- Advertisement -
- Advertisement -
ವಿಟ್ಲ: ಜಿಲ್ಲಾಡಳಿತ ಕರೆ ನೀಡಿರುವ ಲಾಕ್ ಡೌನ್ ವಿಟ್ಲದಲ್ಲಿ ಯಶಸ್ವಿಯಾಗಿದೆ.
ಬೆಳಿಗ್ಗೆ 8 ಗಂಟೆಯಿಂದ 11 ಗಂಟೆ ವರೆಗೆ ಅಗತ್ಯ ಸಾಮಾಗ್ರಿ ಖರೀದಿಸಲು ಜನರು ಪೇಟೆಗೆ ಆಗಮಿಸಿದ್ದರು. ಪಡಿತರ ಅಂಗಡಿ, ಕೋಳಿ, ಮಾಂಸ, ಹಾಲು, ತರಕಾರಿ, ಮೆಡಿಕಲ್ ತೆರೆಯಲಾಗಿತ್ತು.
11 ಗಂಟೆ ಬಳಿಕ ಮೆಡಿಕಲ್ ಹೊರತುಪಡಿಸಿ ಮತ್ತೆ ಎಲ್ಲವೂ ಬಂದ್ ಆಗಿದೆ. ಮಳೆ ಜೋರಾಗಿ ಇದ್ದಿದ್ದರಿಂದ ಹೆಚ್ಚಿನ ಜನರು ಪೇಟೆಗೆ ಆಗಮಿಸಿಲ್ಲ.
ಬಂಟ್ವಾಳ ಸಂಚಾರ ಠಾಣಾ ಎಸೈ ರಾಜೇಶ್ ಕೆ.ವಿ ನೇತೃತ್ವದಲ್ಲಿ ವಿಟ್ಲ ಪೊಲೀಸರ ತಂಡ ನಾಕಾಬಂಧಿ ಅಳವಡಿಸಿ, ಲಾಕ್ ಡೌನ್ ಯಶಸ್ವಿಗೆ ಸಹಕರಿಸಿದರು.
- Advertisement -