- Advertisement -
- Advertisement -

ವಿಟ್ಲ: ಬೈತಡ್ಕ ಹೊಳೆಗೆ ಕಾರು ಬಿದ್ದು ಯುವಕರಿಬ್ಬರು ನಾಪತ್ತೆಯಾದ ಪ್ರಕಾರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದೆ. ವಿಟ್ಲಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಮನೆಯಿಂದ ಮದುವೆ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ಯುವಕ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಕನ್ಯಾನ ಗ್ರಾಮದ ಕೋನಾಲೆ ಎಂಬಲ್ಲಿ ನಡೆದಿದೆ.
ಕನ್ಯಾನ ಗ್ರಾಮದ ಕೋನಾಲೆ ನಿವಾಸಿ ಧನಂಜಯ(26) ಕಾಣೆಯಾದ ಯುವಕ.

ಧನಂಜಯರವರು ಲೈಟಿಂಗ್ ಕೆಲಸ ನಿರ್ವಹಿಸುತ್ತಿದ್ದು, ಇವರು (ಜು.8) ರಂದು ಬೆಳಿಗ್ಗೆ ಮನೆಯಿಂದ ಬನಾರಿ ಗೋಪಾಲ ಕೃಷ್ಣ ದೇವಸ್ಥಾನಕ್ಕೆ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವರು ಇಲ್ಲಿಯವರೆಗೂ ಮನೆಗೆ ಬಾರದೆ ಇದ್ದು, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಧನಂಜಯರವರ ತಮ್ಮ ಯಶವಂತರವರು ನೀಡಿದ ದೂರಿನನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -