Monday, May 20, 2024
spot_imgspot_img
spot_imgspot_img

ವಿಟ್ಲ: ಸಂತೆಯಲ್ಲಿ ಮಾರಾಮಾರಿ; 2 ತಂಡಗಳ ನಡುವೆ ಹೊಡೆದಾಟ!

- Advertisement -G L Acharya panikkar
- Advertisement -

ವಿಟ್ಲ: ಮಂಗಳವಾರ ಎಂದಿನಂತೆ ಇಂದು ಸಂತೆ ನಡೆಯುತ್ತಿದ್ದು, ಸಂತೆ ವ್ಯಾಪಾರಿಗಳ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ.

ಹಳೇ ಕೆ ಇ ಬಿ ರಸ್ತೆಯಲ್ಲಿ ಸಂತೆ ನಡೆಯುತ್ತಿದ್ದ ವೇಳೆ ಸಂತೆ ವ್ಯಾಪಾರಿಗಳ ಹಳೇ ವೈಶಮ್ಯದಿಂದ ಎರಡು ತಂಡಗಳ ನಡುವೆ ಸಾರ್ವಜನಿಕರ ಎದುರಲ್ಲೇ ಹೊಡೆದಾಟ ನಡೆದಿದೆ. ಹೊಡೆದಾಟದ ವೇಳೆ ಸಂತೆಗೆ ಬಂದಿದ್ದ ಸಾರ್ವಜನಿಕರು ಭಯ ಭೀತರಾಗಿದ್ದು ಜನರನ್ನು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ.


ತಕ್ಷಣ ಮಾಹಿತಿ ಪಡೆದ ವಿಟ್ಲ ಪೋಲಿಸರು ಸ್ಧಳಕ್ಕೆ ಆಗಮಿಸಿ ಎರಡು ತಂಡದವರನ್ನು ಠಾಣೆಗೆ ಕರೆದೊಯ್ದರು. ಪೊಲೀಸರ ಎಂಟ್ರಿಯಿಂದ ಮತ್ತೆ ಸಂತೆ ಶಾಂತಿಯುತವಾಗಿ ನಡೆದಿದೆ ಎಂಬ ಮಾಹಿತಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಪೊಲೀಸರ ವಿಚಾರಣೆಯಿಂದ ತಿಳಿಯಬೇಕಾಗಿದೆ.

- Advertisement -

Related news

error: Content is protected !!