Friday, April 26, 2024
spot_imgspot_img
spot_imgspot_img

ವಿಟ್ಲ: ಮತ್ತೊಂದು ಬಡ ಕುಟುಂಬಕ್ಕೆ ಸೂರು ನಿರ್ಮಿಸಿ ಆಸರೆಯಾದ ಪೆರುವಾಯಿಯ ಮುಸ್ಲಿಂ ಐಕ್ಯ ವೇದಿಕೆ

- Advertisement -G L Acharya panikkar
- Advertisement -

ಸಮಾಜಮುಖಿ ಕಾರ್ಯದಲ್ಲಿ ತನ್ನನ್ನ ತಾನು ತೊಡಗಿಸಿಕೊಂಡ ಬಂಟ್ವಾಳ ತಾಲೂಕಿನ ಪೆರುವಾಯಿಯ ಮುಸ್ಲಿಂ ಐಕ್ಯ ವೇದಿಕೆಯು ಇತ್ತೀಚಿಗೆ ಹಿಂದೂ ಸಹೋದರಿಯ ಕುಟುಂಬದ ಸೂರಿನ ಅವ್ಯವಸ್ಥೆಯನ್ನು ಕಂಡು ಕೇವಲ 4 ದಿನದಲ್ಲಿ ಸೂರು ನಿರ್ಮಿಸಿ ಸಹೋದರತೆಗೆ ಸಾಕ್ಷಿಯಾಗಿ ಎಲ್ಲೆಡೆಯಿಂದ ಮೆಚ್ಚುಗೆಗಳ ಸಂದೇಶವೇ ಹರಿದಾಡಿತ್ತು.

ಇದೀಗ ತನ್ನದೆ ಸಮುದಾಯದ ಪೆರುವಾಯಿಯ ಮಹಿಳೆಯ ಸೂರಿನ ಅವ್ಯವಸ್ಥೆಯನ್ನು ಕಂಡು ಕಷ್ಟಕ್ಕೆ ಸ್ಪಂದಿಸಿದ ಘಟನೆ ವರದಿಯಾಗಿದ್ದು ಈ ಮನೆ ಹಿಂದೂ ಸಹೋದರಿಯ ಮನೆ ನಿರ್ಮಾಣವಾದ ಒಂದೇ ತಿಂಗಳ ಅಂತರದಲ್ಲಿ ನಡೆದಿದೆ.ಪೆರುವಾಯಿಯ ನೆಬಿಸ ಎಂಬ ಒಂಟಿ ಮಹಿಳೆಯು ತೀರಾ ಬಡತನವನ್ನ ಎದುರಿಸಿ ಕಷ್ಟಕರ ಜೀವನವನ್ನು ನಡೆಸುತ್ತಿದ್ದು ಒಂದು ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದರು. ಈ ಮಹಿಳೆಗೆ ಸರಕಾರದಿಂದ ದೊರಕುವ ಆಶ್ರಯ ಯೋಜನೆಯಡಿಯಲ್ಲಿ ದೊರೆತ ಮನೆಯಾಗಿತ್ತು. ಆದರೆ ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲಿರಲಿಲ್ಲ. ಒಂದು ವರುಷದ ಹಿಂದೆ ಅಲ್ ಅಮೀನ್ ಪೆರುವಾಯಿ ಯು ಎ ಇ ಘಟಕವು ಇಲ್ಲಿಗೆ ವಿದ್ಯುತ್ ಸಂಪರ್ಕ ವನ್ನು ಕಲ್ಪಿಸಿಕೊಟ್ಟರು.

ಮಹಿಳೆಯ ಕಷ್ಟವನ್ನ ಹೇಳ ತೀರದಾಗಿದ್ದು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನವನ್ನು ದೂಡುತ ಅವ್ಯವಸ್ಥೆ ಯಿಂದ ಕೂಡಿದ ಈ ಮನೆಯಲ್ಲಿ ವಾಸವಾಗಿದ್ದರು. ಆದರೆ ಯಾವುದೇ ಜನಪ್ರತಿನಿಧಿಯಾಗಲಿ ಸ್ಥಳೀಯ ಸಂಬAಧಪಟ್ಟವರಾಗಲಿ ಇಲ್ಲಿಯವರೆಗೆ ಈ ಸಮಸ್ಯೆಯನ್ನ ಕೇಳಿದವರಿಲ್ಲ. ಸೂರಿನ ಅವ್ಯವಸ್ಥೆಯ ಸ್ಥಿತಿಗೆ ಸುಮಾರು ಆರು ವರುಷಗಳೇ ಕಳೆದು ಹೋಯಿತು. ಆದರೆ ಒಂಟಿ ಮಹಿಳಗೆ ಏನು ಮಾಡಬೇಕೆಂಬುದು ದೋಚದಂತಾಯಿತು. ಇದನ್ನ ಗಮನಿಸಿದ ಪೆರುವಾಯಿಯ ಮುಸ್ಲಿಂ ಐಕ್ಯ ವೇದಿಕೆ ಈ ಮಹಿಳೆಗೆ ಸಾರಥಿಯಾಗಿ ನಿಂತು ಸ್ಪಂದಿಸಿ ಕತ್ತಲಿನಿಂದ ಬೆಳಕಿನೆಡೆಗೆ ತರುವಲ್ಲಿ ಕೈ ಜೋಡಿಸುತ್ತೇವೆ ಎಂದಾಕ್ಷಣ ಆಯಿತೆಂದು ಮಹಿಳೆ ಒಪ್ಪಿಕೊಂಡರು.

ಪೆರುವಾಯಿಯ ಸ್ಥಳೀಯ ಮುಸ್ಲಿಂ ಸಂಘಸAಸ್ಥೆಗಳ ಸಹಕಾರವನ್ನು ತೆಗೆದುಕೊಂಡು ಸರಿ ಸುಮಾರು ಎರುಡವರೆ ಲಕ್ಷ ಖರ್ಚು ವೆಚ್ಚದಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಗಳನ್ನು ಒಳಗೊಂಡು ಈ ಸೂರನ್ನು ನಿರ್ಮಿಸಿಕೊಟ್ಟಿದ್ದಾರೆ. ಐಕ್ಯ ವೇದಿಕೆಯ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೀಯ ವ್ಯಕ್ತವಾಗುತ್ತಿದೆ.

ರಶೀದ್ ಬೆಳ್ಳಾರೆ

- Advertisement -

Related news

error: Content is protected !!