರಿಯಾಗಿ ನಡೆಯಿತು.

ರವಿಚಂದ್ರ ಉಕ್ಕುಡ ಅಧ್ಯಕ್ಷರು, ಧ್ವನಿಬೆಳಕು ಸಂಯೋಜಕ ವಿಟ್ಲ ವಲಯ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮನೋಹರ್ ಲ್ಯಾನ್ಸಿ ಡಿ’ಸೋಜ ಉಪಾಧ್ಯಕ್ಷರು ಪಾಲನಾ ಸಮಿತಿ ಶೋಕಮಾತೆ ಇಗರ್ಜಿ ವಿಟ್ಲ, ಪ್ರಕಾಶ್ ನಾಯಕ್, ಅಧ್ಯಕ್ಷರು ರೊಟರಿ ಕ್ಲಬ್ ವಿಟ್ಲ, ರಾಜಶೇಖರ್ ಶೆಟ್ಟಿ, ಜಿಲ್ಲಾಧ್ಯಕ್ಷರು ಧ್ವನಿವರ್ಧಕ ಮತ್ತು ದೀಪಾಲಂಕಾರ ಮ್ಹಾಲಕರ ಸಂಘ ದ.ಕ, ಜೇಸಿ ಚಂದ್ರಹಾಸ ಕೊಪ್ಪಳ ಅಧ್ಯಕ್ಷರು ಜೇಸಿಐ ವಿಟ್ಲ, ರಮೇಶ್ ಆಳ್ವ ಧರ್ಮನಗರ, ಅಧ್ಯಕ್ಷರು ಎಸ್‌ಡಿಎಮ್‌ಸಿ ಸರಕಾರಿ ಪ್ರಾಥಮಿಕ ಶಾಲೆ ವಿಟ್ಲ, ರವಿವರ್ಮ, ಸ್ಥಾಪಕಾಧ್ಯಕ್ಷರು ಧ್ವನಿಬೆಳಕು ಸಂಯೋಜಕ ಒಕ್ಕೂಟ (ರಿ) ಬಂಟ್ವಾಳ, ಪ್ರೇಮಲತಾ ಪಿ. ಪ್ರಭಾರ ಮುಖ್ಯೋಪಾಧ್ಯಾಯಿನಿ ಸರಕಾರಿ ಪ್ರಾಥಮಿಕ ಶಾಲೆ ಎಸ್‌ಡಿಎಮ್ ವಿಟ್ಲ, ಪುಷ್ಪ ಹೆಚ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಸರಕಾರಿ ಪ್ರಾಥಮಿಕ ಶಾಲೆ ಎಸ್‌ಡಿಎಮ್ ವಿಟ್ಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯ ಅತಿಥಿಗಳು ಕಬಡ್ಡಿ ಪಂದ್ಯಾಟಕ್ಕೆ ಶುಭಹಾರೈಸಿದರು. ವಿಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ರಾಜಶೇಖರ್ ಶೆಟ್ಟಿ, ಜಿಲ್ಲಾಧ್ಯಕ್ಷರು ಧ್ವನಿವರ್ಧಕ ಮತ್ತು ದೀಪಾಲಂಕಾರ ಮ್ಹಾಲಕರ ಸಂಘ ದ.ಕ ಸ್ವಾಗತಿಸಿದರು.

ಧನ್‌ರಾಜ್ ಶೆಟ್ಟಿ ಫರಂಗಿಪೇಟೆ, ಅಧ್ಯಕ್ಷರು ಧ್ವನಿಬೆಳಕು ಸಂಯೋಜಕ ಒಕ್ಕೂಟ (ರಿ) ಬಂಟ್ವಾಳ ತಾಲೂಕು ಇವರ ಅಧ್ಯಕ್ಷತೆಯಲ್ಲಿ “ಸನ್ಮಾನ ಕಾರ್ಯಕ್ರಮ ಮತ್ತು ನಿವೃತ್ತ ಯೋಧರಿಗೆ ಹಿರಿಯ ಧ್ವನಿಬೆಳಕು ಸಂಯೋಜಕರಿಗೆ ಮತ್ತು ಹಿರಿಯ ಕಲಾವಿದರಿಗೆ ಗೌರವಾರ್ಪಣೆ” ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಹರೀಶ್ ಶೆಟ್ಟಿ, ಕರುಣಾಕರ ಗೌಡ ಎನ್, ದಯಾನಂದ ನೆತ್ತೆರಕೆರೆ, ವೆಂಕಪ್ಪ ಗೌಡ, ಸೇಸಪ್ಪ ಗೌಡ ಹಡೀಲು, ಗಿರೀಶ್ ಎಸ್, ನಾಗರಾಜ್ ಭಟ್ ಕುಕ್ಕಿಲ ಇವರ ದೇಶ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಹಾಗೂ ಕಲಾ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ಕಲಾವಿದರಾದ ಚನಿಲ ಶ್ರೀ ಸುಬ್ರಹ್ಮಣ್ಯ ಭಟ್, ವಿದೂಪಿ ಶ್ರೀಮತಿ ನಯನಾ ಸತ್ಯನಾರಾಯಣ, ಶ್ರೀ ಚಂದ್ರಶೇಖರ ವರ್ಮ ವಿಟ್ಲ, ಹಾಗೂ ಹಿರಿಯ ಧ್ವನಿ ಬೆಳಕು ಸಂಯೋಜಕರಾದ ವಿ.ಪಕೀರ, ಮಹಮ್ಮದ್ ವಿ, ಕೆ.ಎಂ ಮೊಹಮ್ಮದ್ ಇವರ ಸೇವೆಯನ್ನು ಗುರುತಿಸಿ ಗೌರವಾರ್ಪಣೆ ಸಲ್ಲಿಸಲಾಯಿತು.

ಸಂಜೀವ ಮಠಂದೂರು ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ, ಎಂ.ಎಸ್ ಮಹಮ್ಮದ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಲಯನ್ ಸಂಜೀವ ಪೂಜಾರಿ ಭಾರತ್ ಗ್ರೂಪ್ ಅಧ್ಯಕ್ಷರು ಶಾಮಿಯಾನ ಮಾಲಕರ ಸಂಘ ವಿಟ್ಲ ವಲಯ, , ಬಾಬು ಕೆ.ವಿ ಅಧ್ಯಕ್ಷರು ದ.ಕ ಶಾಮಿಯಾನ ಮಾಲಕರ ಸಂಘ (ರಿ), ಧನ್‌ರಾಜ್ ಶೆಟ್ಟಿ ಫರಂಗಿಪೇಟೆ, ಅಧ್ಯಕ್ಷರು ಧ್ವನಿಬೆಳಕು ಸಂಯೋಜಕ ಒಕ್ಕೂಟ (ರಿ) ಬಂಟ್ವಾಳ ತಾಲೂಕು ಇವರು ಮಾತನಾಡಿ ಕಬಡ್ಡಿ ಪಂದ್ಯಾಟದ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ರವಿಚಂದ್ರ ಉಕ್ಕುಡ, ಧ್ವನಿಬೆಳಕು ಸಂಯೋಜಕ ಒಕ್ಕೂಟ(ರಿ) ವಿಟ್ಲ, ನಾಗರಾಜ ಹೆಚ್.ಇ ಪೊಲೀಸ್ ನಿರೀಕ್ಷಕರು ಪೊಲೀಸ್ ಠಾಣೆ ವಿಟ್ಲ, ಕೃಷ್ಣಯ್ಯ ಕೆ ವಿಟ್ಲ ಅರಮನೆ, ಸುಬ್ರಾಯ ಪೈ ಉದ್ಯಮಿಗಳು ವಿಟ್ಲ, ಶೇಖ್ ಸುಭಾನ್, ಮಾಜಿ ಅಧ್ಯಕ್ಷರು ಧ್ವನಿ ಬೆಳಕು ಸಂಯೋಜಕ ಒಕ್ಕೂಟ(ರಿ) ಬಂಟ್ವಾಳ ತಾಲೂಕು, ಸಂತೋಷ್ ಕುರಿಯಾಳ, ಕಾರ್ಯದರ್ಶಿ ಧ್ವನಿ ಬೆಳಕು ಸಂಯೋಜಕ ಒಕ್ಕೂಟ(ರಿ) ಬಂಟ್ವಾಳ ತಾಲೂಕು, ಚಂದ್ರಹಾಸ ಸುವರ್ಣ ಶ್ರೀದೇವಿ ಶಾಮಿಯಾನ, ಸುಭಾಶ್ಚಂದ್ರ ನಾಯಕ್ ಉದ್ಯಮಿಗಳು ವಿಟ್ಲ, ಸತೀಶ್ ಸಪಲ್ಯ ಸಹಾಯಕ ಇಂಜಿನಿಯರ್ ಮೆಸ್ಕಾಂ ವಿಟ್ಲ, ಜಯರಾಮ್ ರೈ ಖ್ಯಾತ ವಕೀಲರು ಮತ್ತು ಒಕ್ಕೂಟದ ಕಾನೂನು ಸಲಹೆಗಾರರು, , ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಅಧ್ಯಕ್ಷರು ವ್ಯ.ಸೇ.ಸ.ಸಂಘ ವಿಟ್ಲ ಪಡ್ನೂರು, ಹರಿಪ್ರಸಾದ್ ಯಾದವ್ ಅಡ್ಯನಡ್ಕ, ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಸುದೀಪ್ ಶೆಟ್ಟಿ ಮಾಣಿ, ಸದಸ್ಯರು ಮಾಣಿ ಗ್ರಾಮ ಪಂಚಾಯತ್, ರವೀಶ್ ಶೆಟ್ಟಿ ಕಾರ್ಕಳ ಮಾಜಿ ಅಧ್ಯಕ್ಷರು ವಿಟ್ಲಪಡ್ನೂರು ಗ್ರಾಮ ಪಂಚಾಯತ್, ರೇಷ್ಮಾ ಶಂಕರಿ ಬಲಿಪಗುಳಿ ಉಪಸ್ಥಿತರಿದ್ದರು.

astr

ಅಧ್ಯಕ್ಷರು ವಿಟ್ಲ ಪಡ್ನೂರು ಗ್ರಾಮ ಪಂಚಾಯತ್, ಮೊಯ್ದಿನ್ ಕುಟ್ಟಿ ಉಪ್ಪಿನಂಗಡಿ, ರಾಜ್ಯಾಧ್ಯಕ್ಷರು ಎಸ್‌ಡಿಎಂಸಿ ಸಮನ್ವಯ ವೇದಿಕೆ, ರಮಾನಾಥ ವಿಟ್ಲ ವಿಆರ್‌ಸಿ ವಿಟ್ಲ, ಅರುಣ್ ವಿಟ್ಲ, ಸದಸ್ಯರು ಪಟ್ಟಣ ಪಂಚಾಯತ್, ಅಶೋಕ್ ಶೆಟ್ಟಿ ಸದಸ್ಯರು ಪಟ್ಟಣ ಪಂಚಾಯತ್, ಉದಯ ಕುಮಾರ್ ದಂಬೆ ಸದಸ್ಯರು ಗ್ರಾಮ ಪಂಚಾಯತ್ ಪುಣಚ, ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷರು ಶ್ರೀ ಗಣೇಶೋತ್ಸವ ಸಮಿತಿ ವಿಟ್ಲ, ಹಮೀದ್ ಕಂಬಳಬೆಟ್ಟು ಸದಸ್ಯರು ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೊಸಿಯೇಶನ್, ಡಾ.ವೈದ್ಯರತ್ನ ಮಾತುಕುಟ್ಟಿ, ವೈದ್ಯರು ಅಡ್ಯನಡ್ಕ, ಸಹದ್ ಎಲೈಡ್ ಅಡ್ಯನಡ್ಕ ಉದ್ಯಮಿಗಳು ಅಡ್ಯನಡ್ಕ, ಗೋಪಾಲ ಪಾಟಾಳಿ ಉದ್ಯಮಿಗಳು ಕುದ್ದುಪದವು, ರಶೀದ್ ಬನಾರಿ ವಿಟ್ಲ, ಕಬಡ್ಡಿ ಆಟಗಾರ, ಮೈಕಲ್ ಡಿ,ಕೋಸ್ತಾ, ಅಧ್ಯಕ್ಷರು ಧ್ವನಿ ಬೆಳಕು ಸಂಯೋಜಕರ ಒಕ್ಕೂಟ (ರಿ) ಸಿದ್ದಕಟ್ಟೆ ವಲಯ, ಕುಶಾಲ್‌ರಾಜ್ ಉಪಾಧ್ಯಕ್ಷರು ಧ್ವನಿಬೆಳಕು ಸಂಯೋಜಕರ ಒಕ್ಕೂಟ (ರಿ) ಬಂಟ್ವಾಳ ತಾಲೂಕು, ಚಂದ್ರಶೇಖರ ಎಂ. ಅಧ್ಯಕ್ಷರು ಧ್ವನಿವರ್ಧಕ ಮತ್ತು ದೀಪಾಲಂಕಾರ ಸಂಘ(ರಿ) ಬೆಳ್ತಂಗಡಿ ತಾಲೂಕು, ಅಶೋಕ್ ಕುಮಾರ್ ಅಧ್ಯಕ್ಷರು ಧ್ವನಿ ಮತ್ತು ಬೆಳಕು ಮಾಲಕಕರ ಸಂಘ(ರಿ) ಮಂಗಳೂರು ತಾಲೂಕು, ಗಿರಿಧರ ಸ್ಕಂದ, ಅಧ್ಯಕ್ಷರು ಶಾಮಿಯಾನ ಮತ್ತು ಧ್ವನಿಬೆಳಕು ಸಂಯೋಜಕರ ಒಕ್ಕೂಟ ಸುಳ್ಯ ತಾಲೂಕು, ಮಂಜುನಾಥ, ಅಧ್ಯಕ್ಷರು ಶಾಮಿಯಾನ ಮತ್ತು ಧ್ವನಿಬೆಳಕು ಮಾಲಕರ ಸಂಘ(ರಿ) ಪುತ್ತೂರು ತಾಲೂಕು, ರಶೀದ್ ವಿಟ್ಲ ಅಧ್ಯಕ್ಷರು, ಪಬ್ಲಿಕ್ ಸ್ಕೂಲ್ ಉಕ್ಕುಡ, ಮಹಮ್ಮದ್ ಇಕ್ಬಾಲ್ ಹಳೆಮನೆ ಕಾರ್ಯದರ್ಶಿ, ಶಾಮಿಯಾನ ಮಾಲಕರ ಸಂಘ ವಿಟ್ಲ ವಲಯ ದ.ಕ, ಪ್ರಶಾಂತ್ ಶೆಟ್ಟಿ ಬರೆ ಮೊದಲಾದವರು ಉಪಸ್ಥಿತರಿದ್ದರು.

ಸುಮಾರು 25 ತಂಡಗಳ ಪೈಪೋಟಿಯ ನಡುವೆ ನಡೆದ ಮನೋರಂಜನಕಾರಿ ಕಬಡ್ಡಿ ಪಂದ್ಯಾಟದಲ್ಲಿ ವಿಷ್ಣುಮೂರ್ತಿ ಕುಂಡಡ್ಕ ತಂಡ 15,000 ನಗದು ಹಾಗೂ ಧ್ವನಿಬೆಳಕು ಟ್ರೋಫಿಯೊಂದಿಗೆ ಪ್ರಥಮ ಸ್ಥಾನ ಪಡೆದು ಮಿಂಚಿದ್ದಾರೆ. ಚಂದಳಿಕೆ ಭಾರತ್ ಅಡಿಟೋರಿಯಂ ತಂಡ ದ್ವಿತೀಯ ಸ್ಥಾನದೊಂದಿಗೆ 10,000 ನಗದು ಹಾಗೂ ಧ್ವನಿಬೆಳಕು ಟ್ರೋಫಿಯೊಂದಿಗೆ ರನ್ನರ್ಸ್ ಆಗಿ ಹೊರಹೊಮ್ಮಿದರು.

ನೆರೆದಿದ್ದ ಸುಮಾರು ಸಾವಿರ ಸಂಖ್ಯೆಯ ಕಬಡ್ಡಿ ಪ್ರೇಮಿಗಳು ಕಬಡ್ಡಿ ಪಂದ್ಯಾಟವನ್ನು ಹುರಿದುಂಬಿಸಿದರು. ವಿಟಿವಿಯಲ್ಲಿ ಪ್ರಸಾರಗೊಂಡ ಕಬಡ್ಡಿ ಪಂದ್ಯಾಟದ ನೇರಪ್ರಸಾರವನ್ನು ವೀಕ್ಷಿಸಿದ ಸುಮಾರು 75,000 ವೀಕ್ಷಕರು ಕಬಡ್ಡಿ ಪಂದ್ಯಾಟದ ಯಶಸ್ಸಿನಲ್ಲಿ ಭಾಗಿಯಾಗಿದ್ದರು.

- Advertisement -

Related news

error: Content is protected !!