Monday, April 29, 2024
spot_imgspot_img
spot_imgspot_img

ವಿಟ್ಲ: ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸುಚಿತ 600 ಕ್ಕೆ 600 ಅಂಕಗಳಿಸಿ ಸಾಧನೆ!

- Advertisement -G L Acharya panikkar
- Advertisement -

ವಿಟ್ಲ: ರಾಜ್ಯಾದ್ಯಂತ ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ದ.ಕ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 409 ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ತೇರ್ಗಡೆ ಹೊಂದಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಟ್ಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸುಚಿತ 600 ಕ್ಕೆ 600 ಅಂಕಗಳಿಸಿ ಸಾಧನೆ ಮಾಡಿದ್ದಾರೆ. ವಿಟ್ಲಪಡ್ನೂರು ಕಾಪುಮಜಲು ನಿವಾಸಿ ದಿ|ರಮೇಶ್ ಮಡಿವಾಳ ಹಾಗೂ ಮೋಹಿನಿ ದಂಪತಿಗಳ ಮಗಳಾದ ಸುಚಿತ 600 ಕ್ಕೆ 600 ಅಂಕಗಳಿಸಿದ್ದಾರೆ. ಸುಚಿತ ಎಸ್.ಎಸ್.ಎಲ್.ಸಿ ಯಲ್ಲಿ 606 ಅಂಕವನ್ನು ಪಡೆದಿದ್ದರು. ಈಗ 600 ಕ್ಕೆ 600 ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಕಾಲೇಜಿನಲ್ಲಿ ಒಟ್ಟು 52 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದು, 222 ವಿದ್ಯಾರ್ಥಿಗಳು ಪ್ರಥಮ, 130 ವಿದ್ಯಾರ್ಥಿಗಳು ದ್ವಿತೀಯ ಮತ್ತು 5 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ವರದಿಯಾಗಿದೆ.

- Advertisement -

Related news

error: Content is protected !!