- Advertisement -
- Advertisement -



ವಿಟ್ಲ: ಭಾರತ್ ಸ್ಕೌಟ್ಸ್ & ಗೈಡ್ ವಿಟ್ಠಲ ಪ್ರೌಢಶಾಲೆ ವಿಟ್ಲ ಮತ್ತು ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ, ದೇರಳಕಟ್ಟೆ ಮಂಗಳೂರು ಇವರ ಸಹಯೋಗದೊಂದಿಗೆ ಸ್ಕೌಟ್ & ಗೈಡ್ ವಿದ್ಯಾರ್ಥಿಗಳಿಗೆ ಸಿ ಪಿ ಆರ್ ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಸ್ಕೌಟ್ ಗೈಡ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ಸುದರ್ಶನ ಪಡಿಯಾರ್ ಉದ್ಘಾಟಿಸಿದರು. ವಿಟ್ಠಲ ಎಜುಕೇಶನ್ ಸೊಸೈಟಿ ಸಂಚಾಲಕ ರಾಧಾಕೃಷ್ಣ ನಾಯಕ್ ಸಭಾಧ್ಯಕ್ಷತೆ ವಹಿಸಿದ್ದರು. ಡಾ. ಶೃತಿ ಮತ್ತು ತಂಡದವರು ತರಬೇತಿ ನೀಡಿದರು.

ಅತಿಥಿಗಳಾಗಿ ಸ್ಕೌಟ್ ಗೈಡ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪ್ರತೀಪ್, ವಿಟ್ಠಲ ಎಜುಕೇಶನ್ ಸೊಸೈಟಿ ಸದಸ್ಯ ನಿತ್ಯಾನಂದ ನಾಯಕ್ ಇವರು ಭಾಗವಹಿಸಿದ್ದರು. ಸ್ಕೌಟ್ ಗೈಡ್ ಶಿಕ್ಷಕಿ ವೀಣಾ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ ಪ್ರಸ್ತಾವಿಸಿ ಸ್ವಾಗತಿಸಿದರು. ರಮೇಶ್ ಬಿ ಕೆ ವಂದಿಸಿದರು. ರಾಜಶೇಖರ ನಿರೂಪಿಸಿದರು.
- Advertisement -








