Friday, April 26, 2024
spot_imgspot_img
spot_imgspot_img

ಉಳ್ಳಾಲ: ವಾಸ್ತು ಪೂಜೆ ವೇಳೆ ನಗದು ಎಗರಿಸಿ ಪರಾರಿ, ಪಕ್ಕದ ಮನೆಯಲ್ಲೂ ಕೈ ಚಳಕ ತೋರಿದ ಖದೀಮ

- Advertisement -G L Acharya panikkar
- Advertisement -
vtv vitla

ಉಳ್ಳಾಲ: ಗೃಹಪ್ರವೇಶಕ್ಕೆ ಹಿಂದಿನ ದಿನ ವಾಸ್ತು ಪೂಜೆ ನಡೆಯುತ್ತಿದ್ದ ಸಂದರ್ಭ ಹೊಗೆ ತುಂಬಿದ್ದ ವೇಳೆ ಕಳ್ಳನೋರ್ವ ಮನೆಗೆ ನುಗ್ಗಿದ ಕದ್ದೊಯ್ದಿಲ್ಲದೇ, ಅದೇ ರಾತ್ರಿ ನೆರೆಮನೆಯಿಂದಲೂ ಲಕ್ಷಾಂತರ ಮೌಲ್ಯದ ನಗ ನಗದು ದೋಚಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಬಳಿ ನಡೆದಿದೆ.

ಡಿ.10ರಂದು ರಾತ್ರಿ ಸ್ಮಿತಾ-ದಾಮೋದರ್ ದಂಪತಿ ಕೋಟೆಕಾರು ಪಟ್ಟಣ ಪಂ. ವ್ಯಾಪ್ತಿಯ ಅಡ್ಕಬೈಲು ಎಂಬಲ್ಲಿ ನೂತನ ಮನೆಯಲ್ಲಿ ವಾಸ್ತು ಹೋಮ ನಡೆಯುತ್ತಿರುವಾಗಲೇ ಎಲ್ಲರ ಸಮ್ಮುಖದಲ್ಲೇ ಹೋಮದ ಹೊಗೆಯ ಲಾಭ ಬಳಸಿ ಒಳ ನುಗ್ಗಿದ್ದ ಬರ್ಮುಡ ಧಾರಿ ಯುವಕನೋರ್ವ ಕೋಣೆಯೊಳಗೆ ನುಗ್ಗಿ ಬ್ಯಾಗಲ್ಲಿದ್ದ ರೂ.15,000 .ನಗದು, ಮೊಬೈಲ್ ಚಾರ್ಜರ್ ಮತ್ತು ಬೆಲೆ ಬಾಳುವ ಕಾಸ್ಮೆಟಿಕ್ಸ್ ಕಳವು ನಡೆಸಿದ್ದಾನೆ.

ಕಳ್ಳ ಹೋಮ ನಡೆಯುತ್ತಿದ್ದ ವೇಳೆ ಮನೆಯೊಳಗಿನ ಕೋಣೆಗೆ ನುಗ್ಗಿ ಹೊರನಡೆಯುವ ದೃಶ್ಯ ಕ್ಯಾಮೆರ ಮೆನ್ ನ ವೀಡಿಯೋದಲ್ಲಿ ದಾಖಲಾಗಿದೆ. ಅದೇ ದಿನ ಮಧ್ಯ ರಾತ್ರಿ ಅಲ್ಲೇ ಸಮೀಪದ ಮನೆಗೂ ರಾತ್ರಿ ಕನ್ನ ಹಾಕಿದ್ದ ಕಳ್ಳ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲನ್ನ ಒಡೆದು ಕೋಣೆಯೊಳಗಿನ ಕಪಾಟಲ್ಲಿದ್ದ 11,000 ರೂ.ನಗದು,32 ಗ್ರಾಂ ಚಿನ್ನ ,8 ಬೆಳ್ಳಿಯ ನಾಣ್ಯ,ಮತ್ತು 3 ರೇಡೋ ವಾಚ್ ಗಳು ಸೇರಿ ಒಟ್ಟು 1,49000 ರೂಪಾಯಿ ಮೌಲ್ಯದ ನಗ,ನಗದನ್ನ ಕದ್ದೊಯ್ದಿದ್ದಾನೆ. ಬರ್ಮುಡ ಧಾರಿ ಕಳ್ಳನ ಜತೆ ಇನ್ನೋರ್ವನು ಇದ್ದು ಇವರಿಬ್ಬರು ಡಿ.10 ರ ರಾತ್ರಿ ಕಳ್ಳತನ ನಡೆದಿದ್ದ ಪ್ರದೇಶ ಅಡ್ಕಬೈಲಿಗೆ ದ್ವಿಚಕ್ರ ವಾಹನದಲ್ಲಿ ಬರುವ ದೃಶ್ಯ ಸಿ.ಸಿಟಿವಿಯಲ್ಲಿ ಸೆರೆಯಾಗಿದೆ.

ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದು ವೀಡಿಯೋ ಫೂಟೇಜ್ ಆಧಾರದಲ್ಲಿ ಕಳ್ಳರ ಶೋಧ ಕಾರ್ಯ ನಡೆಸುತ್ತಿದ್ದಾರೆ.

- Advertisement -

Related news

error: Content is protected !!