- Advertisement -
- Advertisement -





ಸೌಹಾರ್ದ ರಿಕ್ಷಾ ಮಾಲಕ ಹಾಗೂ ಚಾಲಕರ ಸಂಘ (ರಿ) ಚಂದಳಿಕೆ ಕಂಬಳಬೆಟ್ಟು ಇದರ ಪ್ರಮಾಣ ಪತ್ರ ಬಿಡುಗಡೆ ಕಾರ್ಯಕ್ರಮ ಡಿ. 14 ರಂದು ಸಂಜೆ ಭಾರತ್ ಅಡಿಟೋರಿಯಂ ಚಂದಳಿಕೆಯಲ್ಲಿ ನಡೆಯಿತು.

ಸೌಹಾರ್ದ ರಿಕ್ಷಾ ಮಾಲಕ ಹಾಗೂ ಚಾಲಕರ ಸಂಘ (ರಿ) ಚಂದಳಿಕೆ ಕಂಬಳಬೆಟ್ಟು ಇದರ ಗೌರವಾಧ್ಯಕ್ಷರು ಉಮೇಶ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರು ಕರುಣಾಕರ ಗೌಡ ನಾಯ್ತೊಟ್ಟು, ಸಂಜೀವ ಪೂಜಾರಿ ಮಾಲಕರು ಭಾರತ್ ಅಡಿಟೋರಿಯಂ, ವಿಟ್ಲ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕರು ಪ್ರಕಾಶ್ ದೇವಾಡಿಗ, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರು ಅಶೋಕ್ ಕುಮಾರ್ ಶೆಟ್ಟಿ, ವಿರೋಧ ಪಕ್ಷದ ನಾಯಕ ಅಶ್ರಫ್, ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಪ್ರಮಾಣ ಪತ್ರ ಬಿಡುಗಡೆಗೊಳಿಸಿದರು.



ಈ ಸಂದರ್ಭದಲ್ಲಿ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸೌಹಾರ್ದ ರಿಕ್ಷಾ ಮಾಲಕ ಹಾಗೂ ಚಾಲಕರ ಸಂಘ (ರಿ) ಚಂದಳಿಕೆ ಕಂಬಳಬೆಟ್ಟು ಇದರ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.


- Advertisement -








