Monday, July 20, 2026
spot_imgspot_img
spot_imgspot_img

ವಿಟ್ಲ: (ಆ. 24) ನುರಿತ ವೈದ್ಯರನ್ನೊಳಗೊಂಡ ’ಜನಪ್ರಿಯ ಹೆಲ್ತ್ ಸೆಂಟರ್‌ ಶುಭಾರಂಭದ ಬಗ್ಗೆ ಪತ್ರಿಕಾಗೋಷ್ಠಿ

- Advertisement -
- Advertisement -

ಉದ್ಘಾಟನಾ ಸಮಾರಂಭದ ಪ್ರಯುಕ್ತ ಅದೇ ದಿನ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ:- ಸಿಇಓ ಡಾ. ಕಿರಾಶ್ ಪರ್ತಿಪ್ಪಾಡಿ

ವಿಟ್ಲ: ಜನಪ್ರಿಯ ಫೌಂಡೇಶನ್‌ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಾಸನ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮಂಗಳೂರಿನಲ್ಲಿರುವ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ಗ್ರಾಮೀಣ ಭಾಗದ ಜನತೆಗೆ ಇನ್ನಷ್ಟು ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ವಿಟ್ಲದಲ್ಲಿ ಆ. 24 ನೇ ಆದಿತ್ಯವಾರದಂದು ಜನಪ್ರಿಯ ಹೆಲ್ತ್ ಸೆಂಟರ್‍ ಶುಭಾರಂಭಗೊಳ್ಳಲಿದೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಜನಪ್ರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಿಇಓ ಡಾ. ಕಿರಾಶ್ ಪರ್ತಿಪ್ಪಾಡಿ ಮಾತನಾಡಿ ’ವಿಟ್ಲ ಮಂಗಳೂರು ರಸ್ತೆಯ ಪಣೆಮಜಲು ಹರಿಹರ ಕಾಂಪ್ಲೆಕ್ಸ್‌ನಲ್ಲಿ ಸುಸಜ್ಜಿತ ಹಾಗೂ ನುರಿತ ವೈದ್ಯರನ್ನೊಳಗೊಂಡ ’ಜನಪ್ರಿಯ ಹೆಲ್ತ್ ಸೆಂಟರ್‌’ ಆ. 24 ನೇ ಆದಿತ್ಯವಾರದಂದು ಬೆಳಗ್ಗೆ 10 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಇಲ್ಲಿ ವಿವಿಧ ವಿಭಾಗದ ತಜ್ಞ ವೈದ್ಯರು ಭೇಟಿ ನೀಡಿ ರೋಗಿಗಳ ತಪಾಸಣೆ, ಸಂದರ್ಶನ ನಡೆಸಲಿದ್ದಾರೆ. ಜನಪ್ರಿಯ ಫೌಂಡೇಶನ್ ಇದರ ಅಧ್ಯಕ್ಷ ವಿ ಕೆ ಅಬ್ದುಲ್‌ ಬಶೀರ್‌ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಧಾರ್ಮಿಕ ಪಂಡಿತರಾದ ಅಲ್‌ಹಾಜಿ ಅಬ್ದುಲ್‌ ಅಝೀಝ್‌ ದಾರಿಮಿ ಚೊಕ್ಕಬೆಟ್ಟು, ಹಾಗೂ ವಿಟ್ಲ ಶೋಕ ಮಾತಾ ಇಗರ್ಜಿಯ ಧರ್ಮಗುರು ಫಾ. ಐವನ್‌ ಮೈಕಲ್‌ ರೋಡ್ರಿಗಸ್‌ ಸಂದೇಶ ನೀಡಲಿದ್ದಾರೆ.

ಜನಪ್ರಿಯ ಹೆಲ್ತ್‌ ಸೆಂಟರ್‌ನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್‍ ರೈ ಉದ್ಘಾಟಿಸಲಿದ್ದಾರೆ. ಸ್ಕ್ಯಾನಿಂಗ್‌ ಮತ್ತು ಎಕ್ಸ್‌ರೇ ಕೊಠಡಿಯನ್ನು ಮಾಜಿ ಸಚಿವ ಬಿ. ರಮನಾಥ್‌ ರೈ ಉದ್ಘಾಟಿಸಲಿದ್ದಾರೆ. ಔಷಧಾಲಯವನ್ನು ಬಂಟ್ವಾಳ ತಾಲೂಕು ವೈದ್ಯಾಧಿಕಾರಿ ಅಶೋಕ್‌ ರೈ ಉದ್ಘಾಟಿಸಲಿದ್ದಾರೆ. ಹಾಗೂ ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶೇಷವಾಗಿ ಉದ್ಘಾಟನಾ ಸಮಾರಂಭದ ಪ್ರಯುಕ್ತ ಅಂದೇ ವಿಟ್ಲ ಆಸುಪಾಸಿನ ಜನರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಶಿಬಿರದಲ್ಲಿ ECG, ಸಕ್ಕರೆ ಕಾಯಿಲೆ ಪರೀಕ್ಷೆ, ರಕ್ತದೊತ್ತಡ, ಹಾಗೂ ವೈದ್ಯರ ಸಲಹೆಗಳು ಉಚಿತವಾಗಿರುತ್ತದೆ. ಈ ಶಿಬಿರದಲ್ಲಿ ತಜ್ಞ ವೈದ್ಯರುಗಳಾದ ಮೂಳೆ ತಜ್ಞರು, ಜನರಲ್‌ ಮೆಡಿಸಿನ್‌, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ನರರೋಗ ತಜ್ಞರು, ಕಿವಿ, ಮೂಗು, ಗಂಟಲು ತಜ್ಞರು ಲಭ್ಯವಿರುತ್ತಾರೆ. ದಿನಾಂಕ 25/08/2025 ರಿಂದ 31/08/2025 ವರೆಗೆ ರಕ್ತ ಪರೀಕ್ಷೆ ಪ್ರಯೋಗಾಲಯದಲ್ಲಿ 30% ಹಾಗೂ ಔಷಧಗಳಲ್ಲಿ 10% ರಷ್ಟು ರಿಯಾಯಿತಿ ದೊರೆಯಲಿದೆ. ಈ ಎಲ್ಲಾ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು’ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ನಿರ್ದೇಶಕ ನೌಶೀನ್ ಬದ್ರಿಯಾ, ಮಂಗಳೂರು ಜನಪ್ರಿಯ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯ ಜನರಲ್ ಮ್ಯಾನೇಜರ್ ಇಕ್ಬಾಕ್ ವಿಟ್ಲ, ಜನಪ್ರಿಯ ಹೆಲ್ತ್ ಸೆಂಟರ್ ವೈದ್ಯ ಡಾ. ಬದ್ರುದ್ದೀನ್, ಜನಪ್ರಿಯ ಫೌಂಡೇಶನ್ ಜನರಲ್ ಮ್ಯಾನೇಜರ್ ಮೋನಿಸ್ ಅಲಿ, ಜನಪ್ರಿಯ ಆಸ್ಪತ್ರೆಯ ಮಾರ್ಕೆಟಿಂಗ್ ಮುಖ್ಯಸ್ಥ ಉಮೇಶ್ ಗೌಡ, ಪಿ ಆರ್ ಓ ಬಾತೀಷ್ ಅಳಕೆಮಜಲು ಉಪಸ್ಥಿತರಿದ್ದರು

ಜನಪ್ರಿಯ ಫೌಂಡೇಶನ್‌
ಜನಪ್ರಿಯ ಫೌಂಡೇಶನ್‌ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಾಸನ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮಂಗಳೂರಿನಲ್ಲಿರುವ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು , ಉತ್ತಮ ಸೇವೆಯನ್ನು ನೀಡುವ ಮೂಲಕ ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿರುತ್ತದೆ. ಉತ್ತಮ ಆರೋಗ್ಯ ಸಮಾಜವನ್ನು ಸೃಷ್ಟಿಮಾಡುವ ಉದ್ದೇಶದೊಂದಿಗೆ ಸ್ಥಾಪನೆಗೊಂಡ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರೋಗಿಗಳ ಪಾಲಿನ ರಕ್ಷಾ ಕವಚವಾಗಿ ಇಂದು ರಾಜ್ಯಾದ್ಯಂತ ಹೆಸರುವಾಸಿಯಾಗಿದೆ. ವಿಟ್ಲ ಕಂಬಳಬೆಟ್ಟು ನಿವಾಸಿ ಬದ್ರಿಯಾ ಮನೆತನದ ಡಾ. ವಿ.ಕೆ ಅಬ್ದುಲ್ ಬಶೀರ್ ಅವರ ನೇತೃತ್ವದಲ್ಲಿ 2014 ರಲ್ಲಿ ಹಾಸನದಲ್ಲಿ ಪ್ರಾರಂಭಗೊಂಡ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಕಳೆದ 12 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಾ ಇದ್ದು, ಈ ಆಸ್ಪತ್ರೆಯು ಅದೆಷ್ಟೋ ಬಡ ಕುಟುಂಬದ ರೋಗಿಗಳ ಬಾಳಿಗೆ ಬೆಳಕಾಗಿದೆ. ಸಂಪೂರ್ಣವಾಗಿ ಬೇರ್ಪಟ್ಟಿದ್ದ ಕೈ ಕಾಲುಗಳನ್ನು ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ಜೋಡಿಸಿ ಮರುಜೀವ ನೀಡಿದ ಹಿರಿಮೆ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯದ್ದಾಗಿದೆ.

ಕಳೆದ 1 ವರ್ಷದ ಹಿಂದೆ ಮಂಗಳೂರಿನ ಪಡೀಲ್‌ನಲ್ಲಿ ಖ್ಯಾತ ವೈದ್ಯರನ್ನೊಳಗೊಂಡ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಕಾರ್ಯನಿರ್ವಹಿಸುತ್ತಾ ಇದ್ದು, ಕರಾವಳಿಯಲ್ಲಿ ಈಗಾಗಲೇ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಆರೋಗ್ಯ ಕ್ಷೇತ್ರ ಮಾತ್ರವಲ್ಲದೆ, ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ವಿಟ್ಲದ ಕಂಬಳಬೆಟ್ಟುವಿನಲ್ಲಿ ಜನಪ್ರಿಯ ಸೆಂಟ್ರಲ್‌ ಸ್ಕೂಲ್ ಯಶಸ್ವಿಯಾಗಿ ಮುನ್ನಡೆಯತ್ತಿದೆ.

- Advertisement -

Related news

error: Content is protected !!