Tuesday, June 16, 2026
spot_imgspot_img
spot_imgspot_img

ವಿಟ್ಲ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

- Advertisement -
- Advertisement -

ವಿಟ್ಲ: ರಸ್ತೆ ಬದಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನೆಟ್ಲ ಮುಡ್ನೂರು ಗ್ರಾಮದ ಗಣೇಶ್ ನಗರ ಎಂಬಲ್ಲಿ ನಡೆದಿದೆ.

ಆರೋಪಿಯನ್ನು ಬಂಟ್ವಾಳ ಮುಡ್ನೂರು ಗ್ರಾಮದ ನಿವಾಸಿ ಶಶಿಧರ ಶೆಟ್ಟಿ ಎನ್ನಲಾಗಿದೆ. ಆರೋಪಿಯಿಂದ ಅಂದಾಜು ರೂ. 1,516.21/- ಮೌಲ್ಯದ ವಿವಿಧ ಕಂಪೆನಿಯ ಒಟ್ಟು ಪ್ರಮಾಣ 2.880 ಲೀಟರ್ ಅಕ್ರಮ ಮದ್ಯದ ಸ್ಯಾಚೆಟ್ ಗಳು ಹಾಗೂ ಮದ್ಯ ಮಾರಾಟದಿಂದ ಬಂದ ರೂಪಾಯಿ 550/- ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯು ಅನಂತಾಡಿ ಗ್ರಾಮದ ಗೋಳಿಕಟ್ಟೆ ಎಂಬಲ್ಲಿರುವ ಮದಿರಾ ವೈನ್ ಶಾಪ್‌ನಿಂದ ಮದ್ಯವನ್ನು ಖರೀದಿಸಿ ಹೆಚ್ಚಿನ ಬೆಲೆ ಮಾರಾಟ ಮಾಡುವುದಾಗಿ ಒಪ್ಪಿಕೊಂಡಿದ್ದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Insta: glacharyajewellers
Fb: glacharya

- Advertisement -

Related news

error: Content is protected !!