Friday, June 5, 2026
spot_imgspot_img
spot_imgspot_img

ವಿಟ್ಲ: (ಸೆ. 3)ತಾಳಮದ್ದಳೆ ಸಮಿತಿ, ಮಂಗಳಪದವು ಇದರ ವತಿಯಿಂದ 20ನೇ ವರ್ಷದ ಗಾಂಗೇಯ ಪ್ರಸಂಗ ತಾಳಮದ್ದಳೆ ಕೂಟ

- Advertisement -
- Advertisement -

ವಿಟ್ಲ: ತಾಳಮದ್ದಳೆ ಸಮಿತಿ, ಮಂಗಳಪದವು ಇದರ ವತಿಯಿಂದ 20ನೇ ವರ್ಷದ ತಾಳಮದ್ದಳೆ ಕೂಟದಿಂದ “ಗಾಂಗೇಯ ಪ್ರಸಂಗ” ಸೆ.03ರಂದು ಮಧ್ಯಾಹ್ನ 2.00ಗಂಟೆಗೆ ಶ್ರೀ ಅಯ್ಯಪ್ಪ ಭಜನಾ ಮಂದಿರ, ಮಂಗಳಪದವಿನಲ್ಲಿ ನಡೆಯಲಿದೆ.

20ನೇ ವರ್ಷದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ನೀರ್ಕಜೆ ಈಶ್ವರ ಭಟ್‌ ಅವರಿಗೆ ಸನ್ಮಾನಿಸಲಿದ್ದಾರೆ. ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ ಹಾಗೂ ಧೀರಜ್‌ ರೈ ಸಂಪಾಜೆ, ಚೆಂಡೆ- ಮದ್ದಳೆಯಲ್ಲಿ ಗಿರೀಶ ಕಿನಿಲಕೋಡಿ ಹಾಗೂ ಶ್ರೀಧರ ವಿಟ್ಲ, ಚಕ್ರತಾಳದಲ್ಲಿ ಮುರಾರಿ ಭಟ್‌ ಪಂಜಿಗದ್ದೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಅರ್ಥಧಾರಿಗಳಾಗಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್‌, ರಾಧಾಕೃಷ್ಣ ಕಲ್ಚಾರ್‌, ಕಾವಳಕಟ್ಟೆ ದಿನೇಶ ಶೆಟ್ಟಿ, ಶಂಭು ಶರ್ಮ ವಿಟ್ಲ, ವಾಸುದೇವ ರಂಗ ಭಟ್‌ ಮಧೂರು, ಹರೀಶ ಭಟ್‌ ಬಳಂತಿಮೊಗರು ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!