Saturday, May 4, 2024
spot_imgspot_img
spot_imgspot_img

ವಿಟ್ಲ: ಲಯನ್ಸ್‌ ಕ್ಲಬ್‌ ವಿಟ್ಲ ಸಿಟಿ ಆಶ್ರಯದಲ್ಲಿ (ಮಾ. 10) ಮಹಿಳಾ ಕ್ರೀಡೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಲಯನ್ಸ್‌ ಕ್ಲಬ್‌ ವಿಟ್ಲ ಸಿಟಿ ಆಶ್ರಯದಲ್ಲಿ ವಿಟ್ಲ ಪಡ್ನೂರು ಗ್ರಾಮದ ಎಲ್ಲಾ ಅಂಗನವಾಡಿ ಕೇಂದ್ರಗಳ ಬಾಲವಿಕಾಸ ಸಮಿತಿ, ಹಾಗೂ ಶ್ರೀಶಕ್ತಿ ಸಂಘದ ವತಿಯಿಂದ ಗ್ರಾಮೀಣ ಮಟ್ಟದ ಮಹಿಳೆಯರಿಗಾಗಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಕ್ರೀಡೋತ್ಸವ ಮಾರ್ಚ್‌ 10 ನೇ ಆದಿತ್ಯವಾರದಂದು ಜಿಲ್ಲಾ ಪಂಚಾಯತ್‌ ಹಿರಿಯ ಪ್ರಾಥಮಿಕ ಶಾಲೆ ಕಡಂಬುವಿನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆಯನ್ನು ವಿಟ್ಲ ಅರಮನೆಯ ಉಸ್ತುವಾರಿ ಕೃಷ್ಣಯ್ಯ ವಿಟ್ಲ ಅರಮನೆ ಇವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್‌ ಕ್ಲಬ್‌ ವಿಟ್ಲ ಸಿಟಿ ಅಧ್ಯಕ್ಷ ಜಯರಾಮ್‌ ಬಲ್ಲಾಳ್‌, ಲ.ಸತೀಶ್‌ ಕುಮಾರ್‌ ಆಳ್ವ, ಲ.ಸಂದೇಶ್‌ ಶೆಟ್ಟಿ ಬಿಕ್ನಾಜೆ, ಲ. ಸುದರ್ಶನ್‌ ಪಡಿಯಾರ್‌, ಲ. ಧರ್ಣಪ್ಪ ಗೌಡ, ಲ.ಮೋಹನ್‌ ಕಟ್ಟೆ, ದಿನೇಶ್‌ ಆಚಾರ್‌,ಸುರೇಶ್‌ ಆಚಾರ್‌ ಚನಿಲ ಮುಂತಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!