


ಸ್ಟೆಮ್ ರೋಬೊ ಟೆಕ್ನಾಲಜಿಸ್ ಸಂಸ್ಥೆಯು ಆರ್ಡಿನೋ ನ್ಯಾನೋ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ 2025ನೇ ಸಾಲಿನ ಇನೋವೇಷನ್ ಲೀಗ್ನ ಯೋಜನಾ ಸ್ಪರ್ಧೆಯಲ್ಲಿ ವಿಟ್ಲ ಬಸವನ ಗುಡಿಯ ವಿಠಲ್ ಜೇಸಿಸ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯ 6 ತಂಡಗಳು ರಾಷ್ಟ್ರೀಯ ಹಂತಕ್ಕೆ ಆಯ್ಕೆಯಾಗಿವೆ.
ದೇಶಾದ್ಯಂತ ಸಾವಿರಕ್ಕೂ ಹೆಚ್ಚು ಪ್ರಾಜೆಕ್ಟ್ ಗಳು ಆನ್ಲೈನ್ ಮುಖಾಂತರ ಭಾಗವಹಿಸಲು ವಿಷಯ ಸಲ್ಲಿಸಿದ್ದು, ಎರಡನೇ ಸುತ್ತಿಗೆ 500ಕ್ಕೂ ಹೆಚ್ಚು ಪ್ರಾಜೆಕ್ಟ್ಗಳ ಪೈಕಿ ಕೇವಲ 331 ಪ್ರಾಜೆಕ್ಟ್ಗಳು ಆಯ್ಕೆಯಾಗಿತ್ತು. ಕರ್ನಾಟಕದಿಂದ 30 ತಂಡಗಳ ಪೈಕಿ ದಕ್ಷಿಣ ಕನ್ನಡದ ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 6 ತಂಡಗಳು ಆಯ್ಕೆಯಾಗಿವೆ.
ಟೀಮ್ ವಾರಿಯರ್ಸ್ (8ನೇ ತರಗತಿ)ಯ- ನಿಧಿ ನಾಯಕ್ ಡಿ., ಅಮೃತ ಎಸ್, (ಹೃದಯಾಘಾತ ಪತ್ತೆ ಹಚ್ಚುವ ಸ್ಮಾರ್ಟ್ ವಾಚ್ ಪ್ರಾಜೆಕ್ಟ್) ಟೀಮ್ ಲೆಜೆಂಡ್ಸ್ (8ನೇ ತರಗತಿ)ಯ ರಾಮಿತ್ ಮರುವಾಳ, ನಿವೇದ್ ಜಿ. ನಾಯಕ್, ಲಿಖಿತ್ ಡಿ. (ಬಾವಿಯ ನೀರನ್ನು ಶುದ್ಧಗೊಳಿಸುವ ರೋಬೊ ಯಂತ್ರ ಪ್ರಾಜೆಕ್ಟ್ ), ಟೀಮ್ ಇನ್ನೋ ವೆಟರ್ಸ್ (8ನೇ ತರಗತಿ)ಯ ಯಶ್ ರಾಜ್ ರೈ ಎ, ಶ್ರೀವಿಷ್ಣು ಪೈ ಬಿ, ಪಿ. ಎಲ್. ಸಿಂಚನ್ (ಅಪಘಾತ ತಪ್ಪಿಸುವ ಯಂತ್ರ ಪ್ರಾಜೆಕ್ಟ್), ಟೀಮ್ ಟೆಕ್ ಟೈಟನ್ಸ್ (8ನೇ ತರಗತಿ)ಯ ಸ್ಪಂದನ್ ಪಿ. ಶೆಟ್ಟಿ., ಮಯೂರ್ ಕೆ.ಎಸ್., (ರೇಡಿಯಲ್ ಪಾಲ್ಸ್ ಡಿಟೆಕ್ಟರ್ ಪ್ರಾಜೆಕ್ಟ್), ಟೀಮ್ ಬಾಸ್ ಮೋಡ್ (7ನೇ ತರಗತಿ)ಯ ಅನಿರುದ್ದ್ ಎ ಎಂ, ಅಜಯ್ ಕೃಷ್ಣ, ಆದಿತ್ಯ ಕೆ. (ಸೌಂಡ್ ಸೆನ್ಸರ್ ರೋಬೋ ಪ್ರಾಜೆಕ್ಟ್ ), ಟೀಮ್ ಬ್ರೈಟ್ ಲೈನ್ (7ನೇ ತರಗತಿ)ಯ ಆದಿತ್ಯ, ವಿಘ್ನೇಶ್ ಎಂ, ಚರಿತ್ ಆರ್. (ಕೆಲಸ ಮಾಡುವ ಕೈಯುಳ್ಳ ಟಾಯ್ ಕ್ರೇನ್) ಬಗ್ಗೆ ಪ್ರಸ್ತಾವನೆ ಸಲ್ಲಿಸಿದರು.

ಈ ಸುತ್ತಿನಲ್ಲಿ ಆಯ್ಕೆಗೊಂಡ ಈ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳು ದಿಲ್ಲಿಯ ಯಮುನ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಯುವ ರಾಷ್ಟ್ರೀಯ ಹಂತದ ಸ್ಪರ್ಧೆಯಲ್ಲಿ ಜೇಸಿ ಶಾಲೆಯನ್ನು ಪ್ರತಿನಿಧಿಸಲಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಶಾಲೆಯ ಪೂರ್ವ ಕಂಪ್ಯೂಟರ್ ಶಿಕ್ಷಕಿ ಹಾಗೂ ರೋಬೋಟಿಕ್ಸ್ ಇನ್ಚಾರ್ಜ್ ರಶ್ಮಿ ಕೆ. ಎನ್. ರವರು ಮಾರ್ಗದರ್ಶನ ನೀಡಿದ್ದಾರೆ.








