Thursday, April 25, 2024
spot_imgspot_img
spot_imgspot_img

ಖೋಟಾ ನೋಟು ಜಾಲ ಪತ್ತೆ-ನಾಲ್ವರು ಆರೋಪಿಗಳ ಬಂಧನ!

- Advertisement -G L Acharya panikkar
- Advertisement -

ಹುಬ್ಬಳ್ಳಿ: ಖೋಟಾ ನೋಟು ಜಾಲವನ್ನು ಪತ್ತೆ ಹಚ್ಚಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಗೋಪಿನಾಥ್ ಜಗನ್ನಾಥ್ ಹಬೀಬ, ಶ್ರೀನಿವಾಸ್ ವಾಸಪ್ಪ ತಟ್ಟಿ, ಮೌಲಾಸಾಬ ಮುಕ್ತಂಸಾಬ ಗೂಡಿಹಾಳ ಹಾಗೂ ಸಲಿಂ ಇಮಾಮಸಾಬ ಮುಲ್ಲಾ ಎಂದು ಗುರುತಿಸಲಾಗಿದೆ.


ಹುಬ್ಬಳ್ಳಿಯ ಕೇಶ್ವಾಪೂರ ಠಾಣಾ ವ್ಯಾಪ್ತಿಯಲ್ಲಿ 4 ಮಂದಿ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಡಿಸಿಪಿ ಕೆ. ರಾಮ್‍ರಾಜನ್, ಆರ್ ಬಿ ಬಸರಗಿ ಮಾರ್ಗದರ್ಶನದಲ್ಲಿ ಕೇಶ್ವಾಪೂರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುರೇಶ್ ಜಿ ಕುಂಬಾರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಖೋಟಾ ನೋಟು ಜಾಲವನ್ನು ಪತ್ತೆ ಹಚ್ಚಿದ್ದಾರೆ.

ಸದ್ಯ ಆರೋಪಿಗಳಿಂದ 500 ರೂ. ಮುಖ ಬೆಲೆಯ 93 ಖೋಟಾ ನೋಟುಗಳನ್ನು ಹಾಗೂ 100 ರೂ. ಮುಖ ಬೆಲೆಯ 200 ಖೋಟಾ ನೋಟುಗಳನ್ನು (ಒಟ್ಟು 66,500-00 ರೂ. ಮೌಲ್ಯದ ಖೋಟಾ ನೋಟುಗಳನ್ನು) ಹಾಗೂ 500 ರೂ. ಮುಖ ಬೆಲೆಯ 10 ಅಸಲಿ ನೋಟುಗಳನ್ನು ಮತ್ತು 100 ರೂ. ಮುಖ ಬೆಲೆಯ 2 ಅಸಲಿ ನೋಟುಗಳನ್ನು (ಒಟ್ಟು 5200-00 ರೂ ಮೌಲ್ಯದ ಅಸಲಿ ನೋಟುಗಳನ್ನು) ಜೊತೆಗೆ 4 ವಿವಿಧ ಕಂಪನಿಯ ಮೊಬೈಲ್ ಫೋನ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದೀಗ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಮುಂದುವರಿಸಿದ್ದಾರೆ. ಇನ್ನೂ ಈ ಪ್ರಕರಣ ಕುರಿತಂತೆ ಕೇಶ್ವಾಪೂರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸುರೇಶ್ ಜಿ ಕುಂಬಾರ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಗೆ ಪೊಲೀಸ್ ಆಯುಕ್ತರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

- Advertisement -

Related news

error: Content is protected !!