Saturday, May 4, 2024
spot_imgspot_img
spot_imgspot_img

ಶ್ರೀ ಕ್ಷೇತ್ರ ಧರ್ಮಸ್ಥಳದ ಗೋಶಾಲೆಗೆ ಪುಂಗನೂರು ಹಸುಗಳ ಆಗಮನ

- Advertisement -G L Acharya panikkar
- Advertisement -

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಗೋಶಾಲೆಗೆ ಪುಂಗನೂರು ತಳಿಯ 5 ಹಸುಗಳ ಆಗಮನವಾಗಿದೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಗ್ರಾಮದ ಗೋದಾವರಿ ತೀರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಗೋಶಾಲೆಗೆ ಹಸುಗಳನ್ನು ತರಲಾಗಿದ್ದು, ಆಕರ್ಷಕ ಹಾಗೂ ಬೆಲೆಬಾಳುವ ಈ ತಳಿಯ ಹಸುವಿನ ಹಾಲನ್ನು ಶ್ರೀ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೆ ಬಳಕೆ ಮಾಡಲು ಕ್ಷೇತ್ರವು ಚಿಂತಿಸಿದೆ.

ಇದೀಗ ಶ್ರೀ ಕ್ಷೇತ್ರಕ್ಕೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಅನುಮತಿಯಂತೆ ಪುಂಗನೂರು ತಳಿಯ 2 ದನ ಅದರಲ್ಲಿ ಒಂದು ಹೆಣ್ಣು ಹಾಗೂ ಒಂದು ಗಂಡು ಕರು ಸಹಿತ ಒಂದು ಹೋರಿಯನ್ನು ತರಲಾಗಿದೆ. ಹಸುವಿಗೆ 4 ಲಕ್ಷ ರೂ. ಹಾಗೂ ಹೋರಿಗೆ 90 ಸಾವಿರ ರೂ. ನೀಡಲಾಗಿದೆ. ಕ್ಷೇತ್ರದ ಗೋಶಾಲೆಯಲ್ಲಿ ಇದೀಗ ಒಟ್ಟು 10 ಪುಂಗನೂರು ಹಸುಗಳಿದ್ದು, 7 ಗಿರ್‌ ತಳಿ ಸೇರಿ ಒಟ್ಟು 139 ಗೋವುಗಳಿವೆ.

- Advertisement -

Related news

error: Content is protected !!