Tuesday, June 23, 2026
spot_imgspot_img
spot_imgspot_img

ವಿಟ್ಲ: ಭ। ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಪಂಚಕಲ್ಯಾಣ ಮಹೋತ್ಸವ –

- Advertisement -
- Advertisement -

(ಫೆ.14) ಶುಕ್ರವಾರದ ಕಾರ್ಯಕ್ರಮ

ವಿಟ್ಲ: ಭ। ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭ। ಶ್ರೀ ೧೦೦೮ ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಹಾಗೂ ಯಕ್ಷಿ ಶ್ರೀ ಪದ್ಮಾವತಿ ಅಮ್ಮನವರ ಮತ್ತು ಯಕ್ಷಿ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವವು 13-02-2025ನೇ ಗುರುವಾರದಿಂದ 17-02-2025ನೇ ಸೋಮವಾರದವರೆಗೆ ನಡೆಯಲಿದೆ.

ದಿನಾಂಕ:14-02-2025ನೇ ಶುಕ್ರವಾರ ಬೆಳಿಗ್ಗೆ 8.00ರಿಂದ ನಿತ್ಯ ವಿಧಿ ಸಹಿತ ಶ್ರೀ ಪೀಠ ಯಂತ್ರಾರಾಧನಾ ವಿಧಾನ ನಡೆದು, ದಿವಾಗಂಟೆ 10:35ರ ಮೇಷ ಲಗ್ನದಲ್ಲಿ ಶ್ರೀ ನಾಗದೇವರ ಪ್ರತಿಷ್ಠೆ, ಯಕ್ಷಾರಾಧನಾಪೂರ್ವಕ ಯಕ್ಷಪ್ರತಿಷ್ಠೆ ಬಳಿಕ, ದಿವಾಗಂಟೆ 12:15ರ ಅಭಿಜಿನ್ ಲಗ್ನದಲ್ಲಿ ಧ್ವಜಾರೋಹಣ, ಧ್ವಜ ಪೂಜೆ, ಶ್ರೀಬಲಿ ವಿಧಾನ, ಮಂಟಪ ಪ್ರತಿಷ್ಠೆ, ಯಾಗಮಂಡಲ ಆರಾಧನಾವಿಧಾನ ನಡೆಯಲಿದೆ. ಸಂಜೆ 04.35ರ ಕರ್ಕಾಟಕ ಲಗ್ನದಲ್ಲಿ ಶ್ರೀ ಯಕ್ತಿ ಜ್ವಾಲಾಮಾಲಿನಿ ದೇವಿ ಪ್ರತಿಷ್ಠೆ ಬಳಿಕ, ಸಂಜೆ 05:35ರ ಕರ್ಕಾಟಕ ಲಗ್ನದಲ್ಲಿ ಶ್ರೀ ಯಕ್ಷಿ ಪದ್ಮಾವತಿ ದೇವಿ ಪ್ರತಿಷ್ಠೆ, ಜಲಯಾತ್ರಾ ಮಹೋತ್ಸವ ನಡೆಯಲಿದೆ. ರಾತ್ರಿ 07:30ರಿಂದ ಮಾತುರಾಹ್ವಾನಾದಿ ಕ್ರಿಯಾಯುಕ್ತಾ ಗರ್ಭಾವತರಣ ಕಲ್ಯಾಣ, ಭೇರಿತಾಡನ, ಮಂಗಲಸೂತ್ರ ಬಂಧನ, 24 ಕಲಶ ಅಭಿಷೇಕ, ಮಹಾಪೂಜೆ ನಡೆಯಲಿದೆ.

ಸಂಜೆ 5:30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಶ್ರೀ ಜೈನಮಠ, ಮೂಡುಬಿದಿರೆ ಪರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಆಶೀರ್ವಚನ ಮತ್ತು ಪಾವನ ಸಾನ್ನಿಧ್ಯ ನೀಡಲಿದ್ದಾರೆ. ಪರಮಪೂಜ್ಯ ಶ್ರೀ ಸಚ್ಚಿದಾನಂದಭಾರತೀ ಮಹಾಸ್ವಾಮಿ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ, ಶ್ರೀ ಎಡನೀರು ಮಠ, ಕಾಸರಗೋಡು, ಶ್ರೀಧಾಮ ಮಾಣಿಲ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದಿವ್ಯ ಉಪಸ್ಥಿತರಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳ ಡಿ. ಸುರೇಂದ್ರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಲ್ಕಿ ಅರಮನೆ ಮುಲ್ಕಿ ಸೀಮೆ ಅರಸರು ಎಂ. ದುಗ್ಗಣ್ಣ ಸಾವಂತ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀ ಚಂದ್ರನಾಥ ಸ್ವಾಮಿ ಬಸದಿ, ಕಳಸ ಜೀರ್ಣೋದ್ಧಾರ ಸಮಿತಿ, ಕಾಫಿ ಪ್ಲಾಂಟರ್, ಕೆ. ಸಿ. ಧರಣೇಂದ್ರ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು, ಶ್ರೀನಿವಾಸ ರೈ, ಕುಂಡಕೋಳಿ ,ಕೇಪು, ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ್ ಗಿಳಿಯಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ರಾತ್ರಿ 7:00ರಿಂದ ಕಲಾಮಯಂ, ಉಡುಪಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

- Advertisement -

Related news

error: Content is protected !!