Sunday, July 26, 2026
spot_imgspot_img
spot_imgspot_img

ಪಂಜಿಗದ್ದೆ ಫಾರ್ಮ್ ನಲ್ಲಿ ಪಂಚಮಿ ಸೂಪರ್ ಮಾರ್ಕೆಟ್ ಶುಭಾರಂಭ

- Advertisement -
- Advertisement -

ವಿಟ್ಲ: ಪಂಜಿಗದ್ದೆ ಫಾರ್ಮ್ ನಲ್ಲಿ ನೂತನವಾಗಿ ಆರಂಭಿಸಲಾದ ಪಂಚಮಿ ಸೂಪರ್ ಮಾರ್ಕೆಟನ್ನು ಜ.೧೫ರಂದು ಬಲಿಪಗುಳಿ ಇಕೋ ಬ್ಲಿಸ್ ನ ಮಾಲಕರಾದ ಸಿ.ಜಿ. ರಾಜಾರಾಮ ಬಲಿಪಗುಳಿರವರು ದೀಪಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅಥಿತಿಗಳಾಗಿ ಬಿಜೆಪಿ ಬಂಟ್ವಾಳ ಮಂಡಲ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ನಿಕಟಪೂರ್ವ ಆಡಳಿತ ವೈದ್ಯಾಧಿಕಾರಿ ಡಾ. ಬಿ.ಎನ್. ಪ್ರಶಾಂತ್, ವಿಟ್ಲ ಶ್ರೀಮಾತಾ ಕನ್‌ಸ್ಟ್ರೆಕ್ಷನ್ ನ ಇಂಜಿನಿಯರ್ ಸತ್ಯಗಣೇಶ್, ಉದ್ಯಮಿ ಮಾಧವ ಮಾವೆ ಮೊದಲದವರು ಭಾಗವಹಿಸಿ ಶುಭಹಾರೈಸಿದರು. ಸಂಸ್ಥೆಯ ಮಾಲಕರಾದ ಪಿ.ಸತೀಶ್ ಸ್ವಾಗತಿಸಿ ಮುರಳಿ ಕೃಷ್ಣ ಕುಕ್ಕಿಲ ವಂದಿಸಿದರು. ರಮೇಶ್ ಪಂಜಿಗದ್ದೆ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಪಡಾರು ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಬಗೆಯ ಐಟಂಗಳು ಒಂದೇ ಸೂರಿನಡಿ

ದಿನಸಿ ಐಟಂಗಳು, ಹಾರ್ಡ್‌ವೇರ್ ಸಾಮಾಗ್ರಿ, ಬೇಕರಿ ಉತ್ಪನ್ನಗಳು, ತರಕಾರಿಗಳು,ಸ್ಟೆಶನರಿ ಐಟಂಗಳು, ಪತಂಜಲಿ ಉತ್ಪನ್ನಗಳು, ಗ್ರಾಮರಾಜ್ಯ ಉತ್ಪನ್ನಗಳು, ಪೂಜಾ ಸಾಮಾಗ್ರಿಗಳು, ಜೆರಾಕ್ಸ್ ಸಹಿತ ಎಲ್ಲಾ ಬಗೆಯ ವಸ್ತುಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ಉದ್ಘಾಟನೆಯ ಪ್ರಯುಕ್ತ ೫೦೦ರೂಪಾಯಿಗಿಂತ ಮೇಲ್ಪಟ್ಟು ಸಾಮಾಗ್ರಿ ಖರೀದಿ ಮಾಡಿದಲ್ಲಿ ಉಚಿತ ಕೂಪನ್ ನೀಡಲಾಗುವುದು ಬಳಿಕ ಅದರಲ್ಲಿ ಅದೃಷ್ಟ ಗ್ರಾಹಕರ ಆಯ್ಕೆ ನಡೆಯಲಿದೆ ಎಂದು ಸಂಸ್ಥೆಯ ಮಾಲಕರಾದ ಪಿ.ಸತೀಶ್ ರವರು ತಿಳಿಸಿದರು.

- Advertisement -

Related news

error: Content is protected !!