Sunday, July 19, 2026
spot_imgspot_img
spot_imgspot_img

ವಿಟ್ಲ: ರಾಷ್ಟೀಯ ಪಿನ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಪಡೆದ ಚರಿತ್

- Advertisement -
- Advertisement -

ವಿಟ್ಲ: 5 ನೇ ರಾಷ್ಟೀಯ ಪಿನ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಪಡೆದ ವಿಟ್ಲದ ಚರಿತ್, ಅಂಡರ್ ವಾಟರ್ ಸ್ಪೋರ್ಟ್ಸ್ ಪೆಡರೆಷನ್ ಆಫ್ ಇಂಡಿಯಾ ವತಿಯಿಂದ ಫಿಸಿಕಲ್ ಪೌಂಡೆ ಷನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಪಿನ್ ಸ್ವಿಮ್ಮಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಮಂಗಳೂರಿನ ಎಮ್ಮೆಕೆರೆ ಅಂತರ್ರಾಷ್ಟ್ರೀಯ ಈಜುಕೋಲದಲ್ಲಿ ಡಿಸೆಂಬರ್ 19 ರಿಂದ 22 ರವರೆಗೆ ನಡೆದ 5 ನೇ ರಾಷ್ಟ್ರೀಯ ಪಿನ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ 2025 ರಲ್ಲಿ ಚರಿತ್ ಅಮೀನ್ ಕೆ ಇವರು 50 ಮೀಟರ್ ಬೈ ಪಿನ್ ಸ್ವಿಮ್ಮಿಂಗ್ ನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.

ಇವರು ಪುತ್ತೂರಿನ ಬಾಲವನ ಈಜುಕೊಳದಲ್ಲಿ ಈಜು ನಿರ್ದೇಶಕರಾದ ಪಾರ್ಥ ವಾರಣಾಸಿ ಹಾಗೂ ತರಬೇತುದಾರಿಂದ ತರಬೇತಿ ಪಡೆಯುತ್ತಿದ್ದಾರೆ. ಇವರು ನವಂಬರ್ ತಿಂಗಳಿನಲ್ಲಿ ಮೈಸೂರು ನಲ್ಲಿ ನಡೆದ ಪ್ರೌಢಶಾಲಾ ರಾಜ್ಯಮಟ್ಟದ ಈಜುಸ್ಪರ್ಧೆ ಯಲ್ಲಿ 50 ಮೀಟರ್ ಬಟರ್ ಪ್ಲೈ ಯಲ್ಲಿ ಕಂಚಿನ ಪದಕ ಹಾಗೂ 4100 ಮೀಟರ್ ಮಿಡ್ಲೆ ರಿಲೆ ಹಾಗೂ 4100 ಮೀಟರ್ ಪ್ರಿಸ್ಟೈಲ್ ರಿಲೆ ದ. ಕ ತಂಡವನ್ನು ಪ್ರತಿನಿಧಿಸಿ ಬೆಳ್ಳಿಪದಕ ಗಳನ್ನು ಪಡೆದಿರುತ್ತಾರೆ. ವಿಟ್ಲ ಕಸಬ ಗ್ರಾಮದ ಕೊಪ್ಪಳ ನಿವಾಸಿಗಳಾದ ಚಂದ್ರಹಾಸ್ ಕೊಪ್ಪಳ ಮತ್ತು ಸೌಮ್ಯ ದಂಪತಿಗಳ ಪುತ್ರರಾದ ಚರಿತ್ ವಿಟ್ಲಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ 9 ನೇ ತರಗತಿ ವಿದ್ಯಾರ್ಥಿ.

- Advertisement -

Related news

error: Content is protected !!