Saturday, May 15, 2021
spot_imgspot_img
spot_imgspot_img

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 65 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಾರ್ಧಕ ಸೇವೆ

- Advertisement -
- Advertisement -

ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 65 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಾರ್ಧಕ ಸೇವೆಯನ್ನು ನೀಡುತ್ತಿದ್ದು 2021ರ ಮಾರ್ಚ್ 31ಕ್ಕೆ ಅಂತ್ಯವಾದ ಆರ್ಧಿಕ ವರ್ಷದಲ್ಲಿ ಕೋವಿಡ್ ಸಂಕಷ್ಟದ ಸಮಯದಲ್ಲೂ ಬ್ಯಾಂಕ್ ತನ್ನ ಕಾರ್ಯದಕ್ಷತೆಯನ್ನು ಮೆರೆದು ರೂ 2.15 ಕೋಟಿಗೂ ಲಾಭಗಳಿಸಿ ವಿಶೇಷ ಸಾಧನೆ ಮಾಡಿದ್ದು ಈ ಸಾಧನೆಯನ್ನು ಹೇಳಲು ಸಂತೋಷಪಡುತ್ತೆವೆ ಎಂದು ಬ್ಯಾಂಕ್‍ನ ಅಧ್ಯಕ್ಷರಾದ ಹೆಚ್.ಜಗನ್ನಾಥ ಸಾಲಿಯಾನ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಸ್ತುತ ಬಂಟ್ವಾಳ, ಪುತ್ತೂರು, ಕಡಬ, ಮಂಗಳೂರು, ಸುಳ್ಯ, ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು, ವಿಟ್ಲದಲ್ಲಿ ಪ್ರಧಾನ ಕಛೇರಿ ಮತ್ತು ಕನ್ಯಾನ, ಕಲ್ಲಡ್ಕ, ಬಿ.ಸಿ ರೋಡ್ ಹಾಗೂ ಪುತ್ತೂರಿನಲ್ಲಿ ಶಾಖೆಗಳನ್ನು ಹೊಂದಿದ್ದು ಇನ್ನು 2 ಹೊಸ ಶಾಖೆಗಳನ್ನು ತೇರೆಯುವ ಯೋಜನೆ ಇದೆ ಎಂದರು.

driving

ವರ್ಷದಲ್ಲಿ ದಾಖಲೆಯ ರೂ. 531 ಕೋಟಿಗಳ ವ್ಯವಹಾರವನ್ನು ದಾಖಲಿಸಿ ಹೊಸ ಇತಿಹಾಸ ನಿಮ್ರಿಸಿದ್ದು, ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ 57 ಕೋಟಿ ರೂಪಾಯಿ ಹೆಚ್ಚಿನ ವ್ಯವಹಾರವನ್ನು ಮಾಡಿದೆ.
ಕಳೆದ ಬಾರಿ ಉಪಾಧ್ಯಕ್ಷರಾಗಿದ್ದ ಹೆಚ್. ಜಗನ್ನಾಥ ಸಾಲಿಯಾನ್, ಈ ವರ್ಷ ಅಧ್ಯಕ್ಷರಾಗಿ ನೇಮಕ ಗೊಂಡಿದ್ದಾರೆ. ಉಪಾಧ್ಯಾಕ್ಷರಾಗಿ ಮೋಹನ್ ಕೆ.ಎಸ್, ನಿರ್ದೇಶಕರಾಗಿ ಎಂ. ಹರೀಶ್ ನಾಯಕ್,ಮನೋರಂಜನ್ ಕೆ ಆಋ, ವಿಶ್ವನಾಥ ಎಂ, ಶ್ರೀಕೃಷ್ಣ, ಉದಯಕುಮಾರ್ ಎ, ಬಾಲಕೃಷ್ಣ ಪಿ ಎಸ್, ದಿವಾಕರ, ದಯಾನಂದ ಆಳ್ವ, ಸುಂದರ ಡಿ, ಗೋವರ್ಧನ ಕುಮಾರ್, ಶುಭಲಕ್ಷ್ಮೀ, ಜಯಂತಿ ಎಚ್ ರಾವ್ ಇವರುಗಳು ಹಾಗೂ ಕೃಷ್ಣ ಮುರಳಿ ಶಾಮ್. ಕೆ – ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಸಿಇಓ) ಸೇವೆ ಸಲ್ಲಿಸುತ್ತಿದ್ದಾರೆ.

- Advertisement -
- Advertisement -

MOST POPULAR

HOT NEWS

Related news

error: Content is protected !!