Thursday, June 18, 2026
spot_imgspot_img
spot_imgspot_img

ವಿಟ್ಲದಲ್ಲಿ ರೋಯಲ್ ಬೇಕರಿ ಶುಭಾರಂಭ-ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ಬಳಿ ಅದ್ಧೂರಿಯಾಗಿ ಲೋಕಾರ್ಪಣೆ

- Advertisement -
- Advertisement -

ವಿಟ್ಲ: ನಾಲ್ಕು ಮಾರ್ಗ ಜಂಕ್ಷನ್ ನ ಮಂಗಳೂರು ರಸ್ತೆಯ ಬದ್ರಿಯಾ ಟೆಕ್ಸ್ ಟೈಲ್ ಮುಂಭಾಗದಲ್ಲಿ ನೂತನವಾಗಿ ರೋಯಲ್ ಬೇಕರಿ ಶುಭಾರಂಭಗೊಂಡಿತು.

ಕೇಂದ್ರ ಮುಶಾವರದ ಸದಸ್ಯ ಅಬ್ದುಲ್ ಖಾದರ್ ಅಲ್ ಖಾಸಿಮ್ ಬಂಬ್ರಾಣ ದುವಾಃ ಆಶೀರ್ವಚನ ನೀಡಿ, ಉದ್ಘಾಟಿಸಿದರು. ಒಕ್ಕೆತ್ತೂರು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಮೀದ್ ಲಗ್ಸೂರಿ, ಉಪಾಧ್ಯಕ್ಷ ಹಸೈನಾರ್ ಒಕ್ಕೆತ್ತೂರು, ಉಕ್ಕುಡ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ರಶೀದ್ ವಿಟ್ಲ, ರೋಯಲ್ ಬೇಕರಿಯ ಪಾಲುದಾರರಾದ ದಾವೂದ್ ಒಕ್ಕೆತ್ತೂರು, ಅಲಿ ಒಕ್ಕೆತ್ತೂರು, ರಾಝಿಕ್ ಒಕ್ಕೆತ್ತೂರು ಉಪಸ್ಥಿತರಿದ್ದರು.

ಅತ್ಯಾಧುನಿಕ ಶೋ ರೂಂ ಹೊಂದಿರುವ ಇಲ್ಲಿ ಉತ್ತಮ ಗುಣಮಟ್ಟದ ಸಿಹಿತಿಂಡಿಗಳು, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಉತ್ಪನ್ನಗಳು ಇಲ್ಲಿ ಲಭ್ಯವಿದೆ.


ಬರ್ತ್ ಡೇ ಪಾರ್ಟಿ, ಮದುವೆ ಸಮಾರಂಭ, ವಿವಾಹ ವಾರ್ಷಿಕೋತ್ಸವ, ವಿಶೇಷ ಈವೇಂಟ್, ಮೊದಲಾದ ಸೆಲೆಬ್ರೇಟ್ ವಿಶೇಷ ಕೇಕ್ ಗಳು ಇಲ್ಲಿ ದೊರೆಯಲಿದೆ. ಸಾಮಗ್ರಿಗಳನ್ನು ಮೂರು ಕಿ.ಮೀ ವ್ಯಾಪ್ತಿಯ ಮನೆಬಾಗಿಲಿಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆಗಳನ್ನೂಳಗೊಂಡಿದೆ.

- Advertisement -

Related news

error: Content is protected !!