- Advertisement -
- Advertisement -
ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಸಾರಥ್ಯದಲ್ಲಿ ಬಂಟ್ವಾಳ ತಾಲೂಕು ಅಮೆಚೂರ್ ವಾಲಿಬಾಲ್ ಅಸೋಸಿಯೇಷನ್ ಇದರ ಸಹಯೋಗದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ ಸ್ವಸ್ತಿಕ್ ಟ್ರೋಫಿ-2025 ವಿಟ್ಠಲ ಎಜುಕೇಶನ್ ಸೊಸೈಟಿ ಮೈದಾನದಲ್ಲಿ ನಡೆಯಿತು.

ಒಟ್ಟು 16 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ ಪ್ರಥಮ ದುರ್ಗಾಂಬಾ ರೋಡ್ ಲೈನ್ಸ್ , ದ್ವಿತೀಯ ಪಂಚಶ್ರೀ, ತೃತೀಯ ಅಕ್ಷರ ಟ್ಯುಟೋರಿಯಲ್, ಚತುರ್ಥ ವಿಎಫ್ ಸಿ ವಿಟ್ಲ ತಂಡಗಳು ಪ್ರಶಸ್ತಿಗಳನ್ನು ಪಡೆದವು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ
ರಮೇಶ್ ವರಪಾದೆ, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ರವಿಪ್ರಕಾಶ್, ನೋಟರಿ ಜಯರಾಮ್ ರೈ, ಶಿಕ್ಷಕ ಅಭಿಲಾಶ್, ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಅರುಣ್ ವಿಟ್ಲ , ಹರೀಶ್ ಸಿ ಎಚ್, ಮೋನಪ್ಪ ಗೌಡ ಶಿವಾಜಿನಗರ, ತಾರಾನಾಥ್ ಅಧ್ಯಕ್ಷ ಸ್ವಸ್ತಿಕ್ ಫ್ರೆಂಡ್ಸ್ , ಸದಸ್ಯರು ಉಪಸ್ಥಿತರಿದ್ದರು. ದಿವಾಕರ್ ಉಪ್ಪಳ ನಿರೂಪಿಸಿದರು.




- Advertisement -








