Thursday, June 18, 2026
spot_imgspot_img
spot_imgspot_img

ವಿಟ್ಲ: ದಶಕಗಳ ವಾಲಿಬಾಲ್ ಕ್ರೀಡಾಪಟು ಮೈರ ಹರೀಶ್ ನಿಧನ

- Advertisement -
- Advertisement -

ವಿಟ್ಲ: ಕಳೆದ ಮೂರು ದಶಕಗಳಿಂದ ವಿಟ್ಲದ ವಾಲಿಬಾಲ್ ಕ್ರೀಡಾಪಟುವಾಗಿ, ಹಲವಾರು ವಾಲಿಬಾಲ್ ಕ್ರೀಡಾಳುಗಳ ತರಬೇತುದಾರರಾಗಿ, ರಾಜ್ಯಮಟ್ಟದ ತೀರ್ಪುಗಾರರಾಗಿದ್ದ ಮೈರ ಹರೀಶ್ ಆಚಾರ್ಯ ಇಂದು ತಮ್ಮ ಜೀವನದ ಆಟವನ್ನು ಮುಗಿಸಿದರು.

ವಿಟ್ಲದಲ್ಲಿ ವಾಲಿಬಾಲ್ ಆಟಕ್ಕೆ ಹೊಸ ಭಾಷ್ಯ ಬರೆದವರು ಇವರು. ಕ್ರೀಡಾಳುಗಳಿಗೆ ತರಬೇತುದಾರರಾಗಿ ಹಲವಾರು ಕ್ರೀಡಾಳುಗಳನ್ನು ತರಬೇತಿಗೊಳಿಸಿದ ಹೆಗ್ಗಳಿಕೆ ಹರೀಶ್ ಆಚಾರ್ಯ ರವರಿಗೆ ಸಲ್ಲುತ್ತದೆ.

ವಾಲಿಬಾಲ್ ನಲ್ಲಿ ರಾಜ್ಯಮಟ್ಟದ ತೀರ್ಪುಗಾರ ರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಂದು ತಮ್ಮ ಜೀವನದ ಯಾತ್ರೆ ಮುಗಿಸಿರುವ ಹರೀಶ್ ಆಚಾರ್ಯರವರು ಅಪಾರ ಕ್ರೀಡಾಭಿಮಾನಿಗಳನ್ನು ಅಗಲಿದ್ದಾರೆ.

- Advertisement -

Related news

error: Content is protected !!