Saturday, July 5, 2025
spot_imgspot_img
spot_imgspot_img

ವಿಟ್ಲ: ಕರ್ಫ್ಯೂ ನಿಯಮ ಉಲ್ಲಂಘನೆ; ಸಾರ್ವಜನಿಕರಿಗೆ ಬಿಸಿ ತಟ್ಟಿಸಿದ ಪೊಲೀಸರು

- Advertisement -
- Advertisement -

ವಿಟ್ಲ: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಸುತ್ತಾಡುತ್ತಿರುವ ಜನರಿಗೆ ವಿಟ್ಲ ಪೊಲೀಸರು ದಂಡ ವಿಧಿಸಿದ್ದಾರೆ. ಕೆಲವು ಕಾರಣಗಳನ್ನು ಮುಂದಿಟ್ಟುಕೊ0ಡು ವಿಟ್ಲ ಸುತ್ತಮುತ್ತಲಿನ ಜನರು ತಮ್ಮ ವಾಹನಗಳಲ್ಲಿ ಸುತ್ತಾಡುತ್ತಿದ್ದರು.

ಈ ಬಗ್ಗೆ ಕಾರ್ಯಾಚರಣೆಗೆ ಇಳಿದ ವಿಟ್ಲ ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ಮತ್ತು ಸಿಬ್ಬಂದಿಗಳು ವಾಹನಗಳ ತಪಾಸಣೆ ನಡೆಸಿದರು.

ಲಾಕ್‌ಡೌನ್ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು. ಅನಗತ್ಯ ಓಡಾಟ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ, ಇದನ್ನು ಮನಗಂಡ ಅಧಿಕಾರಿಗಳು ಪೊಲೀಸರಿಗೆ ಕಟ್ಟುನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲು ಸೂಚನೆಯನ್ನು ನೀಡಿದ್ದರು.

ಈ ಹಿನ್ನಲೆಯಲ್ಲಿ ವಿಟ್ಲ ಠಾಣಾ ಪೊಲೀಸರು ವಿಟ್ಲ ಜಂಕ್ಷನ್‌ಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಅನಗತ್ಯವಾಗಿ ಯಾರೆಲ್ಲಾ ಓಡಾಟ ನಡೆಸುತ್ತಿದ್ದಾರೋ ಅವರ ಮೇಲೆ ಕೇಸು ದಾಖಲಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾಕಾಗಿ ನೀವು ಸುತ್ತಾಟ ನಡೆಸುತ್ತಿದ್ದೀರಿ? ಅವಶ್ಯಕತೆ ನಿಜವಾಗಿಯೂ ಇದೆ ಎಂಬುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸಂದರ್ಭ ಹಲವು ಮಂದಿ ಕ್ಷುಲ್ಲಕ ಕಾರಣಕ್ಕೆ ಹೊರಗಡೆ ಬಂದಿರುವುದು ಬೆಳಕಿಗೆ ಬಂದಿದೆ. ವಾಹನಗಳ ಮಾಲಕರಿಗೆ ದಂಡ ವಿಧಿಸಿದ್ದಾರೆ.

- Advertisement -

Related news

error: Content is protected !!