Thursday, April 25, 2024
spot_imgspot_img
spot_imgspot_img

ವಿಟ್ಲ: ಒಂಟಿ ಮಹಿಳೆಯನ್ನು ಕಟ್ಟಿ ಹಾಕಿ ದರೋಡೆ !!-ಪತಿ ಇಲ್ಲದಾಗ ಹಾಡುಹಗಲೇ ಮನೆಗೆ ನುಗ್ಗಿ ಕೃತ್ಯ

- Advertisement -G L Acharya panikkar
- Advertisement -

ವಿಟ್ಲ: ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು ಕಟ್ಟಿ ಹಾಕಿ, ಹಲ್ಲೆ ನಡೆಸಿ ಚಿನ್ನಾಭರಣ ದರೋಡೆಗೈದ ಘಟನೆ ವಿಟ್ಲದ ಕಾನತ್ತಡ್ಕದಲ್ಲಿ ನಡೆದಿದೆ.

ಕಾನತ್ತಡ್ಕ ಜುಮಾ ಮಸೀದಿ ಮುಂಭಾಗದಲ್ಲಿರುವ ಬಾಡಿಗೆ ಮನೆಯಲ್ಲಿ ಆಟೋ ಚಾಲಕ ರಫೀಕ್ ವಾಸ ಮಾಡುತ್ತಿದ್ದಾರೆ. ರಫೀಕ್ ಅವರು ಶುಕ್ರವಾರ ಮಸೀದಿಗೆ ತೆರಳಿದ್ದರು. ಅವರ ಜತೆ ಅವರ 10 ವರ್ಷದ ಮಗ ಕೂಡಾ ತೆರಳಿದ್ದರು. ಪತ್ನಿ ಜೈನಾಬ ಅವರು ಒಬ್ಬರೇ ಇದ್ದರು. ಈ ಬಗ್ಗೆ ಮಾಹಿತಿ ಪಡೆದ ವ್ಯಕ್ತಿ ಮಹಿಳೆಯ ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಹಲ್ಲೆ ನಡೆಸಿದ್ದಾರೆ. ಇದರ ಸುತ್ತಲೂ ಮನೆಗಳಿದ್ದು, ಯಾರ ಗಮನಕ್ಕೆ ಬಂದಿಲ್ಲ. ಪತಿ ಮಸೀದಿಯಿಂದ ವಾಪಾಸ್ಸಾದ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

ಮಹಿಳೆಯನ್ನು ಮನೆಯೊಳಗೆ ಕಟ್ಟಿ ಹಾಕಿದ ದರೋಡೆಕೋರ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಕೈಯಲ್ಲಿದ್ದ ಚಿನ್ನದ ಉಂಗುರ, ಕಿವಿಯಲ್ಲಿದ್ದ ಓಲೆಯನ್ನು ಕಿತ್ತು ಪರಾರಿಯಾಗಿದ್ದಾನೆ. ಸ್ಥಳಕ್ಕೆ ವಿಟ್ಲ ಪೋಲೀಸರು ಮತ್ತು ಹಿರಿಯ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!