Thursday, May 9, 2024
spot_imgspot_img
spot_imgspot_img

ವಿಟ್ಲ: ಯುಕೆಟಿಎಲ್ ಪ್ರಾಜೆಕ್ಟ್‌ ಅನುಷ್ಠಾನವನ್ನು ವಿರೋಧಿಸಿ ಬಿಜೆಪಿಯ ಮಾಜಿ ಶಾಸಕರ ನೇತೃತ್ವದಲ್ಲಿ ಪತ್ರಿಕಾಗೋಷ್ಟಿ

- Advertisement -G L Acharya panikkar
- Advertisement -

ವಿಟ್ಲ: ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರುರವರ ನೇತೃತ್ವದಲ್ಲಿ ವಿಟ್ಲ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಯಿತು.

ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ವಿಟ್ಲ ಭಾಗದ ಬರ್ನಿಂಗ್ ಇಶ್ಯೂ, ಕೃಷಿಕರಿರುವ ಗ್ರಾಮೀಣ ಭಾಗದಲ್ಲಿ ಕಾಸರಗೋಡಿನಿಂದ ಉಡುಪಿಗೆ 400 ಕೆವಿ ವಿದ್ಯುತ್ ಮಾರ್ಗವನ್ನು ಹಾದುಹೋಗುವ ಯುಕೆಟಿಎಲ್ ಪ್ರಾಜೆಕ್ಟ್‌ನ್ನು ಅನುಷ್ಠಾನ ಮಾಡಿ ಸ್ಟರ್‍ ಲೈಟ್ ಪವರ್ ಕಂಪನಿಗೆ ಟೆಂಡರನ್ನು ಕೊಟ್ಟಿದ್ದು , ಈ ಕಾಮಗಾರಿಗೆ ಸರಕಾರ ಅನುಮತಿ ಕೊಟ್ಟಿದ್ದು ಕಾಸರಗೋಡು 47ಕಿ.ಮೀ, ದ.ಕ 48ಕಿ.ಮೀ, ಉಡುಪಿ 19 ಕಿ.ಮಿ ಪ್ರಾಜೆಕ್ಟ್ ಹಾದುಹೋಗುತ್ತಿದ್ದು ಬಂಟ್ವಾಳ ತಾಲೂಕಿನ 14 ಗ್ರಾಮಗಳಲ್ಲಿ ಹಾಗೂ ಪುಣಚ, ಕೇಪು, ವಿಟ್ಲ ಮುಡ್ನೂರು, ವಿಟ್ಲ ಈ 4 ಭಾಗಗಳಲ್ಲಿ ಹಾದುಹೋಗುವುದರಿಂದ ರೈತರ ಕೃಷಿಭೂಮಿ ಇದ್ದು 991 ಸ.ನಂ.ಗಳಲ್ಲಿ ಈ ಲೈನ್ ಹಾದುಹೋಗುತ್ತಿದ್ದು ಅದರಲ್ಲಿ ಪುಣಚ 5, ಕೇಪು 12, ವಿಟ್ಲ ಮುಡ್ನೂರು 3, ವಿಟ್ಲದಲ್ಲಿ 10 ಟವರ್‍ ಬರುತ್ತಿದ್ದು ಈ ಟವರ್‍ ನಿರ್ಮಾಣದಿಂದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನು ಆಗಿನ ಪವರ್‍ ಮಿನಿಸ್ಟರ್‌ನಲ್ಲಿ ಹೇಳಿ ತಡೆಹಿಡಿಯುವ ಕೆಲಸ ಮಾಡಿದರು.

ಬಳಿಕ ಕಂಪನಿಯವರು ಕೇಪು ಭಾಗದಲ್ಲಿ ಟವರ್‍ ನಿರ್ಮಿಸುವ ಕಾರ್ಯವನ್ನು ಮುಂದುವರೆಸಿದಾಗ ಅದನ್ನು ನಿಲ್ಲಿಸುವಂತೆ ಆ ಭಾಗದ ಜನರು ಪ್ರತಿಭಟಿಸಿದರು. ಇದರಿಂದ ತಾತ್ಕಾಲಿಕವಾಗಿ ನಿಂತಿದ್ದರು ಅದನ್ನು ಶಾಶ್ವತವಾಗಿ ನಿಲ್ಲಿಸಬೇಕೆಂದು ಶಾಸಕ ಮಠಂದೂರು ಹೇಳಿದರು. ಇದನ್ನು ಮುಂದುವರೆಸಿದರೆ ಬೀದಿಗಿಳಿದು ಹೋರಾಟದ ಎಚ್ಚರಿಕೆಯನ್ನು ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕರುಣಾಕರ ನಾಯ್ತೊಟ್ಟು, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಅರುಣ್ ವಿಟ್ಲ, ಶಕ್ತಿ ಕೇಂದ್ರದ ಪ್ರಮುಖರಾದ ಲೋಕನಾಥ, ಪ.ಪಂ.ಸದಸ್ಯರಾದ ಅಶೋಕ್ ಕುಮಾರ್‍ ಶೆಟ್ಟಿ ಉಪಸ್ಥಿತರಿದ್ದರು.

- Advertisement -

Related news

error: Content is protected !!