Tuesday, July 21, 2026
spot_imgspot_img
spot_imgspot_img

ವಿಟ್ಲ: “ಮಗಳನ್ನು ಉಳಿಸಿ ಮಗಳನ್ನು ಓದಿಸಿ” ಯೋಜನೆಯಡಿ ಕಿಶೋರಿಯರ ಬಲವರ್ಧನ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಕರ್ನಾಟಕ ಸರ್ಕಾರ ದ. ಕ. ಜಿಲ್ಲಾಡಳಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ವಿಟ್ಲಾ ಇವರ ಆಶ್ರಯದಲ್ಲಿ ಮಗಳನ್ನು ಉಳಿಸಿ ಮಗಳನ್ನು ಓದಿಸಿ ಯೋಜನೆಯಡಿ ಕಿಶೋರಿಯರ ಬಲವರ್ಧನ ಕಾರ್ಯಕ್ರಮ ವಿಟ್ಲ ಕುಲಾಲ ರಜತ ಭವನ ಸಭಾಂಗಣದಲ್ಲಿ ದಿನಾಂಕ 17-1-2026 ರಂದು ನಡೆಯಿತು.

ಕಾರ್ಯಕ್ರಮವನ್ನು ಮಂಚಿ ಪ್ರೌಢ ಶಾಲಾ ಶಿಕ್ಷಕ ತಾರಾನಾಥ್ ಕೈರಂಗಳ ಸಂಪನ್ಮೀಲ ವ್ಯಕ್ತಿಯಾಗಿ ಭಾಗವಹಿಸಿ, ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿ ಇಂತಹ ತರಬೇತಿಯಿಂದ ಕಿಶೋರಿಯರಿಗೆ ಬಹಳಷ್ಟು ಮಾಹಿತಿ ದೊರೆಯುತ್ತದೆ. ಆಗಾಗ ಇಂತಹ ತರಬೇತಿ ನೀಡುವುದು ಅವಶ್ಯವಿರುತ್ತದೆ. ಎಲ್ಲಾ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಶುಭ ಹಾರೈಸಿದರು.ವಿಟ್ಲ ಶಿಶು ಅಭಿವೃದ್ಧಿ ಯೋಜನೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾರದಾ ಕೆ ತರಬೇತಿಯ ಪ್ರಸ್ತಾವನೆ ಗೈದರು. ಕಿಶೋರಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಹಿರಿಯ ಮೇಲ್ವಿಚಾರಕಿ ರೂಪಕಲಾ ಸ್ವಾಗತಿಸಿದರು, ಮೇಲ್ವಿಚಾರಕಿ ಲೋಲಾಕ್ಷಿ ನಿರೂಪಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆರೋಗ್ಯ ಸುರಕ್ಷಾಧಿಕಾರಿ ಸುಮನಾ ಕ್ರಾಸ್ತಾ, ಇಂಚರ ಫೌಂಡೇಷನ್ ನ ಸೌಮ್ಯ, ಮಕ್ಕಳ ರಕ್ಷಣಾಧಿಕಾರಿ ವಜೀರ್ ಕಿಶೋರಿಯರಿಗೆ ಮಾಹಿತಿ ನೀಡಿದರು. ಕಿಶೋರಿಯರಿಗೆ ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆ, ಅದೃಷ್ಟದ ಆಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.ಜಿಲ್ಲಾ ಬಾಲಭವನ ಸೊಸೈಟಿ ಯ ಸಿಬ್ಬಂಧಿ ರೇಖಾನಾಯಕ್, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು,ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು, ಭಾಗವಹಿಸಿದ್ದರು.

- Advertisement -

Related news

error: Content is protected !!