Monday, July 20, 2026
spot_imgspot_img
spot_imgspot_img

ವಿಟ್ಲ: ವಿನೂತನ ಯುವಕ ಮಂಡಲ (ರಿ) ಬೊಳಂತಿಮೊಗರು ಪ.ಪಂ ಅಧ್ಯಕ್ಷ ಕರುಣಾಕರ ಗೌಡ ನಾಯ್ತೋಟ್ಟುರವರ ಸಹಕಾರದೊಂದಿಗೆ ವನಭೋಜನ ನದಿಗೆ ಅಣೆಕಟ್ಟು ನಿರ್ಮಾಣ

- Advertisement -
- Advertisement -

ವಿಟ್ಲ: ವಿನೂತನ ಯುವಕ ಮಂಡಲ (ರಿ) ಬೊಳಂತಿಮೊಗರು ವಿಟ್ಲ ಕಳೆದ 23 ವರ್ಷಗಳಿಂದ ಸಾಮಾಜಿಕವಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆಯು ಈ ಬಾರಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೋಟ್ಟು ಇವರ ಸಹಕಾರದೊಂದಿಗೆ 17 ನೇ ಡಿಸೆಂಬರ್ 2025 ರಂದು ವನಭೋಜನ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸುವ ಕೆಲಸವನ್ನು ಪೂರ್ಣಗೊಳಿಸಿದರು.

ಸುತ್ತಲಿನ ಪರಿಸರದ ಗ್ರಾಮಗಳ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ ಮತ್ತು ಹೊಸ ಸೇತುವೆಯ ನಿರ್ಮಾಣದ ಬಳಿಕ ಫೈಬರ್ ಶೀಟ್ ಬಳಸುವ ಮೂಲಕ ಈ ಆಣೆಕಟ್ಟು ನಿರ್ಮಿಸಲಾಗಿದೆ ಎಂದು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ 23ನೇ ವರ್ಷದ ಅಧ್ಯಕ್ಷ ವಿನೋದ್ ಶೆಟ್ಟಿ ನಡುವಡ್ಕ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!