Friday, March 29, 2024
spot_imgspot_img
spot_imgspot_img

ವಿಟ್ಲ: ಒಡಿಯೂರು ಸಂಸ್ಥಾನದಲ್ಲಿ ಆಟಿದ ಆಯನೋ ಕಾರ್ಯಕ್ರಮಕ್ಕೆ ಶ್ರೀ ಗುರುದೇವಾನಂದ‌ ಸ್ವಾಮೀಜಿಯವರಿಂದ ಚಾಲನೆ!

- Advertisement -G L Acharya panikkar
- Advertisement -
driving

ವಿಟ್ಲ: ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಸಮಿತಿ ಹಾಗೂ ಒಡಿಯೂರ್ದ ತುಳುಕೂಟದ ಸಹಯೋಗದಲ್ಲಿ ಆ.01 ಭಾನುವಾರದಂದು ‘ಆಟಿದ ಆಯನೋ’ ಕಾರ್ಯಕ್ರಮವು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆಯಿತು.

ಇದನ್ನೂ ಓದಿ: ಆನ್​ಲೈನ್​ ಗೇಮ್​ ಗೆ ಬಲಿಯಾದ 13 ವರ್ಷದ ಬಾಲಕ; ಕಳೆದುಕೊಂಡಿದ್ದು ಎಷ್ಟು ಹಣ ಗೊತ್ತಾ?

ಈ ಕಾರ್ಯಕ್ರಮವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ‌ ಸ್ವಾಮೀಜಿಯವರು ದೀಪಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಉಪಸ್ಥಿತರಿದ್ದರು. ರಾಜಶ್ರೀ ಟಿ. ರೈ ಪೆರ್ಲರವರು ‘ಆಟಿದ ಉಲಮರ್ಗಿಲ್’ ವಿಚಾರದ ಬಗ್ಗೆ ಮಾಹಿತಿ ನೀಡಿದರು. ಒಡಿಯೂರು ಶ್ರೀ‌ಷಷ್ಠ್ಯಬ್ದ ಸಮಿತಿ ಅಧ್ಯಕ್ಷರಾದ ಪದ್ಮನಾಭ ಕೊಟ್ಟಾರಿ, ಕೋಶಾಧಿಕಾರಿ ಸುರೇಶ್ ರೈ ಎ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಡಿಯೂರು ತುಳು ಕೂಟದ ಅಧ್ಯಕ್ಷ ಯಶವಂತ ವಿಟ್ಲ ಸ್ವಾಗತಿಸಿ, ಲಿಂಗಪ್ಪ ಗೌಡ ಪಣೆಯಡ್ಕ ಸ್ವಾಮೀಜಿಗೆ ಫಲಪುಷ್ಪ ನೀಡಿದರು.

ಇದನ್ನೂ ಓದಿ: ವಿಟ್ಲ: ಗೃಹರಕ್ಷಕ ದಳ ವಿಟ್ಲ ಒಕ್ಕೂಟ ಮತ್ತು ರೋಟರಿ ಕ್ಲಬ್ ಇದರ ವತಿಯಿಂದ ವನಮಹೋತ್ಸವ

ನಯನಾ ರೈ ಹಾಗೂ ಹರಿಣಾಕ್ಷಿ ಜೆ.ಶೆಟ್ಟಿ ಸಾಧ್ವಿ ಶ್ರೀ ಮಾತಾನಂದಮಯಿಯವರಿಗೆ ಫಲಪುಷ್ಪ ನೀಡಿ, ಸರ್ವಾಣಿ ಪಿ. ಶೆಟ್ಟಿ, ರಘುನಾಥ ಶೆಟ್ಟಿ ಪಟ್ಲ, ಸುಬ್ರಹ್ಮಣ್ಯ ಒಡಿಯೂರು ಅತಿಥಿಗಳಿಗೆ ಎಲೆ ಅಡಿಕೆ ನೀಡಿ ಸ್ವಾಗತಿಸಿದರು. ಶ್ರೀ ಒಡಿಯೂರು ತುಳುಕೂಟದ ಕಾರ್ಯದರ್ಶಿ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!