Tuesday, July 1, 2025
spot_imgspot_img
spot_imgspot_img

ವಿಟ್ಲ: ಡಿ’ ಗ್ರೂಪ್(ರಿ) ವಿಟ್ಲ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ವತಿಯಿಂದ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಡಿ’ ಗ್ರೂಪ್(ರಿ) ವಿಟ್ಲ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ವತಿಯಿಂದ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ವಿಟ್ಲದ ಸ್ಮಾರ್ಟ್ ಸಿಟಿ ಮುಂಭಾಗದಲ್ಲಿ ಅಧ್ಯಕ್ಷ ವಿ.ಎಚ್.ರಿಯಾಝ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ನಡೆಯಿತು.

ವಿಟ್ಲ ಕೇಂದ್ರ ಜುಮಾ ಮಸೀದಿಯ ಮುಅದ್ಸಿನ್ ಹಾಜಿ ಅಬ್ದುಲ್‌ ಹಕೀಂ ಅರ್ಷದಿ ದುವಾದ ಮೂಲಕ ಚಾಲನೆ ನೀಡಿದರು. ಡಿ’ ಗ್ರೂಪ್ ಅಧ್ಯಕ್ಷ ರಿಯಾಝ್ ವಿ.ಹೆಚ್ ರಕ್ತದಾನ ಮಾಡುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ಗೌರವಧ್ಯಕ್ಷರಾಗಿರುವ ಅಝೀಝ್ ಸನಾ, ಉಪಾಧ್ಯಕ್ಷ ಇಕ್ಬಾಲ್ ಶೀತಲ್, ನಿಕಟಪೂರ್ವ ಅಧ್ಯಕ್ಷರಾಗಿರುವ ಕಲಂದರ್ ಪರ್ತಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಜೊತೆ ಕಾರ್ಯದರ್ಶಿ ಹಂಝ ವಿ.ಕೆ.ಎಂ, ಕೋಶಾಧಿಕಾರಿ ಬಷೀರ್ ಬೊಬ್ಬೆಕೇರಿ, ಸ್ಥಾಪಕಾಧ್ಯಕ್ಷರಾಗ ಸಮದ್ ಏರ್ ಸೌಂಡ್ಸ್, ಡಿ’ ಗ್ರೂಪ್ ಆಂಬುಲೆನ್ಸ್ ನಿರ್ವಾಹಕರಾಗಿರುವ ಹಂಝ ವಿ, ರಫೀಕ್ ಪೊನ್ನೋಟು, ಉಬೈದ್ ವಿಟ್ಲ ಬಝಾರ್, ಬ್ಲಡ್ ಡೋನರ್ಸ್ ಮಂಗಳೂರು(ರಿ) ಸ್ಥಾಪಕಾಧ್ಯಕ್ಷರಾಗಿರುವ ಸಿದ್ದೀಕ್ ಮಂಜೇಶ್ವರ, ಡಿ’ ಗ್ರೂಪ್ ಇದರ ಸದಸ್ಯರಾದ ರಾಝಿ ಡಿ, ಪತ್ರಕರ್ತ ಮಹಮ್ಮದ್ ಅಲಿ, ಇಸ್ಮಾಯಿಲ್ ಒಕ್ಕೆತ್ತೂರು, ಸಪ್ವಾನ್ ಕರ್ನಾಟಕ, ರಮೀಝ್, ಸಿಬಾಕ್, ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯ ನಿರ್ವಹಕರಾಗಿರುವ ತೌಫೀಕ್ ಕುಳಾಯಿ, ಮನ್ಸೂರ್ ಬಿ ಸಿ ರೋಡ್, ಸದಸ್ಯರಾಗಿರುವ ಸಫ್ವನ್ ಕುಳವೂರು ಹಾಗೂ ಯೆನಪೋಯ ವೈಧ್ಯಾದಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸಂದರ್ಭ ಕರಾಟೆ ಪಟು ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು| ಧನ್ವಿ ಸಣ್ಣಗುತ್ತು ಇವರನ್ನು ಸನ್ಮಾನಿಸಲಾಯಿತು. ಉಕ್ಕುಡ ಮುಹ್ಯುಸ್ಸುನ್ನ ದರ್ಸ್ ನ ಸುಮಾರು ಇಪ್ಪತ್ತು ವಿದ್ಯಾರ್ಥಿಗಳು ಒಟ್ಟಾಗಿ ರಕ್ತದಾನ ಮಾಡಿ ಎಲ್ಲರ ಗಮನ ಸೆಳೆದರು. ಸುಮಾರು 77 ಮಂದಿ ರಕ್ತದಾನಿಗಳು ಭಾಗವಹಿಸಿದರು . ಪ್ರಧಾನ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಕಾರ್ಯಕ್ರಮ ಸ್ವಾಗತಿಸಿದರು. ಮಾಧ್ಯಮ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ ನಿರೂಪಿಸಿದರು.

- Advertisement -

Related news

error: Content is protected !!