Monday, July 7, 2025
spot_imgspot_img
spot_imgspot_img

ವಿಟ್ಲ: ಸ್ವಸ್ತಿಕ್ ಕಲೋತ್ಸವ 2K24 “ವಸು ವತ್ಸಲೆ ಭಾರತ” ಮತ್ತು “ಕದ್ರಿ ಇವೆಂಟ್ಸ್‌” ಸಾಂಸ್ಕೃತಿಕ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಸ್ವಸ್ತಿಕ್ ಕಲೋತ್ಸವ 2K24 ಶ್ರೀರಾಮ ಪದವಿ ಕಾಲೇಜು ಕಲ್ಲಡ್ಕ ಪ್ರಸ್ತುತ ಪಡಿಸುವ “ವಸು ವತ್ಸಲೆ ಭಾರತ” ಸಾಂಸ್ಕೃತಿಕ ಕಾರ್ಯಕ್ರಮ , ಬೃಹತ್ ಆಹಾರ ಮೇಳ ಮತ್ತು ಸಸ್ಯಮೇಳ ಮತ್ತು ಕದ್ರಿ ಇವೆಂಟ್ಸ್‌ ಅರೆಹೊಳೆ ಪ್ರತಿಷ್ಠಾನ, ಮಂಗಳೂರು ಇದರ ನಂದಗೋಕುಲ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಗಣ್ಯರ ಮತ್ತು ಸ್ವಸ್ತಿಕ್ ಫ್ರೆಂಡ್ಸ್‌ನ ಸದಸ್ಯರ ಸಮ್ಮುಖದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಅನುವಂಶೀಯ ಮೊಕ್ತೇಸರರು ಬಂಗಾರು ಅರಸರು ವಿಟ್ಲ ಅರಮನೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಲೋಕಸಭಾ ಕ್ಷೇತ್ರ ನಿಕಟಪೂರ್ವ ರಾಜ್ಯಾಧ್ಯಕ್ಷರು ಭಾರತೀಯ ಜನತಾ ಪಾರ್ಟಿ ಮಾನ್ಯ ಸಂಸದ ನಳಿನ್ ಕುಮಾರ್‍ ಕಟೀಲ್ ಉದ್ಘಾಟನಾ ಭಾಷಣ ಮಾಡಿದರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ , ಎಪಿಎಂಸಿ ಪುತ್ತೂರು ಮಾಜಿ ಅಧ್ಯಕ್ಷ ದಿನೇಶ್ ಮೆದು, ಪುತ್ತೂರು ಪದ್ಮಶ್ರೀ ಸೀತಾರಾಮ ರೈ, ಸ್ಥಾಯಿ ಸಮಿತಿ ತಾಲೂಕು ಪಂ. ಬಂಟ್ವಾಳ ಮಾಜಿ ಅಧ್ಯಕ್ಷ, ಉದ್ಯಮಿ ಮಾಧವ ಮಾವೆ, ಮಂಗಳೂರು ಉದ್ಯಮಿ ಅರುಣ್ ಕುವೆಲ್ಲೊ, ರಘುಪತಿ ರೈ, ಸ್ವಸ್ತಿಕ್ ಫ್ರೆಂಡ್ಸ್‌ ವಿಟ್ಲ ಸ್ಥಾಪಕ ಅಧ್ಯಕ್ಷ ಎಚ್ ಅಭಿಷೇಕ್, ಸ್ವಸ್ತಿಕ್ ಫ್ರೆಂಡ್ಸ್‌ ವಿಟ್ಲ ಅಧ್ಯಕ್ಷ ತಾರನಾಥ್ ನೆಕ್ಕರೆಕಾಡು ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ12 ಮೆಸ್ಕಾಂ ಪವರ್‍ ಮ್ಯಾನ್‌ಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಅರುಣ್ ವಿಟ್ಲ ಸ್ವಾಗತಿಸಿ, ರೇಣುಕ ಕಣಿಯೂರು ನಿರೂಪಿಸಿ, ರವೀಶ್ ವಿಟ್ಲ ಧನ್ಯವಾದ ಸಮರ್ಪಿಸಿದರು.

ಬಳಿಕ ಶ್ರೀರಾಮ ಪದವಿ ಕಾಲೇಜು ಕಲ್ಲಡ್ಕ ಪ್ರಸ್ತುತ ಪಡಿಸುವ “ವಸು ವತ್ಸಲೆ ಭಾರತ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಬೃಹತ್ ಆಹಾರ ಮೇಳ ಮತ್ತು ಸಸ್ಯಮೇಳ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದೆ.

- Advertisement -

Related news

error: Content is protected !!