ವಿಟ್ಲ: ಎಸ್ ಎಲ್ ವಿ ಬುಕ್ ಹೌಸ್‌ನ ಮಾಲಕ ದಿವಾಕರ್ ದಾಸ್ ನೇರ್ಲಾಜೆ ಇವರಿಂದ ಕೊರೊನಾ ಇಡ್ಕಿದು ಮತ್ತು ಕುಳ ಗ್ರಾಮದ ಫ್ರಂಟ್‌ಲೈನ್ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ನಡೆಯಿತು.


ಕೋವಿಡ್ ಎಂಬ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸಿದೆ. ಕೊರೊನಾ ನಿಯಂತ್ರಿಸಲು ವಾರಿಯರ್ಸ್ ಗಳ ಪಾತ್ರ ಮಹತ್ವವಾದುದು. ಅಂತೆಯೇ ಫ್ರಂಟ್‌ಲೈನ್ ವಾರಿಯರ್ಸ್ ಎಂದೇ ಗುರುತಿಸಲ್ಪಡುವ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪವರ್ ಮ್ಯಾನ್‌ಗಳ ಸೇವೆಯನ್ನು ಗುರುತಿಸಿ ಇವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.


ಎಸ್‌ಎಲ್‌ವಿ ಬುಕ್ ಹೌಸ್‌ನ ಮಾಲಕರಾದ ದಿವಾಕರ್ ದಾಸ್ ನೇರ್ಲಾಜೆ ನೇತೃತ್ವದಲ್ಲಿ ಇಡ್ಕಿದು ಮತ್ತು ಕುಳ ಗ್ರಾಮದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಿದ್ಯುತ್ ಪವರ್ ಮ್ಯಾನ್‌ಗಳಿಗೆ
ಶಾಲು ಹೊದಿಸಿ ಗೌರವ ಸಲ್ಲಿಸಿ ಕಿಟ್ ವಿತರಣೆ ಮಾಡಲಾಯಿತು. ದಿವಾಕರ್ ದಾಸ್ ನೇರ್ಲಾಜೆ ಅವರ ಸ್ವಗೃಹದಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಕಾರ್ಯಕ್ರಮ ನಡೆಸಲಾಯಿತು.
ಇಡ್ಕಿದು ಪಿಡಿಒ ಗೋಖುಲ್‌ದಾಸ್ ಭಕ್ತ ಹಾಗೂ ಗ್ರಾಮಕರಣಿಕರಾದ ಮಂಜುನಾಥ, ಸುರೇಶ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು

ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ದಿವಾಕರ್ ದಾಸ್ ನೇರ್ಲಾಜೆ ಕೋವಿಡ್ ಸಂಕಷ್ಟದ ಸಮಯದಲ್ಲಿ ಕೊರೊನಾ ಫ್ರಂಟ್‌ಲೈನ್ ವಾರಿಯರ್ಸ್ ಗೆ ಗೌರವ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ವಿಧಾನಸಭಾ ಶಾಸಕ ಸಂಜೀವ ಮಠಂದೂರು ಆಗಮಿಸಿ ಕೊರೋನಾ ವಾರಿಯರ್ಸ್ ಗಳನ್ನು ಸನ್ಮಾನಿಸಿ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ದಯಾನಂದ ಶೆಟ್ಟಿ ಉಜಿರೆ ಮಾರು ರವಿಪ್ರಕಾಶ್ ವಿಟ್ಲ ರಾಮದಾಸ್ ಶೆಟ್ಟಿ, ಸುರೇಶ್ ಮುಕ್ಕುಡ, ರಮೇಶ್ ಭಟ್ ಮಿತ್ತೂರು, ಪಂಚಾಯತ್ ಸದಸ್ಯರಾದ ಪುರುಷೋತ್ತಮ ಕೋಲ್ಪೆ, ಚಿದಾನಂದ ಉಪಸ್ಥಿತರಿದ್ದರು. ಬಂದ ಅತಿಥಿಗಳನ್ನು ಮನೆಯವರಾದ ಸುರೇಶ್ ದಾಸ್ ರಾಜೀವಿ ಸುರೇಶ್ ದಾಸ್, ಮೀರಾ ಕೇಶವದಾಸ ಮತ್ತು ಹೇಮಾವತಿ ದಿವಾಕರ್ ದಾಸ ಸ್ವಾಗತಿಸಿದರು ಈ ಸಂದರ್ಭದಲ್ಲಿ ದಿವಾಕರ್ ದಾಸ ರವರ ತಂದೆ ತಾಯಿಗಳಾದ ರಾಮದಾಸ್ ಮತ್ತು ಸುಂದರಿ ರಾಮದಾಸ್ ಇವರನ್ನು ಸ್ಮರಿಸಿಕೊಂಡರು.
