Saturday, June 20, 2026
spot_imgspot_img
spot_imgspot_img

ಕಾರುಗಳ ನಡುವೆ ಡಿಕ್ಕಿ; ಇಬ್ಬರು ಮೃತ್ಯು; 6 ಮಂದಿ ಗಾಯ..!

- Advertisement -
- Advertisement -

ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟು, 6 ಜನರು ಗಾಯಗೊಂಡ ಘಟನೆ ಕಲಬುರಗಿ ಶಹಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಭಂಕೂರ ಬಳಿ ನಡೆದಿದೆ.

ಮೃತಪಟ್ಟವರನ್ನು ಮೃತರನ್ನು ಮುಂಬೈ ಮೂಲದ ಶಾಕೀರ್ (30) ಮತ್ತು ಜಹೀರ್ (22) ಎಂದು ಗುರುತಿಸಲಾಗಿದೆ.

ಮೃತ ಶಾಕೀರ್ ಮತ್ತು ಜಹೀರ್ ಬಟ್ಟೆ ವ್ಯಾಪಾರ ಮಾಡುತ್ತಿದ್ದರು.ಬಟ್ಟೆ ಮಾರಾಟಕ್ಕೆಂದು ಶಾಕೀರ್, ಜಹೀರ್ ಮತ್ತು ಇನ್ನೊಬ್ಬ ಸೇರಿ ಒಟ್ಟು ಮೂರು ಜನ ಸ್ವಿಫ್ಟ್ ಕಾರಿನಲ್ಲಿ ಕಲಬುರಗಿಯಿಂದ ಶಹಾಪುರ ಕಡೆಗೆ ಹೊರಟಿದ್ದರು.

ಎದುರಿನಿಂದ ಬರುತ್ತಿದ್ದ ಸ್ಕಾರ್ಪಿಯೋ ಕಾರು ಮತ್ತು ಸ್ವಿಫ್ಟ್ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಶಾಕೀ‌ರ್ ಮತ್ತು ಜಹೀ‌ರ್ ಸಾವನ್ನಪ್ಪಿದ್ದಾರೆ. ಇವರೊಡನೆ ಇದ್ದ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ.ಸ್ಕಾರ್ಪಿಯೋ ಕಾರಿನಲ್ಲಿದ್ದ ಐವರಿಗೆ ಗಾಯಗಳಾಗಿವೆ. ಈ ಸಂಬಂಧ ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

- Advertisement -

Related news

error: Content is protected !!